Good News: ಏಷ್ಯಾಡ್‌ ಸ್ಪರ್ಧೆಗೆ ಭಾರತ ಫುಟ್ಬಾಲ್‌ ತಂಡಕ್ಕೆ ಅನುಮತಿ..!

By Kannadaprabha NewsFirst Published Jul 27, 2023, 12:56 PM IST
Highlights

ಭಾರತೀಯ ಫುಟ್ಬಾಲ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಕೊಟ್ಟ ಕ್ರೀಡಾ ಸಚಿವಾಲಯ
ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿದೆ ಭಾರತ ಪುರುಷ&ಮಹಿಳಾ ಫುಟ್ಬಾಲ್ ತಂಡಗಳು
ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರ ವರೆಗೆ ಚೀನಾದ ಹ್ಯಾಂಗ್ಝೂನಲ್ಲಿ ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟ

ನವದೆಹಲಿ(ಜು.27): ಮುಂಬರುವ ಏಷ್ಯನ್‌ ಗೇಮ್ಸ್‌ನಲ್ಲಿ ಸ್ಪರ್ಧಿಸಲು ಭಾರತ ಪುರುಷ ಹಾಗೂ ಮಹಿಳಾ ಫುಟ್ಬಾಲ್‌ ತಂಡಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯ ಅನುಮತಿ ನೀಡಿದೆ. ಏಷ್ಯಾ ರ‍್ಯಾಂಕಿಂಗ್‌ನಲ್ಲಿ ಅಗ್ರ-8ರಲ್ಲಿಲ್ಲ ಎನ್ನುವ ಕಾರಣಕ್ಕೆ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ಈ ಮೊದಲು ಪ್ರವೇಶ ನಿರಾಕರಿಸಿತ್ತು. ಆ ಬಳಿಕ ಪುರುಷರ ತಂಡದ ಪ್ರಧಾನ ಕೋಚ್‌ ಇಗೊರ್‌ ಸ್ಟಿಮಾಕ್‌ ಪ್ರಧಾನಿ ಮೋದಿ ಹಾಗೂ ಕ್ರೀಡಾ ಸಚಿವಾಲಯಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು. ನಾಯಕ ಸುನಿಲ್‌ ಚೆಟ್ರಿ ಸಹ ತಂಡವನ್ನು ಏಷ್ಯಾಡ್‌ಗೆ ಕಳುಹಿಸುವಂತೆ ಕೇಳಿಕೊಂಡಿದ್ದರು.

ಮುಂಬರುವ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರ ವರೆಗೆ ಚೀನಾದ ಹ್ಯಾಂಗ್ಝೂನಲ್ಲಿ ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟ ಜರುಗಲಿದೆ. ಇದೇ ಮೊದಲ ಬಾರಿಗೆ ಭಾರತ ಪುರುಷರ ಕ್ರಿಕೆಟ್ ತಂಡವು ಏಷ್ಯನ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದು, ಋತುರಾಜ್ ಗಾಯಕ್ವಾಡ್ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಮಹಿಳಾ ಕ್ರಿಕೆಟ್ ತಂಡವನ್ನು ಹರ್ಮನ್‌ಪ್ರೀತ್ ಕೌರ್‌ ಮುನ್ನಡೆಸಲಿದ್ದಾರೆ.

2023-24ರ ಸಂತೋಷ್‌ ಟ್ರೋಫಿ: ರಾಜ್ಯ ಫೈನಲ್‌ ಸುತ್ತಿಗೆ

ನವದೆಹಲಿ: 2023-24ರ ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕ ನೇರವಾಗಿ ಫೈನಲ್‌ ಸುತ್ತಿನಲ್ಲಿ ಆಡಲಿದೆ. ಕಳೆದ ಆವೃತ್ತಿಯ ಫೈನಲ್‌ನಲ್ಲಿ ಕರ್ನಾಟಕ ವಿರುದ್ಧ ಸೆಣಸಿದ್ದ ಮೇಘಾಲಯ ಸಹ ಫೈನಲ್‌ ಸುತ್ತಿಗೆ ಅರ್ಹತೆ ಪಡೆದಿದೆ. 38 ತಂಡಗಳು ಸ್ಪರ್ಧಿಸಲು ಟೂರ್ನಿಯ ಗುಂಪು ಹಂತದಲ್ಲಿ 36 ತಂಡಗಳು ಕಣಕ್ಕಿಳಿಯಲಿವೆ. ತಲಾ 6 ತಂಡಗಳ 6 ಗುಂಪುಗಳಿರಲಿದ್ದು, ಅಗ್ರಸ್ಥಾನ ಪಡೆದ 6 ತಂಡಗಳ ಜೊತೆ ಉತ್ತಮ ಪ್ರದರ್ಶನ ತೋರುವ ಇನ್ನೂ 4 ತಂಡಗಳು ಫೈನಲ್‌ ಸುತ್ತಿಗೇರಲಿವೆ. ಫೈನಲ್‌ ಸುತ್ತಿನಲ್ಲಿ ಒಟ್ಟು 12 ತಂಡಗಳು ಸೆಣಸಲಿವೆ.

