ಐಫೋನ್ 16 ಫೋನ್‌ಗಳ ವಿಚಾರದಲ್ಲಿ ಬಿಗ್ಗೆಸ್ಟ್ ನ್ಯೂಸ್ ಹೊರಬಿದ್ದಿದೆ. ಇದರ ಪ್ರಕಾರ, ಐಫೋನ್ 16ನ ಒಂದು ಮಾದರಿ ಹೊರತುಪಡಿಸಿ ಉಳಿದ ಎಲ್ಲಾ ಮಾಡೆಲ್‌ಗಳಲ್ಲಿ ಬ್ಯಾಟರಿ ಸಾಮರ್ಥ್ಯ ಗಣನೀಯವಾಗಿ ಏರಿಕೆಯಾಗಲಿದೆ.
ಬೆಂಗಳೂರು (ಏ.8): ಆಪಲ್ ಕಂಪನಿ ಐಫೋನ್ 16 ಸಿರೀಸ್ ಫೋನ್‌ಗಳಲ್ಲಿ ಪ್ರಮುಖ ಅಪ್‌ಗ್ರೇಡ್ ಮಾಡಲು ಮುಂದಾಗಿದೆ. ಇದರ ನಡುವೆ ಈ ಕುರಿತಾದ ಕೆಲವು ಮಾಹಿತಿಗಳು ಸೋರಿಕೆಯಾಗಿದ್ದು, ಐಫೋನ್ 16 ಫೋನ್‌ಗಳ ಬ್ಯಾಟರಿ ಸಾಮರ್ಥ್ಯದಲ್ಲಿ ಕಂಪನಿ ಗಣನೀಯವಾಗಿ ಏರಿಕೆ ಮಾಡಲಿದೆ ಎನ್ನಲಾಗಿದೆ. 2023ರಲ್ಲಿ ಬಿಡುಗಡೆಯಾದ ಐಫೋನ್‌ಗಳಿಗೆ ಹೋಲಿಸಿದರೆ, ಈ ವರ್ಷ ಬಿಡುಗಡೆಯಾಗಲಿರುವ ಐಫೋನ್ 16, ಐಫೋನ್ 16 ಪ್ರೋ ಮತ್ತು ಐಫೋನ್ 16 ಪ್ರೋ ಮ್ಯಾಕ್ಸ್ ಮಾಡೆಲ್‌ಗಳ ಬ್ಯಾಟರಿ ಸಾಮರ್ಥ್ಯದಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಾಣಲಿದೆ ಎಂದು ಟಿಪ್‌ಸ್ಟೆರ್ ತನ್ನ ವರದಿಯಲ್ಲಿ ತಿಳಿಸಿದೆ. ಆದರೆ, ಐಫೋನ್ 16 ಪ್ಲಸ್ ಮೊಬೈಲ್ ಮಾತ್ರ, ಐಫೋನ್ 15 ಪ್ಲಸ್ ಮೊಬೈಲ್‌ಗಿಂತ ಕಡಿಮೆ ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ವೈಬೋದಲ್ಲಿ ಐಫೋನ್ 16 ಸಿರೀಸ್ ಮೊಬೈಲ್‌ಗಳ ಬ್ಯಾಟರಿ ಸಾಮರ್ಥ್ಯಗಳ ಬಗ್ಗೆ ವರದಿಯನ್ನು ಟಿಪ್‌ಸ್ಟೆರ್ ತಿಳಿಸಿದೆ. ಲೀಕ್ ಆಗಿರುವ ಮಾಹಿತಿಯ ಪ್ರಕಾರ iPhone 16 ಪ್ರೋ ಮ್ಯಾಕ್ಸ್, 4,676mAh ಬ್ಯಾಟರಿ ಮತ್ತು ಐಫೋನ್ 16 ಪ್ರೋ, 3,355mAh ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದರ ನಡುವೆ ಐಫೋನ್ 16 ಫೋನ್ 3,561mAh ಬ್ಯಾಟರಿಯೊಂದಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂತಿಮವಾಗಿ, ಐಫೋನ್ 16 ಪ್ಲಸ್ 4,006mAh ಬ್ಯಾಟರಿಯನ್ನು ಹೊಂದಿರಲಿದೆ ಎನ್ನಲಾಗಿದೆ. ಸಾಮಾನ್ಯವಾಗಿ ಐಫೋನ್ ತನ್ನ ಹೊಸ ಮಾದರಿಯ ಫೋನ್‌ಗಳು ಬಿಡುಗಡೆ ಆಗುವವರೆಗೂ ಅದರ ಬ್ಯಾಟರಿ ಸಾಮರ್ಥ್ಯಗಳ ಬಗ್ಗೆ ಎಂದಿಗೂ ತಿಳಿಸೋದಿಲ್ಲ. ಕಳೆದ ವರ್ಷ ಬಿಡುಗಡೆಯಾದ ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೀ ಹಾಗೂ ಐಫೋನ್ 15 ಪ್ರೋ ಮ್ಯಾಕ್ಸ್ ಮೊಬೈಲ್‌ಗಳು ಕ್ರಮವಾಗಿ 3,367mAh, 4,383mAh, 3,290mAh ಮತ್ತು 4,422mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿತ್ತು. ಆದರೆ, ಸೋರಿಕೆಯಾಗಿರುವ ಮಾಹಿತಿಗಳ ಪ್ರಕಾರ, ಐಫೋನ್ 16 ತನ್ನ ಹಿಂದಿನ ಮೊಬೈಲ್‌ಗಿಂತ ಬ್ಯಾಟರಿ ಸಾಮರ್ಥ್ಯದಲ್ಲಿ ಶೇ. 5.8ರಷ್ಟು ಹೆಚ್ಚಳ ಕಂಡಿದ್ದರೆ, ಐಫೋನ್ 16 ಪ್ರೋನಲ್ಲಿ ಶೇ. 2ರಷ್ಟು ಬ್ಯಾಟರಿ ಹೆಚ್ಚಳವಾಗಿದೆ ಎನ್ನಲಾಗಿದೆ.
