ಅಲ್-ಹಿಲಾಲ್ ಭರ್ಜರಿ ಆಫರ್ ತಿರಸ್ಕರಿಸಿದ ಎಂಬಾಪೆ
ಎಂಬಾಪೆಗೆ ಅಲ್-ಹಿಲಾಲ್ ಕ್ಲಬ್‌ನ ವಿಶ್ವ ದಾಖಲೆಯ 332 ಮಿಲಿಯನ್ ಅಮೆರಿಕನ್ ಡಾಲರ್ ಆಫರ್
ಪ್ಯಾರಿಸ್‌ಗೆ ಆಗಮಿಸಿದ್ದ ಅಲ್-ಹಿಲಾಲ್ ಅಧಿಕಾರಿಗಳನ್ನು ಭೇಟಿಯಾಗಲು ಎಂಬಾಪೆ ಒಪ್ಪಿಲ್ಲ
ಪ್ಯಾರಿಸ್(ಜು.28): ಸೌದಿ ಅರೇಬಿಯಾದ ಅಲ್-ಹಿಲಾಲ್ ಕ್ಲಬ್‌ನ ವಿಶ್ವ ದಾಖಲೆಯ 332 ಮಿಲಿಯನ್ ಅಮೆರಿಕನ್ ಡಾಲರ್(ಅಂದಾಜು 2720 ಕೋಟಿ ರು.) ಬಿಡ್ ಅನ್ನು ಫ್ರಾನ್ಸ್‌ನ ತಾರಾ ಫುಟ್ಬಾಲಿಗ ಕಿಲಿಯಾನ್ ಎಂಬಾಪೆ ತಿರಸ್ಕರಿಸಿದ್ದಾರೆ ಎಂದು ಫ್ರಾನ್ಸ್‌ನ ಪ್ರತಿಷ್ಠಿತ ಪತ್ರಿಕೆಯೊಂದು ವರದಿ ಮಾಡಿದೆ. ಬ್ರೆಜಿಲ್ ಆಟಗಾರ ಮ್ಯಾಲ್ಕಮ್ ಜೊತೆ ಒಪ್ಪಂದಕ್ಕೆ ಸಹಿ ಹಾಕಲು ಪ್ಯಾರಿಸ್‌ಗೆ ಆಗಮಿಸಿದ್ದ ಅಲ್-ಹಿಲಾಲ್ ಅಧಿಕಾರಿಗಳನ್ನು ಭೇಟಿಯಾಗಲು ಎಂಬಾಪೆ ಒಪ್ಪಲಿಲ್ಲ ಎಂದು ತಿಳಿದುಬಂದಿದೆ.
ಏಷ್ಯಾಡ್: ಭಾರತ ಫುಟ್ಬಾಲ್ ತಂಡಕ್ಕೆ ಸುಲಭ ಸವಾಲು
undefined
ಹಾಂಗ್ಝೂ: ಏಷ್ಯನ್ ಗೇಮ್ಸ್‌ನ ಫುಟ್ಬಾಲ್ ಡ್ರಾ ಗುರುವಾರ ಪ್ರಕಟಗೊಂಡಿದ್ದು, ಭಾರತ ಪುರುಷರ ತಂಡ ‘ಎ’ ಗುಂಪಿನಲ್ಲಿ ಚೀನಾ, ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್ ಜೊತೆ ಸ್ಥಾನ ಪಡೆದಿದೆ. ಫಿಫಾ ರ್‍ಯಾಂಕಿಂಗ್‌ನಲ್ಲಿ ಬಾಂಗ್ಲಾ ಹಾಗೂ ಮ್ಯಾನ್ಮಾರ್ ಕೆಳ ಸ್ಥಾನಗಳಲ್ಲಿದ್ದು, ಭಾರತ ಅಂತಿಮ 16ರ ಸುತ್ತು ಪ್ರವೇಶಿಸುವ ನಿರೀಕ್ಷೆ ಇದೆ.
ಕಿಲಿಯಾನ್ ಎಂಬಾಪೆಗೆ ಸೌದಿ ಕ್ಲಬ್ 2716 ಕೋಟಿ ರುಪಾಯಿ ಆಫರ್!
ಪುರುಷರ ವಿಭಾಗದಲ್ಲಿ 6 ಗುಂಪುಗಳಲ್ಲಿದ್ದು, ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆವ ತಂಡಗಳ ಜೊತೆ ಉತ್ತಮ ಪ್ರದರ್ಶನ ತೋರಿದ 4 ತಂಡಗಳು ಅಂತಿಮ -16 ಸುತ್ತಿಗೇರಲಿವೆ. ಮಹಿಳಾ ವಿಭಾಗದಲ್ಲಿ ಭಾರತ ‘ಬಿ’ ಗುಂಪಿನಲ್ಲಿ ಚೈನೀಸ್ ತೈಪೆ ಹಾಗೂ ಥಾಯ್ಲೆಂಡ್ ಜೊತೆ ಸ್ಥಾನ ಪಡೆದಿದೆ. 5 ಗುಂಪುಗಳಲ್ಲಿದ್ದು, ಗುಂಪಿನಲ್ಲಿ ಅಗ್ರಸ್ಥಾನ ಪಡೆವ ತಂಡಗಳ ಜೊತೆ ಉತ್ತಮ ಪ್ರದರ್ಶನ ನೀಡುವ 3 ತಂಡಗಳು ಕ್ವಾರ್ಟರ್‌ಗೇರಲಿವೆ.
