Super Cup Football: ಇಂದು ಬಿಎ​ಫ್‌ಸಿ vs ಒಡಿಶಾ ಫೈನ​ಲ್‌ ಫೈಟ್

By Naveen Kodase  |  First Published Apr 25, 2023, 11:10 AM IST

ಸೂಪರ್ ಕಪ್ ಫುಟ್ಬಾಲ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ
ಸೂಪರ್‌ ಕಪ್‌ ಫುಟ್ಬಾ​ಲ್‌ ಬೆಂಗ​ಳೂ​ರಿಗೆ 2ನೇ ಪ್ರಶಸ್ತಿ ಗುರಿ
ಪ್ರಶಸ್ತಿಗಾಗಿ ಬಿಎಫ್‌ಸಿ-ಒಡಿಶಾ ಎಫ್‌ಸಿ ನಡುವೆ ಫೈಟ್


ಕಲ್ಲಿ​ಕೋ​ಟೆ(ಏ.25): 3ನೇ ಆವೃತ್ತಿಯ ಸೂಪರ್‌ ಕಪ್‌ ಫುಟ್ಬಾಲ್‌ ಟೂರ್ನಿಯ ಫೈನಲ್‌ ಹಣಾ​ಹ​ಣಿಗೆ ವೇದಿಕೆ ಸಜ್ಜಾ​ಗಿದ್ದು, ಪ್ರಶ​ಸ್ತಿ​ಗಾಗಿ ಮಂಗ​ಳ​ವಾರ ಮಾಜಿ ಚಾಂಪಿ​ಯನ್‌ ಬೆಂಗ​ಳೂರು ಎಫ್‌ಸಿ ಹಾಗೂ ಒಡಿಶಾ ಎಫ್‌ಸಿ ತಂಡಗಳು ಸೆಣಸಲಿವೆ. ಇತ್ತೀ​ಚೆ​ಗಷ್ಟೇ ಇಂಡಿ​ಯನ್‌ ಸೂಪರ್‌ ಲೀಗ್‌​(ಐಎ​ಸ್‌​ಎಲ್‌)ನ ಫೈನ​ಲ್‌​ನಲ್ಲಿ ಸೋತು ಪ್ರಶಸ್ತಿ ಗೆಲ್ಲುವ ಅವಕಾಶ ತಪ್ಪಿ​ಸಿ​ಕೊಂಡಿದ್ದ ಬಿಎ​ಫ್‌ಸಿ ಈ ವರ್ಷದ ಮೊದಲ ಪ್ರಶಸ್ತಿ ಗೆಲ್ಲಲು ಎದುರು ನೋಡು​ತ್ತಿ​ದೆ.

ಗುಂಪು ಹಂತ​ದಲ್ಲಿ ‘ಎ’ ಗುಂಪಿ​ನ​ಲ್ಲಿದ್ದ ಬಿಎ​ಫ್‌ಸಿ ಆಡಿದ 3 ಪಂದ್ಯ​ಗ​ಳಲ್ಲಿ 1 ಗೆಲುವು, 1 ಡ್ರಾದೊಂದಿಗೆ 5 ಅಂಕ ಸಂಪಾ​ದಿಸಿ ಅಗ್ರ​ಸ್ಥಾ​ನಿ​ಯಾ​ಗಿತ್ತು. ಬಳಿಕ ಸೆಮಿ​ಫೈ​ನ​ಲ್‌​ನಲ್ಲಿ ಬಲಿಷ್ಠ ಜಮ್ಶೇ​ಡ್‌​ಪುರ ಎಫ್‌ಸಿ ತಂಡ​ವನ್ನು 2-0 ಅಂತ​ರ​ದಲ್ಲಿ ಸೋಲಿಸಿ ಪ್ರಶಸ್ತಿ ಸುತ್ತಿ​ಗೇ​ರಿದೆ.  ಅತ್ತ ‘ಬಿ’ ಗುಂಪಿ​ನಲ್ಲಿ 2 ಗೆಲು​ವು​ಗ​ಳೊಂದಿಗೆ ಅಗ್ರ​ಸ್ಥಾ​ನಿ​ಯಾ​ಗಿದ್ದ ಒಡಿಶಾ ಎಫ್‌ಸಿ, ಸೆಮೀ​ಸ್‌​ನಲ್ಲಿ ನಾರ್ಥ್‌ಈಸ್ಟ್‌ ಯುನೈಟೆಡ್‌ ವಿರುದ್ಧ 3-1 ಗೆಲುವು ಸಾಧಿಸಿತು. 2018ರಲ್ಲಿ ಚಾಂಪಿ​ಯನ್‌ ಆಗಿದ್ದ ಬಿಎ​ಫ್‌ಸಿ 2ನೇ ಫೈನಲ್‌ ಆಡು​ತ್ತಿ​ದ್ದರೆ, ಒಡಿ​ಶಾಗೆ ಇದು ಮೊದಲ ಫೈನ​ಲ್‌.

