ಮತ್ತೊಮ್ಮೆ ಫುಟ್ಬಾಲ್ ಕ್ರೀಡಾಂಗಣದ ಭೀಕರ ಕಾಲ್ತುಳಿತದ ಅನಾಹುತಕ್ಕೆ ಸಾಕ್ಷಿ
ಮಧ್ಯ ಅಮೆರಿಕದ ದೇಶವಾದ ಎಲ್ ಸಾಲ್ವಡಾರ್ನ ಮೈದಾನದಲ್ಲಿ ನಡೆದ ಕಾಲ್ತುಳಿತ
ಸುಮಾರು 12 ಮಂದಿ ಮೃತಪಟ್ಟು ಹಲವರು ಗಂಭೀರ ಗಾಯ
ಸ್ಯಾನ್ ಸಾಲ್ವಡಾರ್(ಎಲ್ ಸಾಲ್ವಡಾರ್): ಕ್ರೀಡಾ ಜಗತ್ತು ಮತ್ತೊಮ್ಮೆ ಫುಟ್ಬಾಲ್ ಕ್ರೀಡಾಂಗಣದ ಭೀಕರ ಕಾಲ್ತುಳಿತದ ಅನಾಹುತಕ್ಕೆ ಸಾಕ್ಷಿಯಾಗಿದ್ದು, ಮಧ್ಯ ಅಮೆರಿಕದ ದೇಶವಾದ ಎಲ್ ಸಾಲ್ವಡಾರ್ನ ಮೈದಾನದಲ್ಲಿ ನಡೆದ ಕಾಲ್ತುಳಿತದಲ್ಲಿ ಸುಮಾರು 12 ಮಂದಿ ಮೃತಪಟ್ಟು ಹಲವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಇಲ್ಲಿನ ಕಸ್ಕಟ್ಲಾನ್ನ ಕ್ರೀಡಾಂಗಣದಲ್ಲಿ ಸಾಲ್ವಡೊರಾನ್ ಲೀಗ್‌ನ ಆಲಿಯಾನ್ಜ ಹಾಗೂ ಎಫ್ಎಎಸ್ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಈ ದುರ್ಘಟನೆ ನಡೆದಿದೆ. ಅಪಾರ ಪ್ರಮಾಣದ ಅಭಿಮಾನಿಗಳು ಒಮ್ಮೆಲೇ ಮೈದಾನಕ್ಕೆ ಪ್ರವೇಶಿಸುವ ವೇಳೆ ಗೇಟ್ ಮುರಿದು ಬಿದ್ದಿದ್ದು, ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಕಾಲ್ತುಳಿತ ಹಾಗೂ ಉಸಿರುಗಟ್ಟಿಹಲವರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
At least 12 people died and many were injured after a stampede broke out at the Cuscatlán stadium during a soccer match in El Salvador https://t.co/IhXIEk5gJi pic.twitter.com/UCjEebSE4k
— Reuters (@Reuters)undefined
‘9 ಮಂದಿ ಕ್ರೀಡಾಂಗಣದಲ್ಲೇ ಮೃತಪಟ್ಟಿದ್ದಾರೆ. ಮೂವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಅಕ್ಟೋಬರ್ನಲ್ಲಿ ಇಂಡೋನೇಷ್ಯಾದ ಫುಟ್ಬಾಲ್ ಕ್ರೀಡಾಂಗಣದಲ್ಲಿ ಕಾಲ್ತುಳಿತ, ಘರ್ಷಣೆಯಿಂದ 135 ಮಂದಿ ಸಾವನ್ನಪ್ಪಿದ್ದರು.
ವಿಶ್ವ ಟಿಟಿ: 2ನೇ ಸುತ್ತಿಗೆ ಸತ್ಯನ್, ಶರತ್ ಪ್ರವೇಶ
ಡರ್ಬನ್: ಭಾರತದ ಹಿರಿಯ ಟೇಬಲ್ ಟೆನಿಸ್ ಪಟು ಶರತ್ ಕಮಲ್ ಹಾಗೂ ಜಿ.ಸತ್ಯನ್ ವಿಶ್ವ ಟಿಟಿ ಚಾಂಪಿಯನ್ಶಿಪ್ನಲ್ಲಿ ಶುಭಾರಂಭ ಮಾಡಿದ್ದಾರೆ. ಭಾನುವಾರ ಪುರುಷರ ಸಿಂಗಲ್ಸ್ನ ಮೊದಲ ಸುತ್ತಿನಲ್ಲಿ 56ನೇ ರಾರಯಂಕಿಂಗ್‌ನ ಶರತ್ ಆಸ್ಟ್ರಿಯಾದ ಡೇವಿಡ್ ವಿರುದ್ಧ 11-8, 9-11, 11-9, 11-6ರಲ್ಲಿ ಗೆಲುವು ಸಾಧಿಸಿದರು. ಸತ್ಯನ್ ಇಂಗ್ಲೆಂಡ್‌ನ ಟಾಮ್ ಜಾರ್ವಿಸ್‌ರನ್ನು 4-3 ಅಂತರದಲ್ಲಿ ರೋಚಕವಾಗಿ ಮಣಿಸಿ 2ನೇ ಸುತ್ತು ತಲುಪಿದರು. ಆದರೆ ಮನುಶ್ ಶಾ ಹಾಗೂ ಹರ್ಮೀತ್ ದೇಸಾಯಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು.
