
ಮಂಜೇರಿ(ಏ.23): 3ನೇ ಆವೃತ್ತಿಯ ಸೂಪರ್ ಕಪ್ ಫುಟ್ಬಾಲ್ ಟೂರ್ನಿಯ 2ನೇ ಸೆಮಿಫೈನಲ್‌ನಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ವಿರುದ್ಧ ಒಡಿಶಾ ಎಫ್‌ಸಿ 3-1 ಗೋಲುಗಳ ಗೆಲುವು ಸಾಧಿಸಿತು. ಏಪ್ರಿಲ್ 25ರಂದು ನಡೆಯಲಿರುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಬೆಂಗಳೂರು ಎಫ್‌ಸಿ(ಬಿಎಫ್‌ಸಿ) ಹಾಗೂ ಒಡಿಶಾ ಎಫ್‌ಸಿ ತಂಡಗಳು ಸೆಣಸಲಿವೆ.
ಶನಿವಾರದ ಪಂದ್ಯದಲ್ಲಿ ಒಡಿಶಾ ಪರ 10, 63ನೇ ನಿಮಿಷಗಳಲ್ಲಿ ನಂದಕುಮಾರ್ ಶೇಖರ್, 86ನೇ ನಿಮಿಷದಲ್ಲಿ ಮಾರಿಸಿಯೋ ಗೋಲು ಬಾರಿಸಿದರು. 2ನೇ ನಿಮಿಷದಲ್ಲೇ ಜೋರ್ಡನ್ ಗೋಲು ಬಾರಿಸಿದ ಆರಂಭಿಕ ಮುನ್ನಡೆ ಒದಗಿಸಿದ ಹೊರತಾಗಿಯೂ ನಾಥ್‌ರ್‍ಈಸ್ಟ್ ತಂಡ ಮತ್ತೊಂದು ಗೋಲು ದಾಖಲಿಸಿ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ.
ಈ ಋತುವಿನಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ಹಾಗೂ ಒಡಿಶಾ ಎಫ್‌ಸಿ ತಂಡಗಳು ಈ ಪಂದ್ಯಕ್ಕೂ ಮುನ್ನ ಎರಡು ಬಾರಿ ಮುಖಾಮುಖಿಯಾಗಿದ್ದವು. ಎರಡೂ ಪಂದ್ಯಗಳಲ್ಲೂ ಒಡಿಶಾ ಗೆಲುವಿನ ನಗೆ ಬೀರಿತ್ತು. ಇದೀಗ ನಾರ್ಥ್‌ಈಸ್ಟ್ ತಂಡದ ಎದುರು ಒಡಿಶಾ ಈ ಸೀಸನ್‌ನಲ್ಲಿ ಹ್ಯಾಟ್ರಿಕ್ ಜಯಭೇರಿ ಸಾಧಿಸಿದೆ.
ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ತಂಡವು ಈಗಾಗಲೇ ಈ ಸೀಸನ್‌ನಲ್ಲಿ ಮೂರನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಫೈನಲ್‌ನಲ್ಲಿ ಒಡಿಶಾ ಎಫ್‌ಸಿ ತಂಡವನ್ನು ಮಣಿಸಿ ಸೂಪರ್ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.
ಆರ್ಚರಿ ವಿಶ್ವಕಪ್: 2 ಚಿನ್ನ ಗೆದ್ದ ಭಾರತ
ಅಂತಾಲ್ಯ(ಟರ್ಕಿ): ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ ಮೊದಲ ಹಂತದಲ್ಲಿ ಭಾರತ ಶನಿವಾರ ಎರಡು ಚಿನ್ನದ ಪದಕಗಳನ್ನು ಜಯಿಸಿತು. ಮಿಶ್ರ ಕಾಂಪೌಂಡ್ ವಿಭಾಗದ ಫೈನಲ್‌ನಲ್ಲಿ ಜ್ಯೋತಿ ಸುರೇಖಾ ಹಾಗೂ ಓಜಸ್ ದಿಯೋತಲೆ ಚೈನೀಸ್ ತೈಪೆ ಜೋಡಿ ವಿರುದ್ಧ 159-154 ಅಂತರದಲ್ಲಿ ಜಯಿಸಿ ಚಿನ್ನದ ಪದಕ ಹೆಕ್ಕಿತು.
