Santosh Trophy: ಇಂದು ಕರ್ನಾ​ಟಕ-ಮೇಘಾ​ಲ​ಯ ಫೈನಲ್‌ ಹಣಾ​ಹಣಿ, ಇತಿಹಾಸ ಬರೆಯುತ್ತಾ ರಾಜ್ಯ ತಂಡ?

By Kannadaprabha News  |  First Published Mar 4, 2023, 9:29 AM IST

ಸಂತೋಷ್ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕ-ಮೇಘಾಲಯ ಫೈನಲ್‌ ಫೈಟ್‌
ಐದು ದಶಕಗಳ ಬಳಿಕ ಸಂತೋಷ್ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿ ಕರ್ನಾಟಕ
5ನೇ ಬಾರಿಗೆ ಸಂತೋಷ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿ ರಾಜ್ಯ ತಂಡ


ರಿಯಾ​ದ್‌(ಮಾ.04): 54 ವರ್ಷ​ಗಳ ಬಳಿಕ ಮತ್ತೊಮ್ಮೆ ಪ್ರತಿ​ಷ್ಠಿತ ಸಂತೋಷ್‌ ಟ್ರೋಫಿ ಫುಟ್ಬಾಲ್‌ ಟೂರ್ನಿಯಲ್ಲಿ ಚಾಂಪಿ​ಯನ್‌ ಪಟ್ಟಅಲಂಕ​ರಿ​ಸಲು ಎದುರು ನೋಡು​ತ್ತಿ​ರುವ ಕರ್ನಾ​ಟಕ ತಂಡ ಶನಿ​ವಾರ ಫೈನ​ಲ್‌​ನಲ್ಲಿ ಮೇಘಾ​ಲಯ ವಿರುದ್ಧ ಸೆಣ​ಸಾ​ಡ​ಲಿದೆ. ಪಂದ್ಯಕ್ಕೆ ರಿಯಾ​ದ್‌ನ ಕಿಂಗ್‌ ಫಹದ್‌ ಕ್ರೀಡಾಂಗಣ ಆತಿಥ್ಯ ವಹಿ​ಸ​ಲಿ​ದೆ.

ಟೂರ್ನಿಯ ಅಂತಿಮ ಸುತ್ತಿ​ನಲ್ಲಿ ಹಾಲಿ ಚಾಂಪಿ​ಯನ್‌ ಕೇರ​ಳ​ವನ್ನು ಸೋಲಿ​ಸಿ ಅಚ್ಚರಿ ಮೂಡಿ​ಸಿ​ದ್ದ ಕರ್ನಾ​ಟಕ, ಸೆಮಿ​ಫೈ​ನ​ಲ್‌​ನಲ್ಲಿ 6 ಬಾರಿ ಚಾಂಪಿ​ಯನ್‌ ಸರ್ವಿ​ಸಸ್‌ ವಿರುದ್ಧ ಗೆಲುವು ಸಾಧಿ​ಸಿತ್ತು. 1968-69ರಲ್ಲಿ ಕೊನೆ ಬಾರಿ ಪ್ರಶಸ್ತಿ ಗೆದ್ದಿದ್ದ ರಾಜ್ಯ ತಂಡ, ಕೊನೆ ಬಾರಿಗೆ ಫೈನಲ್‌ನಲ್ಲಿ ಆಡಿದ್ದು 1975-76ರಲ್ಲಿ. ಇದೀಗ 5ನೇ ಪ್ರಶ​ಸ್ತಿ ತನ್ನ​ದಾ​ಗಿ​ಸಿ​ಕೊ​ಳ್ಳುವ ನಿರೀ​ಕ್ಷೆ​ಯ​ಲ್ಲಿದೆ.

Latest Videos

undefined

ಮತ್ತೊಂದೆಡೆ ಮೇಘಾ​ಲಯ ಸೆಮೀ​ಸ್‌​ನಲ್ಲಿ ಮಾಜಿ ಚಾಂಪಿ​ಯ​ನ್‌ ಪಂಜಾ​ಬ್‌ಗೆ ಸೋಲು​ಣಿ​ಸಿದ್ದು, ಚೊಚ್ಚಲ ಪ್ರಯ​ತ್ನ​ದಲ್ಲೇ ಐತಿ​ಹಾ​ಸಿಕ ಟ್ರೋಫಿ ಗೆಲ್ಲುವ ತವ​ಕ​ದ​ಲ್ಲಿ​ದೆ. ಎರಡೂ ತಂಡಗಳು ಯುವ ಹಾಗೂ ಅನುಭವಿ ಆಟಗಾರರಿಂದ ಕೂಡಿದ್ದು, ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ.

