
ಪ್ಯಾರಿಸ್(ಮೇ.04): ಮಾಹಿತಿ ನೀಡದೆ ಸೌದಿ ಅರೇಬಿಯಾಕ್ಕೆ ತೆರಳಿದ ಕಾರಣ ಲಿಯೋನೆಲ್ ಮೆಸ್ಸಿಯನ್ನು ಫ್ರಾನ್ಸ್‌ನ ಫುಟ್ಬಾಲ್ ಕ್ಲಬ್ ಪ್ಯಾರಿಸ್ ಸೇಂಟ್ ಜರ್ಮೈನ್(ಪಿಎಸ್‌ಜಿ) ತಂಡ 2 ವಾರಗಳ ಕಾಲ ಅಮಾನತುಗೊಳಿಸಿದೆ. ಸೌದಿಗೆ ತೆರಳಲು ಲಿಯೋನೆಲ್ ಮೆಸ್ಸಿ ಮಾಡಿದ್ದ ಮನವಿಯನ್ನು ಕ್ಲಬ್ ತಿರಸ್ಕರಿಸಿತ್ತು. ಆದರೂ ಮೆಸ್ಸಿ ತಂಡದ ಅಭ್ಯಾಸ ಶಿಬಿರಕ್ಕೆ ಗೈರಾಗಿ ಸೌದಿಗೆ ತೆರಳಿದ್ದರು ಎನ್ನಲಾಗಿದೆ.
ಲಿಯೋನೆಲ್ ಮೆಸ್ಸಿ 2021ರಲ್ಲಿ ಪಿಎಸ್‌ಜಿ ಸೇರ್ಪಡೆಗೊಂಡಿದ್ದರು. ಈ ಋುತುವಿನಲ್ಲಿ ಅವರ ಒಪ್ಪಂದ ಅಂತ್ಯಗೊಳ್ಳಲಿದ್ದು, ಒಪ್ಪಂದ ನವೀಕರಿಸುವ ಸಾಧ್ಯತೆ ಕಡಿಮೆ. ಈ ನಡುವೆ ಅವರು ಸೌದಿಯ ಅಲ್-ಹಿಲಾಲ್ ಕ್ಲಬ್ ಸೇರ್ಪಡೆಯಾಗುವ ಬಗ್ಗೆ ವರದಿಯಾಗಿದ್ದು, ಕ್ಲಬ್ ಜೊತೆ ಮಾತುಕತೆಗೆಂದೇ ಸೌದಿಗೆ ತೆರಳಿದ್ದರು ಎಂದು ಹೇಳಲಾಗುತ್ತಿದೆ. ಕ್ಲಬ್ ಮೆಸ್ಸಿಗೆ ವಾರ್ಷಿಕ 400 ಮಿಲಿಯನ್ ಯುರೋ (ಅಂದಾಜು 3,611 ಕೋಟಿ ರು.) ಆಫರ್ ನೀಡಿದೆ ಎಂದು ಕಳೆದ ತಿಂಗಳು ವರದಿಯಾಗಿತ್ತು.
ವಿಶ್ವ ಬಾಕ್ಸಿಂಗ್: ಭಾರತದ ನಿಶಾಂತ್ ಪ್ರಿ ಕ್ವಾರ್ಟರ್ಗೆ
ತಾಷ್ಕೆಂಟ್: ಇಲ್ಲಿ ನಡೆಯುತ್ತಿರುವ ಪುರುಷರ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನ 71 ಕೆ.ಜಿ. ವಿಭಾಗದಲ್ಲಿ ಭಾರತದ ತಾರಾ ಬಾಕ್ಸರ್ ನಿಶಾಂತ್ ದೇವ್ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಬುಧವಾರ ಮೊದಲ ಸುತ್ತಿನ ಪಂದ್ಯದಲ್ಲಿ 2021ರ ವಿಶ್ವ ಚಾಂಪಿಯನ್‌ಶಿಪ್ ಕಂಚು ವಿಜೇತ ಅಜರ್‌ಬೈಜಾನ್‌ನ ಸರ್ಖಾನ್ ವಿರುದ್ಧ 5-0 ಅಂತರದಲ್ಲಿ ಗೆಲುವು ಸಾಧಿಸಿದರು. ಅಂತಿಮ 16ರ ಸುತ್ತಿನಲ್ಲಿ ಅವರು ದ.ಕೊರಿಯಾದ ಲೀ ಸಾಂಗ್ಮಿನ್ ವಿರುದ್ಧ ಸೆಣಸಲಿದ್ದಾರೆ.
