FIFA World Cup 2026 ಆಡಿದ 25 ವರ್ಷದ ಸ್ಟಾರ್ ಫುಟ್ಬಾಲಿಗ ನಿಗೂಢ ಸಾವು!

Published : Jul 12, 2026, 10:35 AM IST
Jayden Adams

ಸಾರಾಂಶ

ದಕ್ಷಿಣ ಆಫ್ರಿಕಾದ ಯುವ ಫುಟ್ಬಾಲ್ ಆಟಗಾರ ಜೇಡನ್ ಆಡಮ್ಸ್ ತಮ್ಮ 25ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕೇಪ್ ಟೌನ್‌ನಲ್ಲಿರುವ ತಮ್ಮ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೇಪ್ ಟೌನ್: ಫುಟ್ಬಾಲ್ ಲೋಕಕ್ಕೆ ಒಂದು ಆಘಾತಕಾರಿ ಸುದ್ದಿ ಬಂದಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಆಡಿದ್ದ ಯುವ ಆಟಗಾರ ಜೇಡನ್ ಆಡಮ್ಸ್ ತಮ್ಮ 25ನೇ ವಯಸ್ಸಿಗೆ ಸಾವನ್ನಪ್ಪಿದ್ದಾರೆ. ದಕ್ಷಿಣ ಆಫ್ರಿಕಾದ ಮಾಧ್ಯಮಗಳು ಈ ಸುದ್ದಿಯನ್ನು ವರದಿ ಮಾಡಿವೆ.

ಶನಿವಾರ ಬೆಳಗ್ಗೆ ಕೇಪ್ ಟೌನ್‌ನಲ್ಲಿರುವ ತಮ್ಮ ಮನೆಯಲ್ಲಿ ಜೇಡನ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆದರೆ, ಅವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಘಟನೆ ಬಗ್ಗೆ ವೆಸ್ಟರ್ನ್ ಕೇಪ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಜೇಡನ್ ಆಡಮ್ಸ್ ದಕ್ಷಿಣ ಆಫ್ರಿಕಾ ಪರ ಮೂರು ಪಂದ್ಯಗಳಲ್ಲಿ ಆಡಿದ್ದರು. ಗ್ರೂಪ್ ಹಂತದ ಮೊದಲ ಎರಡು ಪಂದ್ಯಗಳಲ್ಲಿ ಅವರು ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿದ್ದರು. ಮೂರನೇ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಮಿಡ್‌ಫೀಲ್ಡರ್ ಜೇಡನ್ ಆಡಮ್ಸ್ ಆಡಿದ್ದರು.

ಕಂಬನಿ ಮಿಡಿದ ದಕ್ಷಿಣ ಆಫ್ರಿಕಾದ ಫುಟ್ಬಾಲ್ ಆಟಗಾರರ ಸಂಘ

2022ರಲ್ಲಿ ತಮ್ಮ ದೇಶಕ್ಕಾಗಿ ಫುಟ್ಬಾಲ್ ಆಡಲು ಆರಂಭಿಸಿದ ಜೇಡನ್ ಅವರ ಅಕಾಲಿಕ ಮರಣ ತಮ್ಮನ್ನು ಸಂಪೂರ್ಣವಾಗಿ ನೋವಿನಿಂದ ಮುಳುಗುವಂತೆ ಮಾಡಿದೆ ಎಂದು ದಕ್ಷಿಣ ಆಫ್ರಿಕಾದ ಫುಟ್ಬಾಲ್ ಆಟಗಾರರ ಸಂಘ (South African Football Players' Union) ಹೇಳಿದೆ. ಅಷ್ಟೇ ಅಲ್ಲ, 2023ರ ಆಫ್ರಿಕನ್ ಕಪ್ ಆಫ್ ನೇಷನ್ಸ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದ ದಕ್ಷಿಣ ಆಫ್ರಿಕಾ ತಂಡದಲ್ಲಿಯೂ ಜೇಡನ್ ಆಡಮ್ಸ್ ಪ್ರಮುಖ ಸದಸ್ಯರಾಗಿದ್ದರು.

ಕಾಮನ್‌ವೆಲ್ತ್‌ ಗೇಮ್ಸ್‌ಗೆ ಸಿದ್ಧತೆ: ಮೋದಿ ಸ್ಟೇಡಿಯಂ ಸುತ್ತಮುತ್ತ 50ಕ್ಕೂ ಹೆಚ್ಚು ಅಕ್ರಮ ಕಟ್ಟಡಗಳು ಧ್ವಂಸ

ಅಹಮದಾಬಾದ್‌: 2030ರ ಕಾಮನ್‌ವೆಲ್ತ್‌ ಗೇಮ್ಸ್‌ ಆತಿಥ್ಯಕ್ಕೆ ಗುಜರಾತ್‌ ರಾಜಧಾನಿ ಅಹಮದಾಬಾದ್‌ ಸಜ್ಜಾಗುತ್ತಿದೆ. ಇದರ ಭಾಗವಾಗಿ ನರೇಂದ್ರ ಮೋದಿ ಕ್ರೀಡಾಂಗಣದ ಸುತ್ತಮುತ್ತ 50ಕ್ಕೂ ಹೆಚ್ಚು ಅಕ್ರಮ ವಾಣಿಜ್ಯ ಕಟ್ಟಡಗಳನ್ನು ಕೆಡವಲಾಗಿದೆ.

ಅಕ್ರಮವಾಗಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ಧ್ವಂಸಗೊಳಿಸುವ ಬಗ್ಗೆ ಅಹಮದಾಬಾದ್ ಮಹಾನಗರ ಪಾಲಿಕೆ(ಎಎಂಸಿ) ಅಧಿಕಾರಿಗಳು ಕೆಲ ದಿನಗಳ ಹಿಂದೆಯೇ ನೋಟಿಸ್‌ ನೀಡಿದ್ದರು. ಕಟ್ಟಡಗಳನ್ನು ಸ್ಥಳಾಂತರಿಸಲು ಸಮಯಾವಕಾಶವನ್ನೂ ನೀಡಿದ್ದರು. ‘ಕಾಮನ್‌ವೆಲ್ತ್‌ ಗೇಮ್ಸ್‌ಗೆ ಸಿದ್ಧತೆಯ ಭಾಗವಾಗಿ ರಸ್ತೆ ಅಗಲೀಕರಣಕ್ಕಾಗಿ 52 ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ’ ಎಂದು ಎಎಂಸಿ ಅಧಿಕಾರಿ ತಿಳಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

FIFA World Cup 2026 ಕ್ವಾರ್ಟರ್‌ ಫೈನಲ್‌: ಬೆಲ್ಜಿಯಂ ಮಣಿಸಿ ಸೆಮೀಸ್‌ಗೆ ಸ್ಪೇನ್‌ ಲಗ್ಗೆ
FIFA World Cup 2026: ಮೊರಾಕ್ಕೊ ಕಿಕೌಟ್, ಎಂಟನೇ ಸಲ ಸೆಮಿಫೈನಲ್‌ಗೆ ಫ್ರಾನ್ಸ್ ಲಗ್ಗೆ