ಸೂಪರ್‌ ಕಪ್‌ ಫುಟ್ಬಾಲ್‌: ಇಂದು ಬಿಎ​ಫ್‌ಸಿ - ಕೇರಳ ಬ್ಲಾಸ್ಟ​ರ್ಸ್‌ ಫೈಟ್

By Kannadaprabha News  |  First Published Apr 16, 2023, 10:26 AM IST

ಮೂರನೇ ಆವೃತ್ತಿಯ ಸೂಪರ್‌ ಕಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ಬಿಎಫ್‌ಸಿ-ಕೇರಳ ಮುಖಾಮುಖಿ
ಐಎಸ್‌ಎಲ್‌ ಪ್ಲೇ-ಆಫ್‌ ಪಂದ್ಯದ ಬಳಿಕ ಉಭಯ ತಂಡ​ಗಳು ಮುಖಾಮುಖಿಯಾಗಿದ್ದವು
ವಿವಾದದಲ್ಲಿ ಅಂತ್ಯವಾದ ಬಳಿಕ ಮತ್ತೊಮ್ಮೆ ಉಭಯ ತಂಡಗಳು ಸೆಣಸಾಟ


ಮಂಜೇ​ರಿ​(​ಏ.16): 3ನೇ ಆವೃತ್ತಿಯ ಸೂಪರ್‌ ಕಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ಸೆಮಿ​ಫೈ​ನ​ಲ್‌ ಪ್ರವೇ​ಶಿ​ಸುವ ನಿರೀ​ಕ್ಷೆ​ಯ​ಲ್ಲಿ​ರುವ ಬೆಂಗ​ಳೂರು ಎಫ್‌ಸಿ ಭಾನು​ವಾರ ‘ಎ’ ಗುಂಪಿನ ನಿರ್ಣಾ​ಯಕ ಕೊನೆ ಪಂದ್ಯ​ದಲ್ಲಿ ಬದ್ಧ​ವೈರಿ ಕೇರಳ ಬ್ಲಾಸ್ಟ​ರ್ಸ್‌ ವಿರುದ್ಧ ಸೆಣ​ಸಾ​ಡ​ಲಿದೆ. ವಿವಾದಿತ ಐಎಸ್‌ಎಲ್‌ ಪ್ಲೇ-ಆಫ್‌ ಪಂದ್ಯದ ಬಳಿಕ ಉಭಯ ತಂಡ​ಗಳು ಮೊದಲ ಬಾರಿ ಮುಖಾಮುಖಿಯಾಗು​ತ್ತಿದ್ದು, ಭಾರೀ ಕುತೂ​ಹಲ ಮೂಡಿ​ಸಿದೆ. 

ಬಿಎ​ಫ್‌ಸಿ ಆಡಿದ 2 ಪಂದ್ಯ​ಗ​ಳಲ್ಲಿ 1 ಡ್ರಾ, 1 ಗೆಲು​ವಿ​ನೊಂದಿಗೆ 4 ಅಂಕ ಸಂಪಾ​ದಿಸಿ ಅಗ್ರ​ಸ್ಥಾ​ನ​ದ​ಲ್ಲಿದ್ದು, ಅಷ್ಟೇ ಅಂಕ ಹೊಂದಿ​ರುವ ಶ್ರೀನಿಧಿ ಡೆಕ್ಕನ್‌ 2ನೇ ಸ್ಥಾನ, ಕೇರಳ ಬ್ಲಾಸ್ಟ​ರ್ಸ್ 3 ಅಂಕ​ದೊಂದಿಗೆ 3ನೇ ಸ್ಥಾನ​ದ​ಲ್ಲಿದೆ. ಹೀಗಾಗಿ ಬಿಎ​ಫ್‌ಸಿ ಸೆಮೀ​ಸ್‌​ಗೇ​ರ​ಬೇ​ಕಿ​ದ್ದ​ರೆ ಗೆಲ್ಲ​ಲೇ​ಬೇ​ಕಾದ ಅನಿ​ವಾ​ರ್ಯತೆ ಇದೆ.

