
ಉಜ್ಬೇಕಿಸ್ತಾನ್(ಜೂ.15) ಉಜ್ಬೇಕಿಸ್ತಾನ್ ಫುಟ್ಬಾಲ್ ತಂಡ ಐತಿಹಾಸಿಕ ಮೈಲಿಗಲ್ಲ ನಿರ್ಮಿಸಿದೆ. ಪ್ರತಿಷ್ಠಿತ ಫಿಫಾ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ. ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಉಜ್ಬೇಕಿಸ್ತಾನ 2026ರಲ್ಲಿ ಖತಾರ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಗೆ ಕ್ವಾಲಿಫೈ ಆಗಿದೆ. ಇದೇ ಮೊದಲ ಬಾರಿಗೆ ಉಜ್ಬೇಕಿಸ್ತಾನ್ ರಾಷ್ಟ್ರೀಯ ಫುಟ್ಬಾಲ್ ತಂಡ ಫಿಫಾ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದಿದೆ. ಹೀಗಾಗಿ ಈ ಐತಿಹಾಸಿಕ ಸಾಧನೆಗೆ ಕಾರಣರಾದ ಆಟಗಾರರಿಗೆ ಇದೀಗ ಭರ್ಜರಿ ಉಡುಗೊರೆ ನೀಡಲಾಗಿದೆ. ತಂಡದ ಪ್ರತಿಯೊಬ್ಬ ಆಟಗಾರ, ಸ್ಟಾಫ್, ಕೋಚ್ ಸೇರಿದಂತೆೆ ಇಡೀ ತಂಡಕ್ಕೆ ಹೊಚ್ಚ ಹೊಸ 40 ಕಾರು ಉಡುಗೊರೆಯಾಗಿ ನೀಡಲಾಗಿದೆ.
40 ಬಿವೈಡಿ ಕಾರು ಉಡುಗೊರೆ
ಫಿಫಾ ವಿಶ್ವಕಪ್ ಟೂರ್ನಿಗೆ ಉಜ್ಬೇಕಿಸ್ತಾನ ಅರ್ಹತೆ ಪಡೆಯುತ್ತಿದ್ದಂತೆ ಇತ್ತ ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಉಡುಗೊರೆ ಘೋಷಣೆಯಾಗಿದ್ದು ಮಾತ್ರವಲ್ಲ, ಮೈದಾನದಲ್ಲೇ ಕಾರು ಉಡುಗೊರೆಯಾಗಿ ನೀಡಲಾಗಿದೆ. ಬಿವೈಡಿ ಕಂಪನಿಯ ಎಲೆಕ್ಟ್ರಿಕ್ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ. ಆಟಗಾರರು, ಕೋಚ್, ಸ್ಟಾಫ್ ಸೇರಿದಂತೆ ಇಡೀ ತಂಡಕ್ಕೆ ಒಟ್ಟು 40 ಕಾರು ಉಡುಗೊರೆಯಾಗಿ ನೀಡಲಾಗಿದೆ.
ಭಾರತೀಯ ಕ್ರೀಡಾಪಟುಗಳ ಕುರಿತು ಭಾರಿ ಚರ್ಚೆ
ಉಜ್ಪೇಕಿಸ್ತಾನ ತಂಡ ಇದೇ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದಿದೆ. ಇದು ಅತ್ಯಂತ ಮಹತ್ವದ ಸಾಧನೆಯಾಗಿದೆ. ಆದರೆ ಈ ಸಾಧನೆಯನ್ನು ಉಜ್ಬೇಕಿಸ್ತಾನ ಸರ್ಕಾರ ಅಷ್ಟೇ ಉತ್ತಮವಾಗಿ ಪ್ರೋತ್ಸಾಹ ನೀಡಿದೆ. ಕಾರು ಉಡುಗೊರೆ ನೀಡಿ ಆಟಗಾರರಿಗೆ ಪ್ರೋತ್ಸಾಹ ನೀಡಲಾಗಿದೆ. ಆದರೆ ಭಾರತದಲ್ಲಿ ಕ್ರೀಡಾಪಟುಗಳಿಗೆ ಸೂಕ್ತ ಪ್ರೋತ್ಸಾಹ ಬೆಂಬಲ ಸಿಗುತ್ತಿಲ್ಲ. ಇತ್ತೀಚೆಗೆ ಕೋಕೋದಲ್ಲಿ ಐತಿಹಾಸಿಕ ಸಾಧನೆ ಮಾಡಿದ ಕರ್ನಾಟಕ ಕ್ರೀಡಾಪಟುಗಳಿಗೆ ಕೇವಲ 5 ಲಕ್ಷ ರೂ ಘೋಷಿಸಲಾಗಿತ್ತು. ಈ ಬಹುಮಾನ ಮೊತ್ತವನ್ನು ಕ್ರೀಡಾಪಟುಗಳು ತಿರಸ್ಕರಿಸಿದ್ದರು. ಹಲವು ಬಾರಿ ಭಾರತೀಯ ಕ್ರೀಡಾಪಟುಗಳಿಗೆ ಸೂಕ್ತ ಬೆಂಬಲ ಸಿಗದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಾಧ್ಯವಾಗದೇ ಹಿಂದಿರುಗಿದ ಉದಾಹರಣೆಗಳಿವೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆಯಾಗುತ್ತಿದೆ.
ಉಜ್ಬೇಕಿಸ್ತಾನ ಗ್ರೂಪ್‌ನಲ್ಲಿದ್ದ ಇರಾನ್ ಫಿಫಾ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದಿದೆ. ಇನ್ನು ಯುಎಇ ಹಾಗೂ ಖತಾರ್ ಫಿಫಾ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಲು ಹೋರಾಟ ಮುಂದುವರಿಸಿದೆ. 2026ರ ಫಿಫಾ ವಿಶ್ವಕಪ್ ಟೂರ್ನಿಗೆ ಅಮೆರಿಕ, ಕೆನಾಡ ಹಾಗೂ ಮೆಕ್ಸಿಕೋ ಆತಿಥ್ಯ ವಹಿಸಿದೆ. 2026ರ ಡೂನ್ 11 ರಿಂದ ಜುಲೈ 19ರ ವರೆಗೆ ಫಿಫಾ ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ಬಾರಿ 48 ರಾಷ್ಟ್ರೀಯ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಹೋರಾಟ ನಡೆಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.