Wrestlers Protest: ಕುಸ್ತಿಪಟುಗಳ ಭೇಟಿಯಾದ ಪಿ.ಟಿ. ಉಷಾ!
ಗುರುವಾರ ಭಾರತದ ನಾಲ್ವರು ಬಾಕ್ಸರ್ಗಳು ಕಣಕ್ಕಿಳಿಯಲಿದ್ದಾರೆ. ದಾಖಲೆಯ 6 ಬಾರಿ ಏಷ್ಯನ್ ಪದಕ ವಿಜೇತ ಶಿವ ಥಾಪ(63.5 ಕೆ.ಜಿ.), ಗೋವಿಂದ್ ಸಹಾನಿ(48 ಕೆ.ಜಿ.), ನರೇಂದರ್(92+ ಕೆ.ಜಿ.) ಹಾಗೂ ದೀಪಕ್ ಕುಮಾರ್(51 ಕೆ.ಜಿ.+)ಸ್ಪರ್ಧಿಸಲಿದ್ದು, ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಆರ್ಚರಿ: ಭಾರತಕ್ಕೆ ಮತ್ತೆ ಆರು ಪದಕಗಳು ಖಚಿತ
ತಾಷ್ಕೆಂಟ್: ಆರ್ಚರಿ ಏಷ್ಯಾಕಪ್ 2ನೇ ಹಂತದಲ್ಲಿ ಭಾರತೀಯರು ಪ್ರಾಬಲ್ಯ ಮುಂದುವರಿಸಿದ್ದು, ಕಾಂಪೌಂಡ್ ವಿಭಾಗದಲ್ಲಿ ಕ್ಲೀನ್ಸ್ವೀಪ್ ನಿರೀಕ್ಷೆಯಲ್ಲಿದ್ದಾರೆ. ಜೊತೆಗೆ ರೀಕವ್‌ರ್ ವಿಭಾಗದಲ್ಲಿ ಮತ್ತೆರಡು ಪದಕಗಳನ್ನು ಖಚಿತಪಡಿಸಿದ್ದಾರೆ. ಪುರುಷರ ಕಾಂಪೌಡ್ ವೈಯಕ್ತಿಕ ವಿಭಾಗದಲ್ಲಿ ಅಭಿಷೇಕ್ ಶರ್ಮಾ ಹಾಗೂ ಅಮಿತ್ ಫೈನಲ್ಗೇರಿದ್ದು, ಕುಶಾಲ್ ದಲಾಲ್ ಕಂಚಿನ ಪದಕಕ್ಕೆ ಸ್ಪರ್ಧಿಸಲಿದ್ದಾರೆ.
ಮಹಿಳೆಯರ ಕಾಂಪೌಂಡ್ ವಿಭಾಗದಲ್ಲಿ ರಜಿನೀ ಹಾಗೂ ಪ್ರಗತಿ ಫೈನಲ್ನಲ್ಲಿ ಪರಸ್ಪರ ಸೆಣಸಾಡಲಿದ್ದು, ಪರ್ನೀತ್ ಕೌರ್ ಕಂಚಿಗಾಗಿ ಆಡಲಿದ್ದಾರೆ. ಇದೇ ವೇಳೆ ರೀಕರ್ವ್ ವೈಯಕ್ತಿಕ ಪುರುಷರ ವಿಭಾಗದಲ್ಲಿ ಮೃನಾಲ್ ಚೌಹಾಣ್ ಫೈನಲ್ ಪ್ರವೇಶಿಸಿದ್ದು, ಮಹಿಳೆಯರ ವಿಭಾಗದಲ್ಲಿ ಸಂಗೀತಾ ಫೈನಲ್ಗೇರಿದ್ದಾರೆ. ಮಂಗಳವಾರ ಭಾರತ ತಂಡ ವಿಭಾಗದ ನಾಲ್ಕೂ ಸ್ಪರ್ಧೆಗಳಲ್ಲಿ ಫೈನಲ್‌ಗೇರಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.