ವೈರಲ್ ಆಯ್ತು ಲೂಯಿಸ್ ವಿಟಾನ್ ಇಯರ್‌ಫೋನ್, ಇದ್ರ ಬೆಲೆಗೆ 2 ಐಫೋನ್ ಖರೀದಿಸಬಹುದು!

By Suvarna News  |  First Published Dec 20, 2023, 7:59 PM IST

ಲೂಯಿಸ್ ವಿಟಾನ್ ವಿಶ್ವದ ಅತ್ಯಂತ ದುಬಾರಿ ಹಾಗೂ ಜನಪ್ರಿಯ ಬ್ರ್ಯಾಂಡ್. ಲೂಯಿಸ್ ವಿಟಾನ್ ಬ್ರ್ಯಾಂಡ್ ಅಡಿ ಉಡುಪು, ಶೂ ಸೇರಿದಂತೆ ಹಲವು ಉತ್ಪನ್ನಗಳು ಲಭ್ಯವಿದೆ. ಇದೀಗ ಲೂಯಿಸ್ ವಿಟಾನ್ ಇಯರ್‌ಫೋನ್ ಬಿಡುಗಡೆ ಮಾಡಿದೆ. ಇದರ ಬೆಲೆಯಿಂದಾಗಿ ಈ ಇಯರ್‌ಫೋನ್ ಭಾರಿ ವೈರಲ್ ಆಗಿದೆ.
 


ನವದೆಹಲಿ(ಡಿ.20) ಸ್ಮಾರ್ಟ್‌ಫೋನ್, ಇಯರ್‌ಫೋನ್ ಎರಡೂ ಅವಿಭಾಜ್ಯ ಅಂಗವಾಗಿದೆ. ದಿನ ನಿತ್ಯದ ಬದುಕಿನಲ್ಲಿ ಇವರೆಡು ಇರಲೇಬೇಕು. ಮಾರುಕಟ್ಟೆಯಲ್ಲಿ ಹಲವು ಬಗೆಯ ಇಯರ್‌ಫೋನ್ ಲಭ್ಯವಿದೆ. ಕಡಿಮೆ ಬೆಲೆಯಿಂದ ದುಬಾರಿ ಬೆಲೆ ವರೆಗಿನ ಇಯರ್‌ಫೋನ್ ಲಭ್ಯವಿದೆ.  ಇದೀಗ ಜನಪ್ರಿಯ ಹಾಗೂ ದುಬಾರಿ ಬ್ರ್ಯಾಂಡ್ ಲೂಯಿಸ್ ವಿಟಾನ್ ಇಯರ್ ಫೋನ್ ಬಿಡುಗಡೆ ಮಾಡಿದೆ. ಈ ಬಿಡುಗಡೆ ಅಷ್ಟೇನು ಸದ್ದು ಮಾಡಿಲ್ಲ. ಆದರೆ ಇದರ ಬೆಲೆಯಿಂದ ಈ ಇಯರ್‌ಫೋನ್ ಭಾರಿ ವೈರಲ್ ಆಗಿದೆ. ಕಾರಣ ಇದರ ಬೆಲೆ  1,660 ಅಮೆರಿಕನ್ ಡಾಲರ್. ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 1.38 ಲಕ್ಷ ರೂಪಾಯಿ.

ಸೋನಿ, ಆ್ಯಪಲ್, ಸ್ಯಾಮ್ಸಂಗ್, ಒನ್‌ಪ್ಲಸ್ ಸೇರಿದಂತೆ ಹಲವು ಬ್ರ್ಯಾಂಡ್‌ಗಳು ಇಯರ್‌ಫೋನ್ ಮಾರಾಟ ಮಾಡುತ್ತಿದೆ. ಭಾರತದಲ್ಲೂ ಈ ಬ್ರ್ಯಾಂಡ್‌ಗಳು ಜನಪ್ರಿಯವಾಗಿದೆ. ಮಾರ್ಚ್ ತಿಂಗಳಲ್ಲಿ ಲೂಯಿಸ್ ವಿಟಾನ್ ಇಯರ್‌ಫೋನ್ ಬಿಡುಗಡೆ ಮಾಡಿತ್ತು. ಲೂಯಿಸ್ ವಿಟಾನ್ ಇಯರ್‌ಫೋನ್ ಜನಸಾಮಾನ್ಯರ ನಡುವೆ ಯಾವುದೇ ಸಂಚಲನ ಮೂಡಿಸಿರಲಿಲ್ಲ. ಇದೀಗ ಈ ಇಯರ್‌ಫೋನ್ ಬೆಲೆಯಿಂದಾಗಿ ಭಾರಿ ವೈರಲ್ ಆಗುತ್ತಿದೆ.

