FIFA World Cup ವೇಳೆ ಸೆಕ್ಸ್‌ ಮಾಡಿದ್ರೆ ಹುಷಾರ್, 7 ವರ್ಷ ಜೈಲು..!

By Naveen KodaseFirst Published Jun 25, 2022, 9:15 AM IST
Highlights

* ಬಹುನಿರೀಕ್ಷಿತ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ಕ್ಷಣಗಣನೆ
* ಕತಾರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ವೇಳೆ ವಿವಾಹೇತರ ಸೆಕ್ಸ್‌ಗಿಲ್ಲ ಅವಕಾಶ
* ನಿಷೇಧಿತ ಡ್ರಗ್ಸ್‌ ಸೇವಿಸಿರುವುದು ಪತ್ತೆಯಾದರೇ ಜೀವಾವಧಿ ಶಿಕ್ಷೆ

ದೋಹಾ(ಜೂ.25): ಈ ವರ್ಷ ನವೆಂಬರ್‌ ಡಿಸೆಂಬರ್‌ನಲ್ಲಿ ಕತಾರ್‌ನಲ್ಲಿ ನಡೆಯಲಿರುವ ಫಿಫಾ ಫುಟ್ಬಾಲ್‌ (FIFA World Cup 2022 in Qatar) ವಿಶ್ವಕಪ್‌ ವೇಳೆ ವಿವಾಹೇತರ ಲೈಂಗಿಕ ಸಂಪರ್ಕಕ್ಕೆ ನಿಷೇಧ ಹೇರಲಾಗಿದ್ದು, ನಿಯಮ ಉಲ್ಲಂಘಿಸಿದರೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈ ಬಗ್ಗೆ ಆಯೋಜಕರು ಈಗಾಗಲೇ ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದು, ಯಾವುದೇ ಆಟಗಾರ ಅಥವಾ ಅಭಿಮಾನಿಗಳು ವಿವಾಹೇತರ ಲೈಂಗಿಕ ಸಂಪರ್ಕ ಹೊಂದುವುದು ನಿಷೇಧಿಸಿದೆ. ದಂಪತಿಗಳು ಮಾತ್ರ ಲೈಂಗಿಕ ಕ್ರಿಯೆಯಲ್ಲಿ ಏರ್ಪಡಬಹುದು ಎಂದು ತಿಳಿಸಿದೆ. ಅಲ್ಲದೇ ಸಲಿಂಗಕಾಮವನ್ನು ಕೂಡಾ ನಿಷೇಧಿಸಿದೆ ಎಂದು ವರದಿಗಳು ತಿಳಿಸಿವೆ. ಫಿಫಾ ಟೂರ್ನಿ ವೇಳೆ ಸೆಕ್ಸ್‌ ಕ್ರಿಯೆಗಳು ವ್ಯಾಪಕವಾಗಿ ನಡೆಯುತ್ತಿದ್ದು, ಇದೇ ಮೊದಲ ಬಾರಿ ಸೆಕ್ಸ್‌ಗೆ ನಿಷೇಧ ವಿಧಿಸಲಾಗಿದೆ ಎಂದು ಗೊತ್ತಾಗಿದೆ.

ವಿವಾಹೇತರ ಫುಟ್ಬಾಲ್ ಅಭಿಮಾನಿಗಳು ಹಾಗೂ ಆಟಗಾರರು ಲೈಂಗಿಕ ಸಂಪರ್ಕ ಹೊಂದಿದ್ದು ತಿಳಿದುಬಂದರೇ ಗರಿಷ್ಟ 7 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲು ಕತಾರ್ ಸರ್ಕಾರ (Qatar Govt) ತೀರ್ಮಾನಿಸಿದೆ. ಇದಷ್ಟೇ ಅಲ್ಲದೇ ಸ್ಮಗ್ಲಿಂಗ್ ಡ್ರಗ್ಸ್‌ಗಳಾದ ಕೊಕೆನ್ ಹಾಗೂ ಇನ್ನಿತರ ಡ್ರಗ್ಸ್‌ ಸೇವಿಸುವುದು ಪತ್ತೆಯಾದರೆ ಅಂತಹ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಫಿಫಾ ಫುಟ್ಬಾಲ್ ವಿಶ್ವಕಪ್ ವೇಳೆ ಪ್ರತ್ಯೇಕ ಅಭಿಮಾನಿಗಳ ಝೋನ್‌ಗಳಲ್ಲಿ ಮದ್ಯಪಾನ ಸೇವನೆಗೆ ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ.

