* ಸ್ಯಾಫ್ ಫುಟ್ಬಾಲ್ ಚಾಂಪಿಯನ್‌ಶಿಪ್ ವೇಳಾಪಟ್ಟಿ ಪ್ರಕಟ
* ಸ್ಯಾಫ್ ಟೂರ್ನಿಯಲ್ಲಿ 7 ಬಾರಿ ಚಾಂಪಿಯನ್ ಆಗಿರುವ ಭಾರತ
* ಕಳೆದ ಆವೃತ್ತಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಭಾರತ
ನವದೆಹಲಿ(ಆ.21): 7 ಬಾರಿ ಚಾಂಪಿಯನ್ ಭಾರತ, 2021ರ ಸ್ಯಾಫ್ (ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಷನ್) ಚಾಂಪಿಯನ್‌ಶಿಪ್ ಫುಟ್ಬಾಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ.
ಟೂರ್ನಿಯು ಮಾಲ್ಡೀವ್ಸ್‌ನ ಮಾಲೆಯಲ್ಲಿ ನಡೆಯಲಿದ್ದು, ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 3ರಂದು ಆಡಲಿದೆ. ಬಳಿಕ ಅಕ್ಟೋಬರ್ 6ರಂದು ಶ್ರೀಲಂಕಾ, ಅಕ್ಟೋಬರ್ 8ರಂದು ನೇಪಾಳ ಹಾಗೂ ಅಕ್ಟೋಬರ್ 11ರಂದು ಆತಿಥೇಯ ಮಾಲ್ಡೀವ್ಸ್ ವಿರುದ್ಧ ಆಡಲಿದೆ. ರೌಂಡ್ ರಾಬಿನ್ ಲೀಗ್ ಹಂತದ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ಅಕ್ಟೋಬರ್ 13ರಂದು ನಡೆಯಲಿರುವ ಫೈನಲ್‌ನಲ್ಲಿ ಎದುರಾಗಲಿವೆ. 2018ರಲ್ಲಿ ನಡೆದ ಕಳೆದ ಆವೃತ್ತಿಯ ಫೈನಲ್‌ನಲ್ಲಿ ಭಾರತ, ಮಾಲ್ಡೀವ್ಸ್ ವಿರುದ್ಧ 1-2 ಗೋಲುಗಳಲ್ಲಿ ಸೋತಿತ್ತು.
Here’s a quick look at ’s fixtures in the SAFF Championship! pic.twitter.com/OWkMSASUP1
— Khel Now (@KhelNow)undefined
ಫುಟ್ಬಾಲ್ ಎಎಫ್‌ಸಿ ಕಪ್: ಬಿಎಫ್‌ಸಿಗಿಂದು ಬಾಂಗ್ಲಾದ ಕಿಂಗ್ಸ್ ಸವಾಲು
ಭಾರತ ಫುಟ್ಬಾಲ್ ತಂಡವು ಸದ್ಯ ಕೋಲ್ಕತದಲ್ಲಿ ಬೀಡುಬಿಟ್ಟಿದ್ದು, ಮುಂಬರುವ ಸವಾಲುಗಳಿಗೆ ಸಜ್ಜಾಗಲು ಅಭ್ಯಾಸ ನಡೆಸುತ್ತಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಸ್ನೇಹಾರ್ಥವಾಗಿ ಭಾರತ ಫುಟ್ಬಾಲ್ ತಂಡವು ನೇಪಾಳ ತಂಡದ ವಿರುದ್ದ ಸೆಣಸಾಟ ನಡೆಸಲಿದೆ.