Tap to resize

Latest Videos

undefined

ಕಲ್ಲುಪ್ಪಿಗಿಂತ ಚಿಕ್ಕದಾದ ಲೂಯಿಸ್‌ ವಿಟಾನ್‌ ಬ್ಯಾಗ್‌ ಹರಾಜಿನಲ್ಲಿ 51 ಲಕ್ಷಕ್ಕೆ ಸೇಲ್‌!

ಅತ್ಯಾಕರ್ಷಕ ವಿನ್ಯಾಸ, ಅದ್ಭುತ ಸೌಂಡ್ ಕ್ವಾಲಿಟಿ ಹೊಂದಿರುವ ಲೂಯಿಸಿ ವಿಟಾನ್ ವೈಯರ್‌ಲೆಸ್ ಇಯರ್‌ಫೋನ್ ಖರೀದಿಸಲು 1.38 ಲಕ್ಷ ರೂಪಾಯಿ ನೀಡಬೇಕು. 5 ಬಣ್ಣಗಳಲ್ಲಿ ನೂತನ ಇಯರ್‌ಫೋನ್ ಲಭ್ಯವಿದೆ. ವಿನ್ಯಾಸ, ಬಣ್ಣ, ಸ್ಟೈನ್‌ಲೆಸ್ ಸ್ಟೀಲ್ ಫಿನಿಶಿಂಗ್ ಸೇರಿದಂತೆ ಹಲವು ಆಕರ್ಷಣೆ ಇದರಲ್ಲಿದೆ. ಇತರ ಇಯರ್‌ಫೋನ್‌ಗಳಲ್ಲಿರುವಂತೆ ಬ್ಲೂಟೂಥ್‌ ಮಲ್ಟಿಪಾಯಿಂಟ್ ಫೀಚರ್ ಹೊಂದಿದೆ. ಈ ಮೂಲಕ ಒಂದೇ ಸಮಯ ಹಲವು ಡಿವೈಸ್‌ಗೆ ಬ್ಲೂಟೂಥ್ ಸಂಪರ್ಕ ಮಾಡಬಹುದು. ಮತ್ತೊಂದು ವಿಶೇಷ ಅಂದರೆ ಒಂದು ಬಾರಿ ಚಾರ್ಜ್ ಮಾಡಿದರೆ 28 ಗಂಟೆ ಇಯರ್‌ಫೋನ್ ಬಳಕೆ ಮಾಡಬುಹುದು.  

 

 

 ಲೂಯಿಸ್ ವಿಟಾನ್ ಎಲ್ಲಾ ಉತ್ಪನ್ನಗಳ ಬೆಲೆ ಯಾವತ್ತೂ ದುಬಾರಿ. ಶ್ರೀಮಂತರ ನೆಚ್ಚಿನ ಬ್ರ್ಯಾಂಡ್ ಆಗಿರುವ ಲೂಯಿಸ್ ವಿಟಾನ್, ಹಲವು ಸೆಲೆಬ್ರೆಟಿಗಳು ಮುಗಿಬಿದ್ದು ಖರೀದಿಸುತ್ತಾರೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಭಾರತದಲ್ಲಿ ಲೂಯಿಸ್ ವಿಟಾನ್ ರಾಯಭಾರಿಯಾಗಿದ್ದಾರೆ. ಬಾಲಿವುಡ್ ಸೆಲೆಬ್ರೆಟಿಗಳು, ಉದ್ಯಮಿಗಳು ಸೇರಿದಂತೆ ಶ್ರೀಮಂತರು ಲೂಯಿಸ್ ವಿಟಾನ್ ಉತ್ಪನ್ನಗಳಲ್ಲಿ ಕಂಗೊಳುತ್ತಿರುವುದು ಈಗಾಗಲೇ ಭಾರಿ ಸುದ್ದಿಯಾಗಿತ್ತು. ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ಹಾರ್ದಿಕ್ ಪಾಂಡ್ಯ ಲೂಯಿಸ್ ವಿಟಾನ್ ಬ್ರಾಂಡ್ ಉತ್ಪನ್ನಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. 

80 ಸಾವಿರ ಮೌಲ್ಯದ ಐಷಾರಾಮಿ ಶೂ ಖರೀದಿಸಿದವನಿಗೆ ಸಂಕಷ್ಟ: ಕೋರ್ಟ್ ಮೊರೆ ಹೋದ ಗ್ರಾಹಕ
 

click me!