ವಿರಾಟ್ ಕೊಹ್ಲಿ ಏಷ್ಯಾದ ಎರಡನೇ ಶ್ರೀಮಂತ ಅಥ್ಲೀಟ್..! ಹಾಗಿದ್ರೆ ಮೊದಲ ಸ್ಥಾನದಲ್ಲಿರೋರು ಯಾರು?

ಹಾಕಿ: ಸ್ಪೇನ್‌ ವಿರುದ್ಧ ಭಾರತಕ್ಕೆ 1-2 ಸೋಲು

ಟೆರ್ರಾಸ್ಸಾ(ಸ್ಪೇನ್‌): ಸ್ಪ್ಯಾನಿಶ್‌ ಹಾಕಿ ಫೆಡರೇಶನ್‌ಗೆ 100 ವರ್ಷ ತುಂಬಿದ ಸಂಭ್ರಮದಲ್ಲಿ ಆಯೋಜನೆಗೊಂಡಿರುವ ಆಹ್ವಾನಿತ ಹಾಕಿ ಟೂರ್ನಿಯಲ್ಲಿ ಆತಿಥೇಯ ತಂಡದ ವಿರುದ್ಧ ಭಾರತ ಪುರುಷರ ತಂಡ 1-2 ಗೋಲುಗಳ ಸೋಲು ಕಂಡಿದೆ. ಏಷ್ಯನ್‌ ಚಾಂಪಿಯನ್‌ಶಿಪ್‌ ಹಾಗೂ ಏಷ್ಯನ್‌ ಗೇಮ್ಸ್‌ ಸಿದ್ಧತೆಗಾಗಿ ಈ ಟೂರ್ನಿಯನ್ನು ಭಾರತ ಬಳಸಿಕೊಳ್ಳುತ್ತಿದೆ. ಪುರುಷರ ಟೂರ್ನಿಯಲ್ಲಿ ನೆದರ್‌ಲೆಂಡ್ಸ್‌, ಇಂಗ್ಲೆಂಡ್‌ ಸಹ ಪಾಲ್ಗೊಂಡಿವೆ. ಇನ್ನು ಮೊದಲ ಪಂದ್ಯದಲ್ಲಿ ಭಾರತ ಮಹಿಳೆಯರ ತಂಡ ಇಂಗ್ಲೆಂಡ್‌ ವಿರುದ್ಧ 1-1ರ ಡ್ರಾ ಸಾಧಿಸಿತು.

ಮತ್ತೊಮ್ಮೆ ಮೊದಲ ಸುತ್ತಲ್ಲೇ ಸಿಂಧು ಔಟ್‌!

ಟೋಕಿಯೋ: ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು ಕಳಪೆ ಲಯ ಮುಂದುವರಿಸಿದ್ದು, ಮತ್ತೊಮ್ಮೆ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಜಪಾನ್‌ ಓಪನ್‌ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಝಾಂಗ್‌ ಯೀ ಮನ್‌ ವಿರುದ್ಧ 12-21, 13-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು. ಈ ವರ್ಷ 13 ವಿಶ್ವ ಟೂರ್‌ ಟೂರ್ನಿಗಳನ್ನು ಆಡಿರುವ ಸಿಂಧು, 7ನೇ ಬಾರಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.

ಏಕದಿನ ವಿಶ್ವಕಪ್‌ಗೆ ಭಾರತ ಸಂಭಾವ್ಯ ತಂಡವನ್ನು ಹೆಸರಿಸಿದ ವಾಸೀಂ ಜಾಫರ್..! ಯಾರಿಗೆಲ್ಲಾ ಸಿಕ್ಕಿದೆ ಸ್ಥಾನ?

ಲಕ್ಷ್ಯ, ಸಾತ್ವಿಕ್‌-ಚಿರಾಗ್‌ ಮುನ್ನಡೆ: ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಭಾರತದವರೇ ಆದ ಪ್ರಿಯಾನ್ಶು ವಿರುದ್ಧ ಗೆದ್ದು 2ನೇ ಸುತ್ತಿಗೇರಿದರೆ, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಸಹ 2ನೇ ಸುತ್ತು ಪ್ರವೇಶಿಸಿದರು.

click me!