2022ರ ಕತಾರ್ ಫಿಫಾ ವಿಶ್ವಕಪ್ ಟೂರ್ನಿಯು ನವೆಂಬರ್ 21ರಂದು ಆರಂಭವಾಗಲಿದ್ದು, ಡಿಸೆಂಬರ್ 18ರಂದು ಫೈನಲ್ ಪಂದ್ಯ ಜರುಗಲಿದೆ. ಈ ಬಾರಿಯ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಕೊನೆಯದಾಗಿ 32 ರಾಷ್ಟ್ರಗಳು ಪಾಲ್ಗೊಳ್ಳಲಿವೆ. ಕತಾರ್ ವಿಶ್ವಕಪ್ ಬಳಿಕ ಮುಂಬರು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 48 ಫುಟ್ಬಾಲ್ ತಂಡಗಳು ಪಾಲ್ಗೊಳ್ಳಲಿದ್ದು, ಈ ಟೂರ್ನಿಗೆ ಅಮೆರಿಕ, ಮೆಕ್ಸಿಕೊ ಹಾಗೂ ಕೆನಡಾ ರಾಷ್ಟ್ರಗಳು ಜಂಟಿ ಆತಿಥ್ಯವನ್ನು ವಹಿಸಲಿವೆ.

ಫಿಫಾ ಅ-17 ವಿಶ್ವಕಪ್‌: ಭಾರತಕ್ಕೆ ಅಮೆರಿಕ ಮೊದಲ ಎದುರಾಳಿ

ನವದೆಹಲಿ: ಮುಂಬರುವ ಫಿಫಾ ಅಂಡರ್‌-17 ಮಹಿಳಾ ಫುಟ್ಬಾಲ್‌ ವಿಶ್ವಕಪ್‌ ಟೂರ್ನಿಯ ಡ್ರಾ ಬಿಡುಗಡೆಯಾಗಿದ್ದು, ಆತಿಥೇಯ ಭಾರತ ‘ಎ’ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ. ಭಾರತದ ಜೊತೆ ಗುಂಪಿನಲ್ಲಿ ಬಲಿಷ್ಠ ಬ್ರೆಜಿಲ್‌, ಅಮೆರಿಕ ಹಾಗೂ ಮೊರೆಕ್ಕೊ ದೇಶಗಳೂ ಕೂಡಾ ಸ್ಥಾನ ಗಿಟ್ಟಿಸಿಕೊಂಡಿವೆ.

AIFF Election: ಸೆಪ್ಟೆಂಬರ್ 16ರೊಳಗೆ ಚುನಾವಣೆ ನಡೆಸಲು ಫಿಫಾ ಡೆಡ್‌ಲೈನ್‌

ಟೂರ್ನಿಯು ಅಕ್ಟೋಬರ್‌ 11ರಿಂದ 30ರ ವರೆಗೆ ಒಡಿಶಾ, ಗೋವಾ ಹಾಗೂ ನವಿ ಮುಂಬೈನಲ್ಲಿ ನಡೆಯಲಿದೆ. ಭಾರತದ ಎಲ್ಲಾ ಪಂದ್ಯಗಳು ಒಡಿಶಾ ಭುವನೇಶ್ವರದ ಕಳಿಂಗಾ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದು, ಅ.11ಕ್ಕೆ ಅಮೆರಿಕ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಬಳಿಕ ಅ.14ಕ್ಕೆ ಮೊರೊಕ್ಕೊ ಹಾಗೂ ಅ.17ಕ್ಕೆ ಬ್ರೆಜಿಲ್‌ ವಿರುದ್ಧ ಸೆಣಸಾಡಲಿದೆ. ಇನ್ನು, ‘ಬಿ’ ಗುಂಪಿನಲ್ಲಿ ಜರ್ಮನಿ, ನೈಜೀರಿಯಾ, ಚಿಲಿ ಹಾಗೂ ನ್ಯೂಜಿಲೆಂಡ್‌, ‘ಸಿ’ ಗುಂಪಿನಲ್ಲಿ ಸ್ಪೇನ್‌, ಮೆಕ್ಸಿಕೊ, ಕೊಲಂಬಿಯಾ ಹಾಗೂ ಚೀನಾ ಸ್ಥಾನ ಪಡೆದಿದೆ. ಜಪಾನ್‌, ತಾಂಜಾನಿಯಾ, ಫ್ರಾನ್ಸ್‌ ಹಾಗೂ ಕೆನಡಾ ‘ಡಿ’ ಗುಂಪಿನಲ್ಲಿವೆ.
 
 

click me!