ಪಂದ್ಯ: ರಾತ್ರಿ 9ಕ್ಕೆ, ನೇರ​ಪ್ರ​ಸಾ​ರ: ಫ್ಯಾನ್‌​ಕೋ​ಡ್‌

ಭಾರತದ ಪುರುಷರ ಹಾಕಿ ತಂಡಕ್ಕೆ ದಕ್ಷಿಣ ಆಫ್ರಿಕಾದ ಫುಲ್ಟನ್‌ ಕೋಚ್

ನವ​ದೆ​ಹ​ಲಿ(ಮಾ.04): ಭಾರ​ತದ ಪುರು​ಷರ ಹಾಕಿ ತಂಡಕ್ಕೆ ದಕ್ಷಿಣ ಆ​ಫ್ರಿ​ಕಾದ ಕ್ರೇಗ್‌ ಫುಲ್ಟನ್‌ ನೂತನ ಕೋಚ್‌ ಆಗಿ ನೇಮ​ಕ​ಗೊಂಡಿ​ದ್ದಾರೆ. ತಂಡ ಹಾಕಿ ವಿಶ್ವ​ಕಪ್‌ನಲ್ಲಿ ಸಾಧಾರಣ ಪ್ರದರ್ಶನ ತೋರಿದ ಬಳಿಕ ಆಸ್ಪ್ರೇಲಿಯಾದ ಗ್ರಹಾಂ ರೀಡ್‌ ರಾಜೀನಾಮೆ ನೀಡಿದ್ದರು. ಇದರಿಂದ ತೆರವುಗೊಂಡಿದ್ದ ಸ್ಥಾನವನ್ನು ಫುಲ್ಟನ್‌ ತುಂಬಲಿದ್ದಾರೆ.

🇮🇳👔 It's time for Craig Fulton

Hockey India is delighted to appoint Craig Fulton as the new Chief Coach of the Indian Men's Hockey Team. pic.twitter.com/420JodSSnq

— Hockey India (@TheHockeyIndia)

ದಕ್ಷಿಣ ಆ​ಫ್ರಿಕಾ ಪರ 195 ಪಂದ್ಯ​ಗ​ಳ​ನ್ನಾ​ಡಿ​ರುವ ಫುಲ್ಟನ್‌ಗೆ ಕೋಚಿಂಗ್‌​ನಲ್ಲಿ 25 ವರ್ಷ​ಗಳ ಅನುಭವವಿದೆ. ಅವರ ಮಾರ್ಗದರ್ಶನದಲ್ಲಿ ಐರ್ಲೆಂಡ್‌ 100 ವರ್ಷಗಳಲ್ಲೇ ಮೊದಲ ಬಾರಿಗೆ 2016ರಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿತ್ತು. ಹಾಲಿ ಒಲಿಂಪಿಕ್‌ ಚಾಂಪಿಯನ್‌ ಬೆಲ್ಜಿಯಂ ತಂಡದೊಂದಿಗೂ ಕೆಲಸ ಮಾಡಿದ ಅನುಭವವಿರುವ ಪುಲ್ಟ​ನ್‌​ಗೆ 2015ರ ಎಫ್‌ಐಎಚ್‌ ಶ್ರೇಷ್ಠ ಕೋಚ್‌ ಪ್ರಶಸ್ತಿ ಲಭಿ​ಸಿತ್ತು. ಅವರು ಸದ್ಯದಲ್ಲೇ ತಂಡ ಕೂಡಿಕೊಳ್ಳಲಿದ್ದಾರೆ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್‌ ಟಿರ್ಕೆ ತಿಳಿಸಿದ್ದಾರೆ.

Indian Super League: ಸೆಮೀಸ್‌ಗೆ ಬೆಂಗಳೂರು ಎಫ್‌ಸಿ ಲಗ್ಗೆ..! ವಿವಾದ ಮಾಡಿ ಮೈದಾನ ತೊರೆದ ಕೇರಳ

ಕಬಡ್ಡಿ ಫೈನಲ್‌ಗೆ ಭಾರತ

ಉರ್ಮಿಯಾ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ ಎರಡನೇ ಆವೃತ್ತಿಯ ಕಿರಿಯರ ಕಬಡ್ಡಿ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ಗೇರಲಿದೆ. ಚೊಚ್ಚಲ ಬಾರಿ ಟೂರ್ನಿಯಲ್ಲಿ ಆಡುತ್ತಿರುವ ಭಾರತ ಶುಕ್ರವಾರ ಸೆಮೀಸ್‌ನಲ್ಲಿ 75-29ರಲ್ಲಿ ಜಯಿಸಿತು. ಮತ್ತೊಂದು ಸೆಮೀಸ್‌ನಲ್ಲಿ ನೇಪಾಳವನ್ನು ಹಾಲಿ ಚಾಂಪಿಯನ್‌ ಇರಾನ್ 60-37ರಲ್ಲಿ ಮಣಿಸಿತು. ಭಾನುವಾರ ಫೈನಲ್‌ ನಡೆಯಲಿದೆ.

click me!