BENGALURU, THIS IS IT! ⚡

It's all or nothing for the Blues, as the Juggernauts stand between them and glory. 🏆

⏰ : 7 PM
📍 : EMS Stadium, Kozhikode
📺 : Fancode, Sony Sports ⚔️ pic.twitter.com/HaWxwwU950

— Bengaluru FC (@bengalurufc)

Tap to resize

Latest Videos

undefined

ಈ ಸೂಪರ್‌ ಕಪ್‌ ಫೈನಲ್ ಪಂದ್ಯದ ಕುರಿತಂತೆ ಮಾತನಾಡಿದ ಒಡಿಶಾ ಎಫ್‌ಸಿ ತಂಡದ ಕೋಚ್ ಸ್ಲಿಪ್ಪೊರ್ಡ್‌ ಮಿರಾಂಡ, " ನಮಗಿದು ಮತ್ತೊಂದು ಪಂದ್ಯವೆಂದೇ ಆಡುತ್ತೇವೆ. ಬಲಿಷ್ಠ ತಂಡದ ಎದುರು ಉತ್ತಮವಾಗಿ ಆಡಲು ಎದುರು ನೋಡುತ್ತಿದ್ದೇವೆ. ನಾವು ಮೊದಲ ಫೈನಲ್ ಪಂದ್ಯವನ್ನು ಆಡುತ್ತಿರುವುದರ ಬಗ್ಗೆ ಯಾವುದೇ ಒತ್ತಡಕ್ಕೆ ಒಳಗಾಗುವುದಿಲ್ಲ ಎಂದು ಹೇಳಿದ್ದಾರೆ.

ಎದುರಾಳಿ ಬೆಂಗಳೂರು ಎಫ್‌ಸಿ ತಂಡವು, ಈ ಋತುವಿನಲ್ಲಿ ಉತ್ತಮ ಪ್ರದರ್ಶನವನ್ನು ತೋರುತ್ತಾ ಬಂದಿದೆ. ಬೆಂಗಳೂರು ಎಫ್‌ಸಿ ತಂಡವು ಡುರಾಂಡ್ ಕಪ್ ಜಯಿಸಿದೆ. ಇದಷ್ಟೇ ಅಲ್ಲದೇ ಇತ್ತೀಚೆಗಷ್ಟೇ ಮುಕ್ತಾಯವಾದ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಎಟಿಕೆ ಮೋಹನ್ ಬಗಾನ್ ಎದುರು ಶೂಟೌಟ್‌ನಲ್ಲಿ ಮುಗ್ಗರಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

‘ಪೋ​ಡಿ​ಯಂನಿಂದ ಫುಟ್‌​ಪಾ​ತ್‌​ವ​ರೆಗೆ': ಫುಟ್‌​ಪಾ​ತ್‌ನಲ್ಲೇ ಮಲ​ಗಿದ ಒಲಿಂಪಿಕ್ಸ್‌ ಸಾಧ​ಕ​ರು!

