ರೊನಾಲ್ಡೋ ಕ್ಲಬ್ ವರ್ಲ್ಡ್ ಕಪ್‌ನಲ್ಲಿ ಆಡ್ತಾರಾ? ಫಿಫಾ ಅಧ್ಯಕ್ಷರಿಂದ ಗುಡ್‌ ನ್ಯೂಸ್?

Published : May 25, 2025, 03:01 PM IST
Cristiano Ronaldo

ಸಾರಾಂಶ

ಫಿಫಾ ಅಧ್ಯಕ್ಷ ಜಿಯಾನ್ನಿ ಇನ್ಫಾಂಟಿನೋ, ರೊನಾಲ್ಡೋ ಅವರು ಕ್ಲಬ್ ವರ್ಲ್ಡ್ ಕಪ್‌ನಲ್ಲಿ ಆಡುವ ಸಾಧ್ಯತೆಯನ್ನು ಸೂಚಿಸಿದ್ದಾರೆ. ಅಲ್ ನಸರ್ ತಂಡ ಟೂರ್ನಿಗೆ ಅರ್ಹತೆ ಪಡೆಯದಿದ್ದರೂ, ರೊನಾಲ್ಡೋ ಬೇರೆ ತಂಡದಿಂದ ಆಡಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

ಬೆಂಗಳೂರು: ಕ್ರಿಸ್ಟಿಯಾನೊ ರೊನಾಲ್ಡೋ ಈ ವರ್ಷ ಅಮೆರಿಕದಲ್ಲಿ ನಡೆಯಲಿರುವ ಕ್ಲಬ್ ವರ್ಲ್ಡ್ ಕಪ್‌ನಲ್ಲಿ ಆಡುವ ಸಾಧ್ಯತೆಗಳ ಬಗ್ಗೆ ಫಿಫಾ ಅಧ್ಯಕ್ಷ ಜಿಯಾನ್ನಿ ಇನ್ಫಾಂಟಿನೋ ಮಹತ್ವದ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಸೌದಿ ಪ್ರೊ ಲೀಗ್‌ನ ಅಲ್ ನಸರ್ ತಂಡವು ಈ 32 ತಂಡಗಳ ವಿಸ್ತೃತ ಟೂರ್ನಿಗೆ ಅರ್ಹತೆ ಪಡೆಯಲಿಲ್ಲ. ಆದರೆ, ಕೆಲವು ವರದಿಗಳ ಪ್ರಕಾರ ಕ್ರಿಸ್ಟಿಯಾನೊ ರೊನಾಲ್ಡೋ ಇನ್ನೂ ಈ ಟೂರ್ನಿಯಲ್ಲಿ ಕಾಣಿಸಿಕೊಳ್ಳಬಹುದು ಎಂಬ ನಿರೀಕ್ಷೆ ಇದೆ.

ರೊನಾಲ್ಡೋಗೆ ಇನ್ನೂ ಅವಕಾಶವಿದೆಯೇ? ಇನ್ಫಾಂಟಿನೋ ಅವರು ಪ್ರಸಿದ್ಧ ಯೂಟ್ಯೂಬರ್ ಮತ್ತು ಸ್ಟ್ರೀಮರ್ IShowSpeed ಅವರೊಂದಿಗಿನ ಸಂದರ್ಶನದಲ್ಲಿ, ಲಿಯೊನೆಲ್ ಮೆಸ್ಸಿ ಅವರ ಇಂಟರ್ ಮೈಯಾಮಿ ತಂಡವು ಜೂನ್ 14ರಂದು ಆರಂಭದ ಪಂದ್ಯವನ್ನು ಆಡಲಿದೆ ಎಂದು ಹೇಳಿದರು. ಇದಾದ ಬಳಿಕ ಅವರು, "ರೊನಾಲ್ಡೋ ಕೂಡ ಈ ಟೂರ್ನಿಯಲ್ಲಿ ಯಾವುದೇ ತಂಡಕ್ಕಾಗಿಯಾದರೂ ಆಡಬಹುದು. ಈಗಾಗಲೇ ಕೆಲವು ಕ್ಲಬ್‌ಗಳೊಂದಿಗೆ ಚರ್ಚೆಗಳು ನಡೆಯುತ್ತಿವೆ. ಯಾವಾದರೂ ಕ್ಲಬ್ ಇದನ್ನು ನೋಡುತ್ತಿದ್ದರೆ ಮತ್ತು ರೊನಾಲ್ಡೋನನ್ನು ಕ್ಲಬ್ ವರ್ಲ್ಡ್ ಕಪ್‌ಗಾಗಿ ಕಾನ್‌ಟ್ರಾಕ್ಟ್ ಮಾಡಲು ಆಸಕ್ತಿಯಿದ್ದರೆ ಏನು ಬೇಕಾದರೂ ಆಗಬಹುದು, ನೋಡೋಣ." ಎಂದಿದ್ದಾರೆ.