ಅಂತಾರಾಷ್ಟ್ರೀಯ ಚೆಸ್ ರೇಟಿಂಗ್ ಪಟ್ಟಿಗೆ 5ರ ತೇಜಸ್!
ಚೆನ್ನೈ: ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್(ಫಿಡೆ)ನ ರೇಟಿಂಗ್ ಅಂಕ ಸಂಪಾದಿಸಿದ ವಿಶ್ವದ ಅತಿಕಿರಿಯ ಎನ್ನುವ ದಾಖಲೆಯನ್ನು ಭಾರತದ 5 ವರ್ಷದ ತೇಜಸ್ ತಿವಾರಿ ಬರೆದಿದ್ದಾರೆ. ಉತ್ತರಾಖಂಡದ ಹಲ್ದ್ವಾನಿ ಎಂಬಲ್ಲಿ ಯುಕೆಜಿ ಓದುತ್ತಿರುವ ತೇಜಸ್, ರುದ್ರಪುರದಲ್ಲಿ ಇತ್ತೀಚೆಗೆ ನಡೆದ ಫಿಡೆ ರೇಟಿಂಗ್ ಚೆಸ್ ಟೂರ್ನಿಯಲ್ಲಿ ತಮ್ಮ ಮೊದಲ ರೇಟಿಂಗ್(1149) ಅಂಕ ಗಳಿಸಿದರು.
ತಾನೇ ತೋಡಿಕೊಂಡ ಹಳ್ಳಕ್ಕೆ ತಾವೇ ಬಿದ್ದರಾ ಶುಭ್‌ಮನ್ ಗಿಲ್..?
ಮೂರೂವರೆ ವರ್ಷವಿದ್ದಾಗಲೇ ಚೆಸ್‌ನಲ್ಲಿ ಆಸಕ್ತಿ ತೋರಿದ ತೇಜಸ್ 4ನೇ ವಯಸ್ಸಿಗೇ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದರು. ರಾಷ್ಟ್ರೀಯ ಟೂರ್ನಿಗಳಲ್ಲೂ ಸ್ಪರ್ಧಿಸಲು ತೇಜಸ್‌ಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಈ ವರೆಗೂ ಅವರು 13 ರಾಜ್ಯಗಳಲ್ಲಿ ಅಂಡರ್-5, ಅಂಡರ್-8 ವಿಭಾಗಗಳಲ್ಲಿ ಸ್ಪರ್ಧಿಸಿ ಕೆಲವು ಪ್ರಶಸ್ತಿ ಸಹ ಜಯಿಸಿದ್ದಾರೆ. ತೇಜಸ್‌ರನ್ನು ಫಿಡೆ ಟ್ವೀಟ್ ಮೂಲಕ ಅಭಿನಂದಿಸಿ, ಅವರ ಸಾಧನೆಯನ್ನು ಕೊಂಡಾಡಿದೆ.
ಹಾಕಿ: ಡಚ್ ವಿರುದ್ಧ ಭಾರತ 1-1ರ ಡ್ರಾ
ಬಾರ್ಸಿಲೋನಾ: ಸ್ಪ್ಯಾನಿಶ್ ಹಾಕಿ ಫೆಡರೇಶನ್ ಆಯೋಜಿಸಿರುವ ಆಹ್ವಾನಿತ ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ಭಾರತ ಪುರುಷರ ತಂಡ ಪ್ರೊ ಲೀಗ್ ಚಾಂಪಿಯನ್ ನೆದರ್‌ಲೆಂಡ್ಸ್ ವಿರುದ್ಧ 1-1 ಗೋಲುಗಳ ಡ್ರಾ ಸಾಧಿಸಿತು. ಮೊದಲ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಸೋತಿದ್ದ ಭಾರತ, ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ತೋರಿತು. ಶುಕ್ರವಾರ ಭಾರತ 3ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಿದೆ. ಇದೇ ವೇಳೆ ಮಹಿಳಾ ತಂಡ ತನ್ನ 2ನೇ ಪಂದ್ಯದಲ್ಲಿ ಸ್ಪೇನ್ ವಿರುದ್ಧ 2-2ರ ಡ್ರಾ ಸಾಧಿಸಿತು. ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು 1-1ರಲ್ಲಿ ಡ್ರಾ ಮಾಡಿಕೊಂಡಿತ್ತು.
ವಿಶ್ವ ಈಜು: ಶ್ರೀಹರಿಗೆ ಮತ್ತೊಮ್ಮೆ ನಿರಾಸೆ!
ಫುಕುವೊಕಾ(ಜಪಾನ್): ಭಾರತದ ತಾರಾ ಈಜುಪಟು, ಕರ್ನಾಟಕದ ಶ್ರೀಹರಿ ನಟರಾಜ್ ವಿಶ್ವ ಈಜು ಚಾಂಪಿಯನ್‌ಶಿಪ್‌ನ ಪುರುಷರ 200 ಮೀ. ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ 31ನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದ್ದಾರೆ. 22 ವರ್ಷದ ಶ್ರೀಹರಿ, ತಾವು ಸ್ಪರ್ಧಿಸಿದ್ದ ಹೀಟ್ಸ್‌ನಲ್ಲಿ 2 ನಿಮಿಷ 4.42 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕೊನೆಯ ಸ್ಥಾನ ಪಡೆದರು. 39 ಸ್ಪರ್ಧಿಗಳ ಪೈಕಿ ಅಗ್ರ 16 ಮಂದಿ ಸೆಮಿಫೈನಲ್ ಪ್ರವೇಶಿಸಿದರು.