ಸೂಪರ್‌ ಕಪ್‌ ಫುಟ್ಬಾಲ್: ಇಂದು ಬಿಎ​ಫ್‌​ಸಿ vs ಜೆಎ​ಫ್‌ಸಿ ಸೆಮಿ ಕದನ

By Kannadaprabha News  |  First Published Apr 21, 2023, 11:21 AM IST

ಸೂಪರ್‌ ಕಪ್‌ ಫುಟ್ಬಾಲ್ ಟೂರ್ನಿಯ ಸೆಮಿಫೈನಲ್‌ಗೆ ಕ್ಷಣಗಣನೆ
ಸೆಮೀಸ್‌ನಲ್ಲಿ ಬಿಎಫ್‌ಸಿ ಹಾಗೂ ಜಮ್ಶೇ​ಡ್‌​ಪುರ ಎಫ್‌ಸಿ ಫೈಟ್
ಎರಡನೇ ಬಾರಿಗೆ ಫೈನಲ್‌ಗೇರುವ ವಿಶ್ವಾಸದಲ್ಲಿ ಬೆಂಗಳೂರು ಎಫ್‌ಸಿ


ಕಲ್ಲಿ​ಕೋ​ಟೆ(ಏ.21): 3ನೇ ಆವೃತ್ತಿಯ ಸೂಪರ್‌ ಕಪ್‌ ಫುಟ್ಬಾಲ್‌ ಟೂರ್ನಿಯ ಸೆಮಿ​ಫೈ​ನ​ಲ್‌​ನಲ್ಲಿ ಮಾಜಿ ಚಾಂಪಿ​ಯನ್‌ ಬೆಂಗ​ಳೂರು ಎಫ್‌ಸಿ ತಂಡ ಶುಕ್ರ​ವಾರ ಜಮ್ಶೇ​ಡ್‌​ಪುರ ಎಫ್‌ಸಿ ವಿರುದ್ಧ ಸೆಣ​ಸಾ​ಡ​ಲಿದ್ದು, 2ನೇ ಬಾರಿ ಫೈನಲ್‌ ಪ್ರವೇ​ಶಿ​ಸುವ ನಿರೀ​ಕ್ಷೆ​ಯ​ಲ್ಲಿದೆ. 

ಗುಂಪು ಹಂತ​ದಲ್ಲಿ ‘ಎ’ ಗುಂಪಿ​ನ​ಲ್ಲಿದ್ದ ಬಿಎ​ಫ್‌ಸಿ ಆಡಿದ 3 ಪಂದ್ಯ​ಗ​ಳಲ್ಲಿ 1 ಗೆಲುವು, 1 ಡ್ರಾದೊಂದಿಗೆ 5 ಅಂಕ ಸಂಪಾ​ದಿಸಿ ಅಗ್ರ​ಸ್ಥಾ​ನಿ​ಯಾ​ಗಿತ್ತು. ನಿರ್ಣಾ​ಯಕ ಕೊನೆ ಪಂದ್ಯ​ದಲ್ಲಿ ಬದ್ಧ​ವೈರಿ ಕೇರಳ ಬ್ಲಾಸ್ಟ​ರ್ಸ್‌ ತಂಡ​ವನ್ನು ಟೂರ್ನಿ​ಯಿಂದ ಹೊರ​ಗಟ್ಟಿ ಅಂತಿಮ 4ರ ಘಟ್ಟಪ್ರವೇ​ಶಿ​ಸಿದೆ. ಮತ್ತೊಂದೆಡೆ ‘ಸಿ’ ಗುಂಪಿ​ನ​ಲ್ಲಿದ್ದ ಜಮ್ಶೇ​ಡ್‌​ಪುರ ಎಲ್ಲಾ 3 ಪಂದ್ಯ​ಗ​ಳಲ್ಲೂ ಗೆದ್ದಿದ್ದು, ಅಜೇಯ ಓಟ ಮುಂದು​ವ​ರಿ​ಸಿ ಟೂರ್ನಿ​ಯಲ್ಲಿ ಮೊದಲ ಬಾರಿ ಫೈನ​ಲ್‌​ಗೇ​ರುವ ತವ​ಕ​ದ​ಲ್ಲಿದೆ.

