ಕಳೆದ ಕೆಲವು ವರ್ಷಗಳಿಂದ, ರಿಲಯನ್ಸ್ ಜಿಯೋ ಜನಸಾಮಾನ್ಯರನ್ನು ಪೂರೈಸಲು ಕೈಗೆಟುಕುವ ಡೇಟಾ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಜಿಯೋ ಪ್ರಸ್ತುತ ಕೇವಲ 250 ರೂ. ಅಡಿಯಲ್ಲಿ ಏರ್‌ಟೆಲ್‌ನಲ್ಲಿ ಸಿಗೋ ಪ್ಲಾನ್‌ಗಿಂತ ಹೆಚ್ಚು ಪ್ರಯೋಜನಗಳನ್ನು ನೀಡುತ್ತಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ಆಕಾಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿದೆ. ಕಂಪೆನಿಯು ಪ್ರಾರಂಭವಾದ ಕೆಲವೇ ವರ್ಷಗಳಲ್ಲಿ ಗಮನಾರ್ಹ ಸಾಧನೆಯನ್ನು ಸಾಧಿಸಿದೆ. ಭಾರತೀಯರು ಸ್ಮಾರ್ಟ್‌ಫೋನ್‌ಗಳನ್ನು ಬಳಸುವ ರೀತಿಯಲ್ಲೂ ಗಮನಾರ್ಹವಾಗಿ ಏರಿಕೆಯಾಗಿದೆ. ಕಳೆದ ಕೆಲವು ವರ್ಷಗಳಿಂದ, ರಿಲಯನ್ಸ್ ಜಿಯೋ ಜನಸಾಮಾನ್ಯರನ್ನು ಪೂರೈಸಲು ಕೈಗೆಟುಕುವ ಡೇಟಾ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಪ್ರಿಪೇಯ್ಡ್ ಯೋಜನೆಗಳಿಗೆ ಬಂದಾಗ, ರಿಲಯನ್ಸ್ ಜಿಯೋ ಪ್ರಸ್ತುತ ಮುಂಚೂಣಿಯಲ್ಲಿದೆ. ಇದು 250 ರೂ. ಅಡಿಯಲ್ಲಿ ಏರ್‌ಟೆಲ್‌ನಲ್ಲಿ ಸಿಗೋ ಪ್ಲಾನ್‌ಗಿಂತ ಹೆಚ್ಚು ಪ್ರಯೋಜನಗಳನ್ನು ನೀಡುತ್ತಿದೆ.
ಪ್ರಸ್ತುತ, ರಿಲಯನ್ಸ್ ಜಿಯೋ 250 ರೂ.ರ ಅಡಿಯಲ್ಲಿ 179 ರೂ. ಮತ್ತು 239 ರೂ. ಬೆಲೆಯ ಎರಡು ಉತ್ತಮ ಯೋಜನೆಗಳನ್ನು ಹೊಂದಿದೆ. ರಿಲಯನ್ಸ್ ಜಿಯೋದ 239 ರೂ.ಗಳ ಪ್ರಿಪೇಯ್ಡ್ ಯೋಜನೆಯು 28 ದಿನಗಳ ವರೆಗೆ ಚಾಲ್ತಿಯಲ್ಲಿರುತ್ತದೆ. ಇದು ಬಳಕೆದಾರರಿಗೆ ದಿನಕ್ಕೆ 1.5GB 5G ಡೇಟಾ, ಅನ್‌ಲಿಮಿಟೆಡ್ ಕರೆಗಳು ಮತ್ತು ದಿನಕ್ಕೆ 100 SMS ಒದಗಿಸುತ್ತದೆ. ಮಾತ್ರವಲ್ಲ JioTV, JioCinema ಮತ್ತು JioCloudಗೆ ಚಂದಾದಾರಿಕೆಗಳನ್ನು ಸಹ ನೀಡುತ್ತದೆ.
ಯುಎಸ್-ಯುಎಇ ಇನ್‌ಫ್ಲೈಟ್ ಸಂಪರ್ಕಕ್ಕೆ ಜಿಯೋದಿಂದ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್!
ರಿಲಯನ್ಸ್ ಜಿಯೋ 179 ರೂ. ರೀಚಾರ್ಜ್ ಯೋಜನೆಯು 24 ದಿನಗಳವರೆಗೆ ಮಾನ್ಯವಾಗಿರುತ್ತದೆ. ಇದು ಬಳಕೆದಾರರಿಗೆ ಅನ್‌ಲಿಮಿಟೆಡ್ ಕಾಲ್, ದಿನಕ್ಕೆ 1GB ಡೇಟಾ ಮತ್ತು ದಿನಕ್ಕೆ 100 SMS ಒದಗಿಸುತ್ತದೆ. ಮಾತ್ರವಲ್ಲ JioTV, JioCinema ಮತ್ತು JioCloud ಗೆ ಚಂದಾದಾರಿಕೆಗಳನ್ನು ಸಹ ನೀಡುತ್ತದೆ.
ಇನ್ನು ಏರ್‌ಟೆಲ್ ತನ್ನ 239 ರೂ. ಮತ್ತು 179 ರೂ. ಪ್ಲಾನ್‌ನಲ್ಲಿ ಏನು ನೀಡುತ್ತದೆ ಎಂಬ ಮಾಹಿತಿ ಇಲ್ಲಿದೆ. ಏರ್‌ಟೆಲ್‌ನ 239 ರೂಗಳ ಪ್ರಿಪೇಯ್ಡ್ ಯೋಜನೆಯು 24 ದಿನಗಳದ್ದಾಗಿದೆ. ಇದು ಬಳಕೆದಾರರಿಗೆ ಅನಿಯಮಿತ 5G ಡೇಟಾ, ದಿನಕ್ಕೆ 1 GB 5G ಡೇಟಾ ಅನ್‌ಲಿಮಿಟೆಡ್ ಕಾಲ್, 100 SMS ಒದಗಿಸುತ್ತದೆ. ಏರ್‌ಟೆಲ್‌ನ 179 ಏರ್‌ಟೆಲ್ 28 ದಿನಗಳ ವರೆಗೆ ಇರುತ್ತದೆ. ಇದು ಬಳಕೆದಾರರಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು 300 SMS ಜೊತೆಗೆ 2GB ಮಾಸಿಕ ಡೇಟಾವನ್ನು ನೀಡುತ್ತದೆ.
Work From Homeಗೆ ಇಲ್ಲಿವೆ ಉತ್ತಮ ಬ್ರಾಡ್‌ಬ್ಯಾಂಡ್ ಯೋಜನೆಗಳು: 300mbps ವರೆಗಿನ ಸ್ಪೀಡ್!