IPL 2023 ವಾಂಖೇಡೆಯಲ್ಲಿ ಸಚಿನ್ ತೆಂಡುಲ್ಕರ್ ಭರ್ಜರಿ ಹುಟ್ಟುಹಬ್ಬ ಆಚರಣೆ!
ಕೇವಲ 1 ಅಂಕದಿಂದ ವಿಶ್ವ ದಾಖಲೆ ತಪ್ಪಿಸಿಕೊಂಡ ಈ ಜೋಡಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟಿತು. ಬಳಿಕ ಮಹಿಳೆಯರ ಕಾಂಪೌಂಡ್ ವೈಯಕ್ತಿಕ ವಿಭಾಗದಲ್ಲಿ ಜ್ಯೋತಿ ಚಿನ್ನ ಗೆದ್ದರು. ಫೈನಲ್‌ನಲ್ಲಿ ಹಾಲಿ ವಿಶ್ವ ನಂ.1 ಬ್ರಿಟನ್‌ನ ಎಲ್ಲಾ ಗಿಬ್ಸನ್ ವಿರುದ್ಧ 148-146 ಅಂತರದಲ್ಲಿ ಗೆದ್ದರು. ಇದು ಜ್ಯೋತಿಗೆ ವಿಶ್ವಕಪ್‌ನಲ್ಲಿ ಮೊದಲ ಚಿನ್ನದ ಪದಕ.
ಭಾರತದಲ್ಲಿ ಮೊದಲ ಬಾರಿ ಅಂತಾರಾಷ್ಟ್ರೀಯ ಸರ್ಫ್ ಕೂಟ
ಚೆನ್ನೈ: ಇದೇ ಮೊದಲ ಬಾರಿಗೆ ವಿಶ್ವ ಸರ್ಫ್ ಲೀಗ್(ಡಬ್ಲ್ಯುಎಸ್ಎಲ್) ಭಾಗವಾದ ಅಂತಾರಾಷ್ಟ್ರೀಯ ಮುಕ್ತ ಸರ್ಫ್ ಚಾಂಪಿಯನ್ಶಿಪ್ ಆತಿಥ್ಯ ಹಕ್ಕು ಭಾರತಕ್ಕೆ ಲಭಿಸಿದ್ದು, ತಮಿಳುನಾಡಿದ ಮಹಾಬಲಿಪುರಂನಲ್ಲಿ ಆಗಸ್ಟ್ 14ರಿಂದ 20ರ ವರೆಗೆ ಕೂಟ ನಡೆಯಲಿದೆ. ಇದನ್ನು ತಮಿಳುನಾಡು ಕ್ರೀಡಾ ಸಚಿವ ಉಧಯನಿಧಿ ಸ್ಟಾಲಿನ್ ಖಚಿತಪಡಿಸಿದ್ದಾರೆ.
ಕೂಟದಲ್ಲಿ 12ರಿಂದ 14 ದೇಶಗಳ ಸುಮಾರು 100ರಷ್ಟುಸರ್ಫರ್ಗಳು ಪಾಲ್ಗೊಳ್ಳಲಿದ್ದಾರೆ. ಭಾರತದ 10 ಮಂದಿ ಸರ್ಫರ್ಗಳು ಕೂಟಕ್ಕೆ ವೈಲ್ಡ್ ಕಾರ್ಡ್ ಪ್ರವೇಶ ಪಡೆಯಲಿದ್ದಾರೆ ಎಂದು ಅವರು ತಿಳಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.