ರೊನಾಲ್ಡೋ ಅವರಿಗೆ ಈಗ 40 ವರ್ಷವಾಗಿದ್ದರೂ, ಅವರ ಕಾಲ್ಚಳಕದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಈಗಲೂ ಅವರಲ್ಲಿ ಆಟವಾಡುವ ಶಕ್ತಿ ಇನ್ನೂ ಮಿಂಚುತ್ತಿದೆ. 2022ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್‌ನ್ನು ತೊರೆದ ನಂತರ ಅವರು ಅಲ್ ನಸರ್‌ಗೆ ಸೇರ್ಪಡೆಯಾಗಿದ್ದರು. ಅವರ ಒಪ್ಪಂದ ಈ ಜೂನ್ 30 ರಂದು ಅಂತ್ಯವಾಗುತ್ತಿದೆ.

ಹೊಸ ಶೈಲಿಯ ಕ್ಲಬ್ ವರ್ಲ್ಡ್ ಕಪ್! ಈ ವರ್ಷದ ಕ್ಲಬ್ ವರ್ಲ್ಡ್ ಕಪ್‌ನ್ನು ಮೊದಲ ಬಾರಿಗೆ ಬೇಸಿಗೆ ತಿಂಗಳಲ್ಲಿ (summer) ನಡೆಸಲಾಗುತ್ತಿದ್ದು, ಎಂಟುಕ್ಕೂ ಹೆಚ್ಚು ತಂಡಗಳ ಭಾಗವಹಿಸುವ ಮೊದಲ ಪ್ರಯತ್ನ ಇದಾಗಿದೆ. ಫಿಫಾ ಇದಕ್ಕಾಗಿಯೇ ಜೂನ್ 1 ರಿಂದ 10 ರವರೆಗೆ ವಿಶೇಷ ಟ್ರಾನ್ಸಪರ್ ವಿಂಡೋ (transfer window) ಘೋಷಿಸಿದೆ.

ಯಾವ ತಂಡಕ್ಕೆ ರೊನಾಲ್ಡೋಗೆ ಹೋಗಬಹುದು?
ಸ್ಪೇನ್‌ನ "Marca" ಪತ್ರಿಕೆ ವರದಿಯ ಪ್ರಕಾರ, ಇತ್ತೀಚೆಗೆ ಬ್ರೆಜಿಲ್ ಕ್ಲಬ್‌ ಒಂದು ರೊನಾಲ್ಡೋಗೆ ಆಫರ್ ನೀಡಿದೆಯಂತೆ. ಬ್ರೆಜಿಲ್‌ನ ಬೋಟಾಫೋಗೋ ತಂಡವು ಅರ್ಹತೆ ಪಡೆದ ನಾಲ್ಕು ತಂಡಗಳ ಪೈಕಿ ಒಂದಾಗಿದೆ. ಅವರ ಕೋಚ್ ರೆನಾಟೋ ಪೈವಾ ಈ ಬಗ್ಗೆ ತಮಾಷೆ ಮಾಡುತ್ತಾ, "ಕ್ರಿಸ್ಮಸ್ ಡಿಸೆಂಬರ್‌ನಲ್ಲಿ ಮಾತ್ರ ಬರುತ್ತದೆ. ಆದರೆ ರೊನಾಲ್ಡೋ ಬಂದ್ರೆ, ಅವರಂತಹ ತಾರೆಯನ್ನು ತಿರಸ್ಕರಿಸಲು ಸಾಧ್ಯವೇ ಇಲ್ಲ" ಎಂದು ಪ್ರತಿಕ್ರಿಯೆ ನೀಡಿದ್ದರು..