undefined
ಇನ್ನು ಐಫೋನ್ 16 ಪ್ರೀ ಮ್ಯಾಕ್ಸ್‌ನಲ್ಲಿ 4,676mAh ಬ್ಯಾಟರಿ ಸಾಮರ್ಥ್ಯ ಇರಲಿದ್ದು, ಐಫೋನ್ 15 ಪ್ರೋ ಮ್ಯಾಕ್ಸ್‌ನಲ್ಲಿದ್ದ 4,422mAh ಬ್ಯಾಟರಿಗಿಂತ ಶೇ. 5.7ರಷ್ಟು ಹೆಚ್ಚಳವಾಗಿದೆ. ಇನ್ನು ಐಫೋನ್ 16 ಪ್ಲಸ್‌ನಲ್ಲಿ 4,006mAh ಬ್ಯಾಟರಿ ಇರುವ ಸಾಧ್ಯತೆ ಇದೆ. ಇದು ಐಫೋನ್ 15 ಪ್ಲಸ್‌ನಲ್ಲಿ ಇರುವ 4,383mAh ಬ್ಯಾಟರಿಗಿಂತ ಶೇ. 8.6ರಷ್ಟು ಕಡಿಮೆ ಎನ್ನಲಾಗಿದೆ.
ಹೊಸ ಸೋರಿಕೆಯು ಐಫೋನ್ 16 ಮಾದರಿಗಳ ಬ್ಯಾಟರಿ ಸಾಮರ್ಥ್ಯವನ್ನು ಸೂಚಿಸಿದ Majin Bu (@MajinBuOfficial) ಹಿಂದಿನ ಸೋರಿಕೆಯನ್ನು ದೃಢೀಕರಿಸುತ್ತದೆ. ಇದು ನಿಜವಾಗಿ ಹೊರಹೊಮ್ಮಿದರೆ, ಇದು ಪ್ಲಸ್ ರೂಪಾಂತರಕ್ಕೆ ಗಮನಾರ್ಹವಾದ ಡೌನ್‌ಗ್ರೇಡ್ ಆಗಿರಲಿದೆ.
Flipkart Sale ಬಂಪರ್ ಆಫರ್, ಕೇವಲ 9900ಕ್ಕೆ ಸಿಗ್ತಿದೆ ಆ್ಯಪಲ್ ಐಫೋನ್ 12 ಮಿನಿ
Apple ಕಳೆದ ವರ್ಷದ iPhone 15 ಮಾದರಿಗಳಲ್ಲಿ ಪುನರ್ಭರ್ತಿ ಮಾಡಬಹುದಾದ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಅಳವಡಿಸಿಕೊಂಡಿದೆ. ಪ್ರೊ-ಅಲ್ಲದ ಮಾದರಿಗಳಲ್ಲಿನ ಬ್ಯಾಟರಿಯು ಒಂದೇ ಚಾರ್ಜ್‌ನಲ್ಲಿ 26 ಗಂಟೆಗಳವರೆಗೆ ವೀಡಿಯೊ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ, ಆದರೆ ಪ್ರೊ ಮಾದರಿಗಳಲ್ಲಿನ ಬ್ಯಾಟರಿಯು ಒಂದೇ ಚಾರ್ಜ್‌ನಲ್ಲಿ ಗರಿಷ್ಠ 29 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
ಐಫೋನ್ ಖರೀದಿಸಲು ಇದು ಸರಿಯಾದ ಸಮಯ, ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಕೇವಲ 8,249ಗೆ ಲಭ್ಯ