* ಕಿಲಿಯಾನ್ ಎಂಬಾಪೆ ಸಹ ಸೌದಿ ಫುಟ್ಬಾಲ್‌ನಲ್ಲಿ ಆಡುವ ಸಾಧ್ಯತೆ
* ಎಂಬಾಪೆ, 2024ರಲ್ಲಿ ಸ್ಪೇನ್‌ನ ರಿಯಾಲ್ ಮ್ಯಾಡ್ರಿಡ್ ಸೇರಲಿದ್ದಾರೆ ಎನ್ನುವ ಸುದ್ದಿ
* ತಮ್ಮ ದೇಶದ ಲೀಗ್‌ನಲ್ಲಿ ಆಡುವಂತೆ ಸೌದಿಯ ಅಲ್-ಹಿಲಾಲ್ ತಂಡ ಎಂಬಾಪೆಯನ್ನು ಕೇಳಿಕೊಂಡಿದೆ
ರಿಯಾದ್(ಜು.25): ಕ್ರಿಸ್ಟಿಯಾನೋ ರೊನಾಲ್ಡೋ ಬಳಿಕ ಫ್ರಾನ್ಸ್‌ನ ತಾರಾ ಫುಟ್ಬಾಲಿಗ ಕಿಲಿಯಾನ್ ಎಂಬಾಪೆ ಸಹ ಸೌದಿ ಫುಟ್ಬಾಲ್‌ನಲ್ಲಿ ಆಡುವ ಸಾಧ್ಯತೆ ಇದೆ. ಫ್ರಾನ್ಸ್‌ನ ಜನಪ್ರಿಯ ತಂಡ ಪ್ಯಾರಿಸ್ ಸೇಂಟ್ ಜರ್ಮೈನ್(ಪಿಎಸ್‌ಜಿ) ಅನ್ನು ತೊರೆಯಲು ನಿರ್ಧರಿಸಿರುವ ಎಂಬಾಪೆ, 2024ರಲ್ಲಿ ಸ್ಪೇನ್‌ನ ರಿಯಾಲ್ ಮ್ಯಾಡ್ರಿಡ್ ಸೇರಲಿದ್ದಾರೆ ಎಂದು ಸುದ್ದಿಯಾಗಿದೆ.
ಆದರೆ ಸ್ಪ್ಯಾನಿಶ್ ಲೀಗ್‌ಗೆ ಪ್ರವೇಶಿಸುವ ಮೊದಲು ಕೇವಲ ಒಂದು ಸೀಸನ್‌ನಾದರೂ ಸರಿ ತಮ್ಮ ದೇಶದ ಲೀಗ್‌ನಲ್ಲಿ ಆಡುವಂತೆ ಸೌದಿಯ ಅಲ್-ಹಿಲಾಲ್ ತಂಡ ಎಂಬಾಪೆಯನ್ನು ಕೇಳಿಕೊಂಡಿದ್ದು, ವಿಶ್ವ ದಾಖಲೆಯ 332 ಮಿಲಿಯನ್ ಅಮಿರಿಕನ್ ಡಾಲರ್(ಅಂದಾಜು 2,716 ಕೋಟಿ ರು.) ಬಿಡ್ ಸಲ್ಲಿಕೆ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬ್ರಿಟನ್‌ನ ಪ್ರತಿಷ್ಠಿತ ಮಾಧ್ಯಮವೊಂದರ ವರದಿ ಪ್ರಕಾರ, ಕ್ಲಬ್ 776 ಮಿಲಿಯನ್ ಅಮೆರಿಕನ್ ಡಾಲರ್(ಅಂದಾಜು 6348 ಕೋಟಿ ರು.)ವರೆಗೂ ನೀಡಲು ಸಿದ್ಧವಿದೆ ಎನ್ನಲಾಗಿದೆ. ಸದ್ಯ ಕ್ರಿಸ್ಟಿಯಾನೋ ರೊನಾಲ್ಡೋ ಅವರಿಗೆ ಅಲ್-ನಸ್ರ್ ತಂಡ ವಾರ್ಷಿಕ 1,636 ಕೋಟಿ ರುಪಾಯಿ ವೇತನ ನೀಡುತ್ತಿದೆ.
undefined
808 ಮೇಕೆಗಳನ್ನುಬಳಸಿ ಮೆಸ್ಸಿ ಚಿತ್ರ!