ಬೋಟಾಫೋಗೋ ತಂಡವು ಅಮೆರಿಕದ ಉದ್ಯಮಿ ಜಾನ್ ಟೆಕ್ಸ್ಟರ್ ಅವರ ಮಾಲಿಕತ್ವದಲ್ಲಿದೆ, ಅವರು ಇಂಗ್ಲೆಂಡ್‌ನ ಕ್ರಿಸ್ಟಲ್ ಪ್ಯಾಲೆಸ್ ಕ್ಲಬ್‌ನಲ್ಲಿಯೂ ಪಾಲುದಾರರಾಗಿದ್ದಾರೆ.

ಇತಿಹಾಸದ ಹಿನ್ನೆಲೆ ಕ್ರಿಸ್ಟಿಯಾನೊ ರೊನಾಲ್ಡೋ ರಿಯಲ್ ಮ್ಯಾಡ್ರಿಡ್‌ಗಾಗಿ ಒಟ್ಟು 4 ಬಾರಿ ಚಾಂಪಿಯನ್ಸ್ ಲೀಗ್ ಗೆದ್ದಿದ್ದಾರೆ. ನಂತರ ಅವರು ಯುವೆಂಟಸ್‌ಗೆ ಸೇರಿದ್ದರು. ಇನ್ನು ಈ ಎರಡು ಕ್ಲಬ್‌ಗಳು ಕೂಡ ಈ ವರ್ಷದ ಕ್ಲಬ್ ವರ್ಲ್ಡ್ ಕಪ್‌ಗೆ ಅರ್ಹತೆ ಪಡೆದಿವೆ.

ಮೆಸ್ಸಿ ಮತ್ತು ರೊನಾಲ್ಡೋ ನಡುವೆ ಕಳೆದ ದಶಕದವರೆಗೆ ಸಾಗಿದ ಪೈಪೋಟಿಯಲ್ಲಿ 2008 ರಿಂದ 2017 ರವರೆಗೆ ಬಾಲನ್ ಡಿ'ಒರ್ ಪ್ರಶಸ್ತಿಯನ್ನು ಇವರಿಬ್ಬರೇ ಹಂಚಿಕೊಂಡಿದ್ದರು. ಬಳಿಕ ಮೆಸ್ಸಿ ಮತ್ತೊಂದು ಗರಿ ಹೊಡೆದು 8ನೇ ಬಾರಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಇಂಟರ್ ಮೈಯಾಮಿ ಟೀಮ್ ಮೆಸ್ಸಿಯವರ ನೇತೃತ್ವದಲ್ಲಿ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, ಅವರ ಗುಂಪಿನಲ್ಲಿ ಈಜಿಪ್ಟ್‌ನ ಅಲ್ ಅಹ್ಲಿ, ಪೋರ್ಚುಗಲ್‌ನ ಪೋರ್ಟೋ ಮತ್ತು ಬ್ರೆಜಿಲ್‌ನ ಪಾಲ್ಮೇರಾಸ್ ತಂಡಗಳಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕ್ರಿಸ್ಟಿಯಾನೋ ರೊನಾಲ್ಡ್ ಭಾರತ ಭೇಟಿ ರದ್ದು: ತೆರೆಮರೆಯ ಹಿಂದಿನ ನಿಜವಾದ ಕಾರಣವೇನು?
ಫುಟ್ಬಾಲ್ ಇತಿಹಾಸದಲ್ಲಿ ಹೊಸ ವಿಶ್ವದಾಖಲೆ ಬರೆದ ಲಿಯೋನೆಲ್ ಮೆಸ್ಸಿ!