Tap to resize

Latest Videos

undefined

ಪಂದ್ಯ: ರಾತ್ರಿ 8.30ಕ್ಕೆ
ಪ್ರಸಾರ: ಸೋನಿ ಸ್ಪೋರ್ಟ್ಸ್‌/ಫ್ಯಾನ್‌ಕೋಡ್‌ ಆ್ಯಪ್‌

ಇಂಡಿ​ಯನ್‌ ಗ್ರ್ಯಾನ್‌ ಪ್ರಿ: ಮನುಗೆ ಜಾವೆ​ಲಿನ್‌ ಚಿನ್ನ

ಬೆಂಗ​ಳೂ​ರು: ಇಂಡಿಯನ್‌ ಗ್ರ್ಯಾನ್‌ ಪ್ರಿ-4 ಅಥ್ಲೆಟಿಕ್ಸ್‌ ಕೂಟದಲ್ಲಿ ಕರ್ನಾ​ಟಕದ ಮನು ಡಿ.ಪಿ. ಹಾಗೂ ​ರಾಶಿ ಸಿ.ಎಂ. ಚಿನ್ನದ ಪದಕ ಗೆದ್ದಿ​ದ್ದಾರೆ. ಇಲ್ಲಿ​ನ ಶ್ರೀ ಕಂಠೀ​ರವ ಕ್ರೀಡಾಂಗ​ಣದಲ್ಲಿ ಶನಿವಾರ ನಡೆದ ಪುರು​ಷರ ವಿಭಾ​ಗದ ಜಾವೆ​ಲಿನ್‌ ಎಸೆ​ತ​ದಲ್ಲಿ ಮನು ಮೊದಲ ಪ್ರಯ​ತ್ನ​ದಲ್ಲೇ 84.33 ಮೀ. ದೂರ ಎಸೆದು ಪ್ರಥಮ ಸ್ಥಾನಿ​ಯಾ​ದರು. 

IPL 2023 ಆರ್‌ಸಿಬಿ ಸೋಲಿನ ಅನಿಷ್ಠ ದೂರಮಾಡಿದ ಕನ್ನಡಿಗ ವೈಶಾಕ್‌..!

ಮಹಿ​ಳೆ​ಯರ 1500 ಮೀ. ಓಟ​ದ​ಲ್ಲಿ ರಾಶಿ 4 ನಿಮಿಷ 41.58 ಸೆಕೆಂಡ್‌​ಗ​ಳಲ್ಲಿ ಕ್ರಮಿಸಿದರು. ಮಹಿ​ಳೆ​ಯರ 100 ಮೀ. ಓಟದಲ್ಲಿ 2ನೇ ಸ್ಥಾನ ಪಡೆದ ದಾನೇ​ಶ್ವರಿ 200 ಮೀ. ಓಟದಲ್ಲಿ 3ನೇ ಸ್ಥಾನ ಪಡೆ​ದರು. ಮಹಿ​ಳೆ​ಯರ 3000 ಮೀ. ಸ್ಟೀಪ​ಲ್‌​ಚೇಸ್‌ ಶಾಹೀನ್‌ 3ನೇ ಸ್ಥಾನ ಪಡೆ​ದರೆ, ಮಹಿ​ಳೆ​ಯರ ಪೋಲ್‌​ವಾ​ಲ್ಟ್‌​ನಲ್ಲಿ ಸಿಂಧುಶ್ರೀ 2ನೇ ಸ್ಥಾನ ಗಳಿ​ಸಿ​ದರು. ಇದೇ ವೇಳೆ ಪುರು​ಷರ ಲಾಂಗ್‌​ಜಂಪ್‌ನಲ್ಲಿ ರಾಜ್ಯ​ದ ಆರ್ಯ ಎಸ್‌. 7.64 ಮೀ. ಜಿಗಿದು 3ನೇ ಸ್ಥಾನ ಪಡೆ​ದರು.

ಟೆನಿಸ್‌: ಭಾರತ ಮಹಿಳಾ ತಂಡಕ್ಕೆ ರೋಚಕ ಸೋಲು

ತಾಷ್ಕೆಂಟ್: ವಿಶ್ವ ಮಹಿಳಾ ತಂಡಗಳ(ಬಿಲ್ಲಿ ಜೀನ್‌ ಕಿಂಗ್‌ ಕಪ್‌) ಚಾಂಪಿಯನ್‌ಶಿಪ್‌ನ  ಏಷ್ಯಾ-ಓಷಿಯಾನಿಯಾ ಗುಂಪು-1ರಲ್ಲಿ ಭಾರತ ಸತತ 3ನೇ ಸೋಲು ಕಂಡಿದ್ದು, ವಿಶ್ವ ಗುಂಪು ಪ್ಲೇ-ಆಫ್‌ಗೇರಲು ವಿಫಲವಾಗಿದೆ. ಮೊದಲೆರಡು ಪಂದ್ಯದಲ್ಲಿ ಜಯಿಸಿದ್ದ ಭಾರತ ಆ ಬಳಿಕ ನೀರಸ ಪ್ರದರ್ಶನ ತೋರಿತು. ಶನಿವಾರ ಕೊರಿಯಾ ವಿರುದ್ದ 1-2ರಲ್ಲಿ ಸೋಲುಂಡಿತು. ಸಿಂಗಲ್ಸ್‌ನಲ್ಲಿ ಋತುಜಾ ಗೆದ್ದರೆ, ವೈದೇಹಿ ಸೋತರು. ಡಬಲ್ಸ್‌ನಲ್ಲೂ ಭಾರತ ಸೋಲುಂಡಿತು. 

click me!