
ಕಿರಣಕುಮಾರ ವಿವೇಕವಂಶಿ
ನವದೆಹಲಿ (ಏ.08): 2ಎಯಿಂದ 5ಎಗೆ ತೆರೆದುಕೊಂಡ ಮೊಬೈಲ್ ಜಗತ್ತು ದಿನೇದಿನೇ ಹೊಸ ಅಚ್ಚರಿಗಳನ್ನು ಮಾನವ ಜಗತ್ತಿನೆದುರು ತೆರೆದಿಡುತ್ತಲೇ ಇದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಎಐ (ಕೃತಕ ಬುದ್ದಿಮತ್ತೆ) ಪಾದಾರ್ಪಣೆಯಿಂದಾಗಿ ಒಂದಿಲ್ಲೊಂದು ವಿನೂತನ ಆವಿಷ್ಕಾರಗಳು ಸದ್ದು ಮಾಡುತ್ತಲೇ ಇದ್ದು, ಇದೀಗ ಅಂತದ್ದೇನೂತನ ಮಾದರಿಯ ಹಲವು ವೈಶಿಷ್ಟ್ಯಗಳೊಂದಿಗೆ ಮೋಟೊರೋಲಾ ಮೊಬೈಲ್ ಮಾರುಕಟ್ಟೆಗೆ ಹೊಸತೊಂದು ಉತ್ಪನ್ನದ ಜೊತೆ ಬಂದಿದೆ. ಅದುವೇ ಎಐ ಹಾಗೂ ಕಲೆಯ ಸಮ್ಮಿಳಿತವಾದ 'ಮೋಟೋರೋಲಾ ಎಡ್ಜ್ 50 ಪ್ರೊ'.
ಭಾರತದ ಅತ್ಯುತ್ತಮ 5ಜಿ ಸ್ಮಾರ್ಟ್‌ಪೋನ್ ಬ್ರಾಂಡ್ ಆಗಿರುವ ಮೋಟೊರೋಲಾ ತನ್ನ ಅತ್ಯಂತ ನಿರೀಕ್ಷಿತ 'ಮೋಟೋರೋಲಾ ಎಡ್ಜ್ 50 ಪ್ರೊ' ಅನ್ನು ಭಾರತದಲ್ಲಿ ವಿಶ್ವದ ಮೊದಲ ಪ್ಯಾಂಟೋನ್ ಟೂ ಕಲರ್ ಕ್ಯಾಮೆರಾ ಮತ್ತು ಡಿಸ್‌ಪ್ಲೇಯೊಂದಿಗೆ ಬಿಡುಗಡೆ ಮಾಡಿದೆ. ಇದು ಮೋಟೊರೋಲಾ ಎಡ್ಜ್ 50 ಪ್ರೋ ಉತ್ಪನ್ನದ ಜಾಗತಿಕ ಮೊದಲ ಘೋಷಣೆಯಾಗಿದ್ದು, ಭಾರತದಲ್ಲಿ ಇದನ್ನು ಬಿಡುಗಡೆಗೊಳಿಸಲಾಗಿದೆ.
ಸೀರೆಯುಟ್ಟ ಬಂಗಾರದ ಗೊಂಬೆ.. ದೃಷ್ಟಿ ತೆಗೆಸಿಕೊಳ್ಳಿ: ರಾಧಿಕಾ ಪಂಡಿತ್ ಬ್ಯೂಟಿಗೆ ಮನಸೋತ ನೆಟ್ಟಿಗರು!
ಏ.3ರಂದು ದೆಹಲಿಯ ಹೋಟೆಲ್‌ವೊಂದರಲ್ಲಿ ನಡೆದ 'ಇಂಟೆಲಿಜೆನ್ಸ್ ಮೀಟ್ಸ್ ಆರ್ಟ್' ಶೀರ್ಷಿಕೆಯ ಕಾರ್ಯಕ್ರಮದಲ್ಲಿ ಹೊಸ ಮಾದರಿಯ ಪ್ರೀಮಿಯಂ ಸ್ಮಾರ್ಟ್‌ಪೋನ್ ಅನ್ನು ಮಾರುಕಟ್ಟೆಗೆ ಬಿಡಲಾಗಿದೆ. ಈ ವೇಳೆ ಮಾತನಾಡಿದ ಮೋಟೊರೋಲಾ ಕಾರ್ಯನಿರ್ವಾಹಕ ನಿರ್ದೇಶಕ ಪ್ರಶಾಂತ್ ಮಣಿ, ಈ ಸ್ಮಾರ್ಟ್‌ಪೋನ್ ತನ್ನ ಎಡ್ಜ್ ಫ್ರಾಂಚೈಸ್‌ಗೆ ಇತ್ತೀಚಿನ ಸೇರ್ಪಡೆಯಾಗಿದೆ. ಈ ಸ್ಮಾರ್ಟ್‌ಪೋನ್ ಕಲೆ ಮತ್ತು ತಂತ್ರಜ್ಞಾನದ ಸಮಾಗಮವಾಗಿದ್ದು, ಪ್ರೀಮಿಯಂ ಸ್ಮಾರ್ಟ್‌ಪೋನ್ ವಿಭಾಗದಲ್ಲಿ ಕ್ರಾಂತಿ ಮೂಡಿಸಲು ಸಿದ್ಧವಾಗಿದೆ ಎಂದು ತಿಳಿಸಿದರು.
