Indian Super League: ISL ಪಂದ್ಯದಲ್ಲಿ ಕರ್ನಾಟಕದ ಅಪರೂಪದ ಸಾಧನೆ, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಮ್ಯಾಚ್!

Published : Oct 11, 2026, 11:36 AM IST
karnataka football  referees

ಸಾರಾಂಶ

13ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ಶುಭಾರಂಭ ಮಾಡಿದೆ. ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಈ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಬಿಎಫ್‌ಸಿ 3-2 ಗೋಲುಗಳ ಅಂತರದಲ್ಲಿ ಸ್ಪೋರ್ಟಿಂಗ್‌ ಡೆಲ್ಲಿ ವಿರುದ್ಧ ರೋಚಕ ಜಯ ಸಾಧಿಸಿತು.

ಬೆಂಗಳೂರು: ಶನಿವಾರ ಗೋವಾದಲ್ಲಿ ನಡೆದ ಎಫ್‌ಸಿ ಗೋವಾ ಹಾಗೂ ಚೆನ್ನೈಯಿನ್ ಎಫ್‌ಸಿ ನಡುವಿನ ಐಎಸ್‌ಎಲ್ ಫುಟ್‌ಬಾಲ್ ಪಂದ್ಯದಲ್ಲಿ ಕರ್ನಾಟಕದ ಐವರು ರೆಫ್ರಿಗಳು ಕಾರ್ಯನಿರ್ವಹಿಸಿದರು. ಐಎಸ್‌ಎಲ್ (ಇಂಡಿಯನ್‌ ಸೂಪರ್‌ ಲೀಗ್‌) ಪಂದ್ಯವೊಂದರಲ್ಲಿ ರಾಜ್ಯದ ಐವರು ಒಟ್ಟಿಗೆ ಕಾರ್ಯನಿರ್ವಹಿಸಿದ್ದು ಇದೇ ಮೊದಲ ಬಾರಿ.

ಐಎಸ್‌ಎಲ್ ಪಂದ್ಯದಲ್ಲಿ ರಾಜ್ಯದ 5 ರೆಫ್ರಿಗಳು

ಪಂದ್ಯದಲ್ಲಿ ರೆಫ್ರಿ ಅಸ್ಸೆಸರ್ (ಮೇಲ್ವಿಚಾರಕ) ಆಗಿ ಜಿ.ಮೂರ್ತಿ, ರೆಫ್ರಿ ಆಗಿ ಮೃತ್ಯುಂಜಯ, ಸಹಾಯಕ ರೆಫ್ರಿಗಳಾಗಿ ಚೋಳನ್, ಮೋಹನ್ ಹಾಗೂ ಮರಿಯಾ ಟೋನಿ ಕಾರ್ಯನಿರ್ವಹಿಸಿದರು.

ಬೆಂಗಳೂರು ಎಫ್‌ಸಿ ಶುಭಾರಂಭ, ಪಂದ್ಯದಲ್ಲಿ 2 ಗೋಲು ಗಳಿಸಿದ ಬಿಎಫ್‌ಸಿಯ ಮಾರ್ಟಿನೆಜ್‌

13ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ಶುಭಾರಂಭ ಮಾಡಿದೆ. ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಈ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಬಿಎಫ್‌ಸಿ 3-2 ಗೋಲುಗಳ ಅಂತರದಲ್ಲಿ ಸ್ಪೋರ್ಟಿಂಗ್‌ ಡೆಲ್ಲಿ ವಿರುದ್ಧ ರೋಚಕ ಜಯ ಸಾಧಿಸಿತು.

ಐಎಸ್‌ಎಲ್‌ ಫುಟ್ಬಾಲ್ 13ನೇ ಆವೃತ್ತಿ, ಸ್ಪೋರ್ಟಿಂಗ್‌ ಡೆಲ್ಲಿ ವಿರುದ್ಧ 3-2ರ ಜಯ

ಪಂದ್ಯದ 89ನೇ ನಿಮಿಷದಲ್ಲಿ ಮೆನ್ನೊ ಕೊಚ್‌ ಬಾರಿಸಿದ ಗೋಲು, ಬಿಎಫ್‌ಸಿಗೆ ಗೆಲುವಿಗೆ ನೆರವಾಯಿತು. ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ಆತಿಥೇಯ ಬಿಎಫ್‌ಸಿ, 22ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆಯಿತು. ಮೊದಲ ಬಾರಿಗೆ ಬಿಎಫ್‌ಸಿ ಪರ ಆಡಿದ ಬೋರ್ಜಾ ಮಾರ್ಟಿನೆಜ್‌ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಡೆಲ್ಲಿ ತಕ್ಷಣ ತಿರುಗೇಟು ನೀಡಿತು. 26ನೇ ನಿಮಿಷದಲ್ಲಿ ಸಮಬಲ ಸಾಧಿಸಿತು. 32ನೇ ನಿಮಿಷದಲ್ಲಿ ಕೊಚ್‌ ಸ್ವಂತ ಗೋಲು ಗಳಿಸಿ, ಮೊದಲಾರ್ಧದ ಅಂತ್ಯಕ್ಕೆ ಡೆಲ್ಲಿ ಮುನ್ನಡೆ ಗಳಿಸುವಂತೆ ಮಾಡಿದರು.

ದ್ವಿತೀಯಾರ್ಧದಲ್ಲೂ ಹೋರಾಟ ಮುಂದುವರಿಸಿದ ಬಿಎಫ್‌ಸಿ, 75ನೇ ನಿಮಿಷದಲ್ಲಿ ಮಾರ್ಟಿನೆಜ್‌ ಬಾರಿಸಿದ 2ನೇ ಗೋಲಿನ ನೆರವಿನಿಂದ 2-2ರ ಸಮಬಲ ಸಾಧಿಸಿತು. ಸ್ವಂತ ಗೋಲು ಬಿಟ್ಟು ತಂಡದ ಪಾಲಿಗೆ ವಿಲನ್‌ ಆಗಿದ್ದ ಕೊಚ್‌, 89ನೇ ನಿಮಿಷದಲ್ಲಿ ಯುವ ಡಿಫೆಂಡರ್‌ ಸೋಹಮ್‌ ನೀಡಿದ ಪಾಸನ್ನು ಗೋಲಾಗಿ ಪರಿವರ್ತಿಸಿ ತಂಡಕ್ಕೆ ಜಯ ತಂದುಕೊಟ್ಟರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂದಿನಿಂದ 13ನೇ ಆವೃತ್ತಿಯ ಐಎಸ್‌ಎಲ್‌ ಶುರು; ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿಗೆ ಡೆಲ್ಲಿ ಸವಾಲು
ಥ್ಯಾಂಕ್ಯೂ, ಗುಡ್‌ಬೈ ಮೆಸ್ಸಿ...! ದಿಗ್ಗಜ ಫುಟ್ಬಾಲಿಗನ ವಿದಾಯದ ಪಂದ್ಯದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆಟಗಾರರು, ಕೋಚ್‌