ಫ್ಲೋರಿಡಾ: ಅಮೆರಿಕದ ಮೇಜರ್ ಸಾಕರ್ ಲೀಗ್(ಎಂಎಸ್‌ಎಲ್)ಗೆ ಪಾದಾರ್ಪಣೆ ಮಾಡಿದ ಅರ್ಜೆಂಟೀನಾದ ದಿಗ್ಗಜ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿಯನ್ನು ವಿಶೇಷವಾಗಿ ಸ್ವಾಗತಿಸಿದ ಪ್ರಸಂಗ ನಡೆಯಿತು. ತಂಡದ ಪರ ತಮ್ಮ ಚೊಚ್ಚಲ ಪಂದ್ಯದಲ್ಲೇ ಗೋಲು ಬಾರಿಸಿದ ಮೆಸ್ಸಿ, ವೃತ್ತಿಬದುಕಿನಲ್ಲಿ 808ನೇ ಗೋಲು ದಾಖಲಿಸಿದರು. ಚೊಚ್ಚಲ ಗೋಲನ್ನು ಸಂಭ್ರಮಿಸಲು ಮೈದಾನದಲ್ಲಿ 808 ಮೇಕೆಗಳನ್ನು ನಿಲ್ಲಿಸಿ ಮೆಸ್ಸಿಯ ಮುಖ ಹೋಲುವ ಚಿತ್ರವನ್ನು ರಚಿಸಲಾಯಿತು. ದಿಗ್ಗಜ ಆಟಗಾರರನ್ನು ಸಾಮಾಜಿಕ ತಾಣಗಳಲ್ಲಿ G.O.A.T(ಗ್ರೇಟೆಸ್ಟ್ ಆಫ್ ಆಲ್ ಟೈಮ್-ಸಾರ್ವಕಾಲಿಕ ಶ್ರೇಷ್ಠ) ಎಂದು ಬಣ್ಣಿಸಲಾಗುತ್ತದೆ.
ಗ್ರ್ಯಾನ್ ಪ್ರಿ ಬ್ಯಾಡ್ಮಿಂಟನ್ ಲೀಗ್‌ಗೆ ಹೈಕೋರ್ಟ್ ರಿಲೀಫ್!
ಸಚಿವಾಲಯ ಒಪ್ಪಿದರೆ ಏಷ್ಯಾಡ್‌ಗೆ ಫುಟ್ಬಾಲ್ ಟೀಂ
ನವದೆಹಲಿ: ಪ್ರಧಾನ ಕೋಚ್ ಇಗೊರ್ ಸ್ಟಿಮಾಕ್ ಹಾಗೂ ಅಭಿಮಾನಿಗಳಿಂದ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಫುಟ್ಬಾಲ್ ತಂಡ ಆಡುವ ಸಾಧ್ಯತೆ ಇದೆ. ತಂಡವನ್ನು ಕಳುಹಿಸಲು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಸಿದ್ಧತೆ ನಡೆಸಿದ್ದು, ಕೇಂದ್ರ ಕ್ರೀಡಾ ಸಚಿವಾಲಯದ ಅನುಮತಿಗಾಗಿ ಕಾಯುತ್ತಿದೆ. ಏಷ್ಯಾ ರ್‍ಯಾಂಕಿಂಗ್‌ನಲ್ಲಿ ಅಗ್ರ-8ರಲ್ಲಿರುವ ತಂಡವನ್ನಷ್ಟೇ ಏಷ್ಯಾಡ್‌ಗೆ ಕಳುಹಿಸುವುದಾಗಿ ಸಚಿವಾಲಯ ಷರತ್ತು ವಿಧಿಸಿದೆ. ಆದರೆ ಇತ್ತೀಚೆಗೆ ಭಾರತ ಫುಟ್ಬಾಲ್ ತಂಡ ಉತ್ತಮ ಪ್ರದರ್ಶನ ತೋರುತ್ತಿರುವ ಹಿನ್ನೆಲೆಯಲ್ಲಿ ಏಷ್ಯಾ ರ್‍ಯಾಂಕಿಂಗ್‌ನಲ್ಲಿ 18ನೇ ಸ್ಥಾನದಲ್ಲಿದ್ದರೂ ತಂಡವನ್ನು ಕಳುಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸೆ.23ರಿಂದ ಏಷ್ಯನ್ ಗೇಮ್ಸ್ ನಡೆಯಲಿದೆ.