ಇದೀಗ ಎರಡು ಬಲಿಷ್ಠ ತಂಡಗಳ ಮುಖಾಮುಖಿಗೆ ಫೈನಲ್‌ ವೇದಿಕೆ ಸಜ್ಜಾಗಿದೆ. ಎರಡು ತಂಡಗಳಲ್ಲೂ ಸಾಕಷ್ಟು ತಾರಾ ಆಟಗಾರರು ಕೂಡಿರುವುದರಿಂದ ಫುಟ್ಬಾಲ್ ಅಭಿಮಾನಿಗಳಿಗಿಂದು ಭರಪೂರ ಮನರಂಜನೆ ಸಿಗುವ ಸಾಧ್ಯತೆಯಿದೆ. ಒಂದು ಕಡೆ ಬೆಂಗಳೂರು ಎಫ್‌ಸಿ ತಂಡದಲ್ಲಿ ನಾಯಕ ಸುನಿಲ್ ಚೆಟ್ರಿ, ಜಾವಿ ಹೆರ್ನಾಂಡೀಜ್‌ ಹಾಗೂ ರಾಯ್ ಕೃಷ್ಣ ಅವರಂತಹ ಆಟಗಾರರಿದ್ದರೆ, ಡಿಯಾಗೊ ಮ್ಯುರಿಕೊ, ನಂದಕುಮಾರ್, ವಿಕ್ಟರ್ ರೋಡ್ರಿಗಜ್, ಜೆರ್ರಿ ಅವರಂತಹ ಆಟಗಾರರ ಬಲ ಒಡಿಶಾ ತಂಡಕ್ಕಿದೆ.

ಪಂದ್ಯ: ರಾತ್ರಿ 7ಕ್ಕೆ, 
ಪ್ರಸಾರ: ಸೋನಿ ಸ್ಪೋರ್ಟ್ಸ್‌/ಫ್ಯಾನ್‌ಕೋಡ್‌ ಆ್ಯಪ್‌

ಸೈಕ್ಲಿಂಗ್‌ ಸಂಸ್ಥೆಗೆ ಶಾಸ​ಕ ಪಂಕಜ್‌ ಸಿಂಗ್‌ ಅಧ್ಯ​ಕ್ಷ

ನವ​ದೆ​ಹ​ಲಿ: ಭಾರ​ತೀಯ ಸೈಕ್ಲಿಂಗ್‌ ಫೆಡ​ರೇ​ಷನ್‌(ಸಿ​ಎ​ಫ್‌​ಐ) ನೂತನ ಅಧ್ಯ​ಕ್ಷ​ರಾಗಿ ಕೇಂದ್ರ ರಕ್ಷಣಾ ಸಚಿವ ರಾಜ​ನಾಥ್‌ ಸಿಂಗ್‌ ಅವರ ಪುತ್ರ, ನೋಯ್ಡಾ ಶಾಸಕ ಪಂಕಜ್‌ ಸಿಂಗ್‌ ಅವಿ​ರೋಧವಾಗಿ ಆಯ್ಕೆ​ಯಾ​ಗಿ​ದ್ದಾರೆ. ಈ ಬಗ್ಗೆ ಸೋಮ​ವಾರ ವಾರ್ಷಿಕ ಸಭೆ​ಯಲ್ಲಿ ಘೋಷಣೆ ಮಾಡ​ಲಾ​ಯಿ​ತು. ಅಧ್ಯಕ್ಷ ಸ್ಥಾನಕ್ಕೆ ಪಂಕಜ್‌ ಮಾತ್ರ ನಾಮ​ಪತ್ರ ಸಲ್ಲಿ​ಸಿದ್ದು, ಇತರೆ ಸ್ಥಾನ​ಗ​ಳಿಗೂ ತಲಾ ಒಬ್ಬೊ​ಬ್ಬರೇ ಅರ್ಜಿ ಸಲ್ಲಿ​ಸಿ​ದ್ದರಿಂದ ಎಲ್ಲರೂ ಅವಿ​ರೋ​ಧ​ಯ​ವಾಗಿ ಆಯ್ಕೆ​ಯಾ​ಗಿ​ದ್ದಾ​ರೆ. ಪಂಕಜ್‌ ಈ ಮೊದಲು ಭಾರ​ತೀಯ ಫೆನ್ಸಿಂಗ್‌ ಸಂಸ್ಥೆ ಅಧ್ಯ​ಕ್ಷ​ರಾಗಿ ಕೆಲ ಕಾಲ ಕಾರ‍್ಯ​ನಿ​ರ್ವ​ಹಿ​ಸಿ​ದ್ದರು.

click me!