Latest Videos

undefined

ಪಂದ್ಯ: ರಾತ್ರಿ 7ಕ್ಕೆ, ಪ್ರಸಾರ: ಸೋನಿ ಸ್ಪೋರ್ಟ್ಸ್‌/ಫ್ಯಾನ್‌ಕೋಡ್‌ ಆ್ಯಪ್‌

ಆರ್ಚರಿ ವಿಶ್ವಕಪ್‌: ಫೈನ​ಲ್‌ ತಲು​ಪಿದ ರೀಕರ್ವ್‌ ತಂಡ

ಅಂಟಾ​ಲ್ಯ(ಟ​ರ್ಕಿ​): ಇಲ್ಲಿ ನಡೆ​ಯು​ತ್ತಿ​ರುವ ಆರ್ಚರಿ ವಿಶ್ವ​ಕ​ಪ್‌​ನಲ್ಲಿ ಭಾರತ ಪುರು​ಷರ ರೀರ್ಕವ್‌ರ್‍ ತಂಡ ಫೈನ​ಲ್‌ಗೆ ಲಗ್ಗೆ ಇಟ್ಟಿದ್ದು, 9 ವರ್ಷಗಳಲ್ಲಿ ಮೊದಲ ಬಾರಿಗೆ ಫೈನಲ್‌ಗೇರಿದ ಸಾಧನೆ ಮಾಡಿದೆ. ಮೊದಲ ಸುತ್ತಿ​ನಲ್ಲಿ ಬೈ ಪಡೆ​ದಿದ್ದ ಅತನು ದಾಸ್‌, ಧೀರಜ್‌, ತರು​ಣ್‌​ದೀಪ್‌ ರೈ ಅವ​ರ​ನ್ನೊ​ಳ​ಗೊಂಡ ತಂಡ ಬಳಿಕ ಜಪಾನ್‌ ವಿರುದ್ಧ 5-4ರಿಂದ ಜಯ​ಗ​ಳಿ​ಸಿ​ದರೆ, ಚೈನೀಸ್‌ ತೈಪೆ ಹಾಗೂ ನೆದ​ರ್‌​ಲೆಂಡ್‌್ಸ ವಿರು​ದ್ಧ ತಲಾ 6-2 ಅಂತ​ರ​ದಲ್ಲಿ ಗೆಲುವು ಸಾಧಿ​ಸಿತು. 

RCB ಈ ಸ್ಟಾರ್ IPL ಆಟಗಾರನನ್ನು ಕೈಬಿಟ್ಟಿದ್ದೇಕೆಂದು ನನಗಂತೂ ಅರ್ಥವಾಗಿಲ್ಲ: ಕೆವಿನ್ ಪೀಟರ್‌ಸನ್‌..!

ಫೈನ​ಲ್‌​ನಲ್ಲಿ ಭಾನು​ವಾರ ಚೀನಾ ವಿರುದ್ಧ ಸೆಣ​ಸಾ​ಡ​ಲಿದ್ದು, 13 ವರ್ಷ​ಗ​ಳಲ್ಲೇ ಮೊದಲ ಬಾರಿ ಚಿನ್ನ ಗೆಲ್ಲುವ ನಿರೀ​ಕ್ಷೆ​ಯ​ಲ್ಲಿದೆ. 2010ರಲ್ಲಿ ಭಾರತ ಪುರು​ಷರ ರೀಕ​ರ್ವ್‌ ತಂಡ ಕೊನೆ ಬಾರಿ ಶಾಂಘೈ​ನಲ್ಲಿ ನಡೆ​ದಿದ್ದ ವಿಶ್ವ​ಕ​ಪ್‌​ನಲ್ಲಿ ಚಿನ್ನದ ಪದಕ ಜಯಿ​ಸಿತ್ತು. 2014ರಲ್ಲಿ ಕೊನೆ ಬಾರಿ ಫೈನ​ಲ್‌​ನಲ್ಲಿ ಆಡಿತ್ತು.

ಫ್ರೆಂಚ್‌ ಓಪನ್‌ ಟೆನಿ​ಸ್‌: ರಾಫೆಲ್‌ ನಡಾಲ್‌ ಅನುಮಾನ!

ಮ್ಯಾಡ್ರಿ​ಡ್‌: ಸೊಂಟದ ಗಾಯ​ದಿಂದ ಇನ್ನೂ ಚೇತ​ರಿ​ಸಿ​ಕೊ​ಳ್ಳದ 22 ಗ್ರ್ಯಾನ್‌ಸ್ಲಾಂ ಪ್ರಶ​ಸ್ತಿ​ಗಳ ಒಡೆಯ, ಸ್ಪೇನ್‌ನ ರಾಫೆಲ್‌ ನಡಾ​ಲ್‌ ಮೇ 28ರಿಂದ ಆರಂಭ​ವಾ​ಗ​ಲಿ​ರು​ವ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ​ಯಲ್ಲಿ ಆಡು​ವುದು ಅನು​ಮಾನ ಎನಿ​ಸಿದೆ. ದೀರ್ಘ ಕಾಲ​ದಿಂದ ನಡಾಲ್‌ ಸೊಂಟದ ಗಾಯ​ದಿಂದ ಬಳ​ಲು​ತ್ತಿದ್ದು, ಜನ​ವ​ರಿ​ಯಿಂದ ಆಸ್ಪ್ರೇ​ಲಿ​ಯನ್‌ ಓಪನ್‌ನಲ್ಲಿ 2ನೇ ಸುತ್ತಿ​ನಲ್ಲಿ ಸೋತ ಬಳಿಕ ಯಾವುದೇ ಸ್ಪರ್ಧಾ​ತ್ಮಕ ಟೂರ್ನಿಗಳಲ್ಲಿ ಆಡಿಲ್ಲ. ಅವರು ಮುಂದಿನ ವಾರ ಆರಂಭ​ವಾ​ಗ​ಲಿ​ರುವ ಮ್ಯಾಡ್ರಿಡ್‌ ಓಪ​ನ್‌​ನಿಂದಲೂ ಹೊರ​ಗು​ಳಿ​ಯ​ಲಿದ್ದು, ಫ್ರೆಂಚ್‌ ಓಪ​ನ್‌ಗೂ ಮುನ್ನ ಸಂಪೂರ್ಣ ಫಿಟ್‌ ಆಗುವ ಸಾಧ್ಯತೆ ಕಡಿಮೆ ಎಂದು ವರ​ದಿ​ಯಾ​ಗಿದೆ.

click me!