Wrestlers Protest ಮಂಪರು ಪರೀಕ್ಷೆಗೆ ಸಿದ್ದ ಆದರೆ ಒಂದು ಕಂಡೀಷನ್: ಬ್ರಿಜ್‌ಭೂಷಣ್ ಸಿಂಗ್
ಫ್ರೆಂಚ್ ಓಪನ್ಗೆ ಆ್ಯಂಡಿ ಮರ್ರೆ ಕೂಡಾ ಗೈರು
ಪ್ಯಾರಿಸ್: ರಾಫೆಲ್ ನಡಾಲ್ ಬಳಿಕ 3 ಬಾರಿ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ವಿಜೇತ, ಬ್ರಿಟನ್ನ ಆ್ಯಂಡಿ ಮರ್ರೆ ಕೂಡಾ ಈ ಬಾರಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಇದನ್ನು ಭಾನುವಾರ ಆಯೋಜಕರು ಪ್ರಕಟಿಸಿದ್ದಾರೆ. ವಿಂಬಲ್ಡನ್ ಟೂರ್ನಿಯತ್ತ ಹೆಚ್ಚಿನ ಗಮನ ಹರಿಸುವ ನಿಟ್ಟಿನಲ್ಲಿ ಮರ್ರೆ ಫ್ರೆಂಚ್ ಓಪನ್ ಆಡುವುದಿಲ್ಲ ಎಂದು ಈ ಮೊದಲು ಕೆಲ ವಿದೇಶಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. 2 ಬಾರಿ ವಿಂಬಲ್ಡನ್, 1 ಬಾರಿ ಯುಎಸ್ ಓಪನ್ ಗೆದ್ದಿರುವ 36 ವರ್ಷದ ಮರ್ರೆ 2016ರಲ್ಲಿ ಫ್ರೆಂಚ್ ಓಪನ್ ಫೈನಲ್ಗೇರಿದ್ದರು. ಆದರೆ ನೋವಾಕ್ ಜೋಕೋವಿಚ್ ವಿರುದ್ಧ ಸೋತು ಪ್ರಶಸ್ತಿ ಗೆಲ್ಲಲು ವಿಫಲರಾಗಿದ್ದರು.
ಹಾಕಿ: ಭಾರತ-ಆಸೀಸ್ 3ನೇ ಪಂದ್ಯ 1-1 ಡ್ರಾ
ಅಡಿಲೇಡ್: ಭಾರತ ಮಹಿಳಾ ಹಾಕಿ ತಂಡ ಆಸ್ಪ್ರೇಲಿಯಾ ವಿರುದ್ಧದ 3ನೇ ಪಂದ್ಯದಲ್ಲಿ 1-1 ಗೋಲುಗಳ ಡ್ರಾ ಸಾಧಿಸಿದೆ. ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದ ಆಸೀಸ್ ವನಿತೆಯರು 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕೈ ವಶಪಡಿಸಿಕೊಂಡರು. ಮ್ಯಾಡಿಸನ್ ಬ್ರೂಕ್ಸ್ 25ನೇ ನಿಮಿಷದಲ್ಲಿ ಆಸೀಸ್ ಪರ ಗೋಲು ಹೊಡೆದರೆ, ದೀಪ್ ಗ್ರೇಸ್ 42ನೇ ನಿಮಿಷದಲ್ಲಿ ಬಾರಿಸಿದ ಗೋಲು ಭಾರತ ಸಮಬಲ ಸಾಧಿಸಲು ನೆರವಾಯಿತು. ಭಾರತ ಇನ್ನು ಆಸ್ಪ್ರೇಲಿಯಾ ‘ಎ’ ವಿರುದ್ಧ 2 ಪಂದ್ಯ ಆಡಲಿದ್ದು, ಮೊದಲ ಪಂದ್ಯ ಗುರುವಾರ ನಡೆಯಲಿದೆ.
ಆರ್ಚರಿ ವಿಶ್ವಕಪ್: 2ನೇ ಸ್ಥಾನ ಪಡೆದ ಭಾರತ
ಶಾಂಘೈ: ಇಲ್ಲಿ ನಡೆದ ಆರ್ಚರಿ ವಿಶ್ವಕಪ್ 2ನೇ ಹಂತದಲ್ಲಿ ಭಾರತ 3 ಪದಕದೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಕೊನೆ ದಿನವಾದ ಭಾನುವಾರ ಭಾರತೀಯರು ಯಾವುದೇ ಪದಕ ಗೆಲ್ಲಲಿಲ್ಲ. ರೀಕವ್‌ರ್ ವಿಭಾಗದಲ್ಲಿ ಶೂನ್ಯ ಸಾಧನೆ ಮಾಡಿತು. ಭಾರತಕ್ಕೆ ಎಲ್ಲಾ ಮೂರು ಪದಕಗಳೂ ಕಾಂಪೌಂಡ್ ವಿಭಾಗದಲ್ಲಿ ಲಭಿಸಿತು. ಮಿಶ್ರ ತಂಡ ವಿಭಾಗದಲ್ಲಿ ಓಜಸ್, ಜ್ಯೋತಿ ಸುರೇಖಾ ಚಿನ್ನ, ವೈಯಕ್ತಿಕ ವಿಭಾಗದಲ್ಲಿ ಪ್ರಥಮೇಶ್, ಅವ್ನೀತ್ ಕೌರ್ ಕ್ರಮವಾಗಿ ಚಿನ್ನ, ಕಂಚು ಗೆದ್ದರು. 11 ಪದಕದೊಂದಿಗೆ ಕೊರಿಯಾ ಅಗ್ರಸ್ಥಾನ ಪಡೆಯಿತು.