ಏಷ್ಯಾಡ್‌ನಲ್ಲಿ ಭಾರತ ಸಾಫ್ಟ್‌ಬಾಲ್ ತಂಡ ಕಣಕ್ಕೆ
ನವದೆಹಲಿ: ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಸಾಫ್ಟ್‌ಬಾಲ್ ಕ್ರೀಡೆಯನ್ನು ಪರಿಚಯಿಸಲಾಗುತ್ತಿದ್ದು, ಭಾರತ ಮಹಿಳಾ ತಂಡ ಕಣಕ್ಕಿಳಿಯಲಿದೆ. ಸೋಮವಾರ 16 ಸದಸ್ಯರ ತಂಡವನ್ನು ಭಾರತೀಯ ಸಾಫ್ಟ್‌ಬಾಲ್ ಸಂಸ್ಥೆ ಪ್ರಕಟಿಸಿತು. ತಂಡದಲ್ಲಿ ಕರ್ನಾಟಕದ ಆಟಗಾರ್ತಿಯರಿಲ್ಲ. ಬೇಸ್‌ಬಾಲ್‌ಗೆ ಹೋಲುವ ಈ ಕ್ರೀಡೆಯು ಒಲಿಂಪಿಕ್ ಕ್ರೀಡೆ ಸಹ ಆಗಿದೆ.
ಸೆಕ್ಸಿ ಫೋಟೋಗಳನ್ನು ಹಂಚಿಕೊಂಡ ಮಾಜಿ ವಿಂಬಲ್ಡನ್ ಚಾಂಪಿಯನ್ ಮರಿಯಾ ಶೆರಪೋವಾ..!
ಏಷ್ಯಾಡ್‌ಗಿಲ್ಲ ಆಯ್ಕೆ: ಕೋರ್ಟ್ ಮೆಟ್ಟಿಲೇರಿದ ಬಾಕ್ಸರ್ ಅಮಿತ್!
ನವದೆಹಲಿ: ಮುಂಬರುವ ಏಷ್ಯನ್ ಗೇಮ್ಸ್‌ಗೆ ಆಯ್ಕೆ ಮಾಡದಕ್ಕೆ ಸಿಟ್ಟಾಗಿರುವ ತಾರಾ ಬಾಕ್ಸರ್ ಅಮಿತ್ ಪಂಘಲ್, ಭಾರತೀಯ ಬಾಕ್ಸಿಂಗ್ ಫೆಡರೇಶನ್(ಬಿಎಫ್‌ಐ) ವಿರುದ್ಧ ಪಂಜಾಬ್-ಹರ್ಯಾಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದಿರುವ ಭಾರತದ ಏಕೈಕ ಪುರುಷರ ಬಾಕ್ಸರ್ ಎನಿಸಿರುವ, ಮಾಜಿ ವಿಶ್ವ ನಂ.1 ಅಮಿತ್ ಬಿಎಫ್‌ಐನ ಆಯ್ಕೆ ಪ್ರಕ್ರಿಯೆ ಬಗ್ಗೆ ಕಿಡಿಕಾರಿದ್ದಾರೆ.
WWE ಇತಿಹಾಸದ ಟಾಪ್ 5 ಹಾಟ್ ಮಹಿಳಾ ಕುಸ್ತಿಪಟುಗಳಿವರು..!
‘ಟ್ರಯಲ್ಸ್ ನಡೆಸುವಂತೆ ನಾನು ಒತ್ತಾಯಿಸಿದ್ದೇನೆ. ಅಂಕಗಳ ಆಧಾರದಲ್ಲಿ ಏಕೆ ಆಯ್ಕೆ ನಡೆಸಲಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ವಿಶ್ವ ಚಾಂಪಿಯನ್‌ಶಿಪ್‌ಗೆ ನನ್ನ ಬದಲು ಆಯ್ಕಯಾದ ದೀಪಕ್‌ರನ್ನು ನಾನು ಕಳೆದ ವರ್ಷ ಕಾಮನ್‌ವೆಲ್ತ್ ಗೇಮ್ಸ್ ಟ್ರಯಲ್ಸ್‌ನಲ್ಲಿ 5-0ಯಲ್ಲಿ ಸೋಲಿಸಿದ್ದೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ದೀಪಕ್ ಯಾರ ವಿರುದ್ಧ ಸೋತರೋ, ಆತನನ್ನೂ ನಾನು ಈ ಹಿಂದೆ ಸೋಲಿಸಿದ್ದೇನೆ. ಇಷ್ಟಾದರೂ ಬಿಎಫ್‌ಐ ನನ್ನನ್ನು ಆಯ್ಕೆ ಮಾಡಿಲ್ಲ ಎಂದು ತಿಳಿಯುತ್ತಿಲ್ಲ’ ಎಂದು ಏಷ್ಯನ್ ಗೇಮ್ಸ್‌ನ 51 ಕೆ.ಜಿ. ವಿಭಾಗದ ಹಾಲಿ ಚಾಂಪಿಯನ್ ಅಮಿತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.