ಲಭ್ಯತೆ ಎಲ್ಲಿ?: ಮೊಟೊರೊಲಾ ಎಡ್ಜ್ 50 ಪ್ರೊ ಏ.9ರಂದುಮಧ್ಯಾಹ್ನ 12 ಗಂಟೆಯಿಂದ ಪ್ಲಿಪ್‌ಕಾರ್ಟ್, ಮೊಟೊರೊಲಾ.ಇನ್ ಮತ್ತು ರಿಲಯನ್ಸ್ ಡಿಜಿಟಲ್ ಸೇರಿದಂತೆ ಪ್ರಮುಖ ಆನ್‌ಲೈನ್ ಪ್ಲಾಟ್‌ಫಾರ್ಮ್ ಹಾಗೂ ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಏ.8ರಂದು ಪ್ಲಿಪ್‌ಕಾರ್ಟ್ ಅರ್ಲಿ ಆಕೆಸ್ ಅವಕಾಶ ನೀಡಿದೆ.
ಬೆಲೆ ಎಷ್ಟು?: 8 ಜಿಬಿ ರಾಮ್ ಮತ್ತು 256ಜಿಬಿ ಸ್ಟೋರೇಜ್ ವೇರಿಯಂಟ್ (68 ಚಾರ್ಜ್ ಜೊತೆಗೆ) ಹೊಂದಿದ ಮೊಬೈಲ್ ದರ 231,999 ಹಾಗೂ 12ಜಿಬಿ ರಾಮ್ ಮತ್ತು 256ಜಿಬಿ ಸ್ಟೋರೇಜ್ ವೇರಿಯಂಟ್ (68 ಚಾರ್ಜ್‌ಜೊತೆಗೆ) ಹೊಂದಿದ ಮೊಬೈಲ್ ದರ 35,999 ಆಗಿದೆ.
ವಿಶೇಷತೆ ಏನು?: ಇದು ಪ್ರಪಂಚದ ಮೊದಲ ಎಐ ಚಾಲಿತ ಪ್ರೊ ಗ್ರೇಡ್ ಕ್ಯಾಮರಾ ಹೊಂದಿದ್ದು, ಪ್ಯಾಂಟೋನ್ ಮೂಲಕ ಮೌಲ್ವಿಕರಿಸಿದ ರಿಯಲ್‌ಲೈಫ್ ಬಣ್ಣಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ. ಟೂ ಕಲರ್ಸ್ ಮತ್ತು ಹೂಮನ್ ಸ್ಕಿನ್ ಟೋನ್‌ಗಳ ವ್ಯಾಪಕ ಶ್ರೇಣಿಯನ್ನು ಹೊಂದಿದ್ದು, 1.5ಓ ಟ್ರ ಕಲರ್‌ಪ್ಯಾಂಟೋನ್ ಮೌಲ್ವಿಕರಿಸಿದ 3ಈ ಕರ್ವ್ ಡಿಸ್‌ಪ್ಲೆ ಫೋನ್ ಆಗಿದೆ ಎಂದರು.
ಏನೆಲ್ಲಾ ಪೀಚರ್ಸ್ ಇದೆ ಗೊತ್ತಾ?: ಮೋಟೊರೋಲಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಶ್ರೀ ಟಿ.ಎಂ. ನರಸಿಂಹನ್ ಮಾತನಾಡಿ, ಮೋಟೊರೋಲಾ ಎಡ್ಜ್ 50 ಪ್ರೊ ಅನ್ನು ಮೆಟಲ್ ಪ್ರೇಮ್‌ಗಳ ಜೊತೆಗೆ ಸಿಲಿಕಾನ್ ವೇಗನ್ ಲೆದರ್ ಫಿನಿಶ್‌ನಲ್ಲಿ ಸುಂದರವಾಗಿ ರಚಿಸಲಾಗಿದ್ದು, ಮೂನ್‌ಲೈಟ್ ಪರ್ಲ್ ಫಿನಿಶ್‌ನಲ್ಲಿ ವಿಶ್ವದ ಪ್ರಥಮ ಹ್ಯಾಂಡ್ ಮೇಡ್ ವಿನ್ಯಾಸವನ್ನು ಸಹ ಹೊಂದಿದೆ. ಇದು ಶಕ್ತಿ ಯುತವಾದ ಸ್ಕ್ಯಾಪ್‌ಡ್ರಾಗನ್ 1 ಜೆನ್ 3 ಪ್ರೊಸೆಸರ್ ಹೊಂದಿದೆ ಎಂದರು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.