ಬ್ರೆಜಿಲ್‌ನ ದಿಗ್ಗಜ ಫುಟ್ಬಾಲಿಗ ನೇಯ್ಮರ್‌ ಭಾರತ ಭೇಟಿ ರದ್ದು?

By Kannadaprabha News  |  First Published Oct 19, 2023, 12:00 PM IST

ಸೌದಿಯ ಅಲ್‌-ಹಿಲಾಲ್‌ ಕ್ಲಬ್‌ ತಂಡದಲ್ಲಿರುವ ನೇಯ್ಮರ್‌ ನ.6ರಂದು ನವಿ ಮುಂಬೈನಲ್ಲಿ ನಿಗದಿಯಾಗಿರುವ ಮುಂಬೈ ಸಿಟಿ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆ ಎಂಬ ಸುದ್ದಿ ಭಾರತೀಯ ಫುಟ್ಬಾಲ್‌ ಅಭಿಮಾನಿಗಳಲ್ಲಿ ಭಾರಿ ಉತ್ಸಾಹಕ್ಕೆ ಕಾರಣವಾಗಿತ್ತು. 


ನವದೆಹಲಿ(ಅ.19): ಬ್ರೆಜಿಲ್‌ನ ದಿಗ್ಗಜ ಫುಟ್ಬಾಲಿಗ ನೇಯ್ಮರ್‌, ಎಎಫ್‌ಸಿ ಚಾಂಪಿಯನ್ಸ್‌ ಲೀಗ್‌ ಪಂದ್ಯವಾಡಲು ಭಾರತಕ್ಕೆ ಬರುವುದು ಅನುಮಾನವೆನಿಸಿದೆ. ಸೌದಿಯ ಅಲ್‌-ಹಿಲಾಲ್‌ ಕ್ಲಬ್‌ ತಂಡದಲ್ಲಿರುವ ನೇಯ್ಮರ್‌ ನ.6ರಂದು ನವಿ ಮುಂಬೈನಲ್ಲಿ ನಿಗದಿಯಾಗಿರುವ ಮುಂಬೈ ಸಿಟಿ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆ ಎಂಬ ಸುದ್ದಿ ಭಾರತೀಯ ಫುಟ್ಬಾಲ್‌ ಅಭಿಮಾನಿಗಳಲ್ಲಿ ಭಾರಿ ಉತ್ಸಾಹಕ್ಕೆ ಕಾರಣವಾಗಿತ್ತು. 

ಆದರೆ ಮಾಂಟೆವಿಡಿಯೊದಲ್ಲಿ ಉರುಗ್ವೆ ವಿರುದ್ಧದ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ಎಡಗಾಲಿನ ಮಂಡಿ ಗಾಯಕ್ಕೆ ತುತ್ತಾದ ನೇಯ್ಮರ್‌ರನ್ನು ಸ್ಟ್ರೆಚರ್‌ನಲ್ಲಿ ಮೈದಾನದಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಗಾಯದ ಪ್ರಮಾಣದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದ್ದು, ಸದ್ಯಕ್ಕೆ ಅವರು ಭಾರತಕ್ಕೆ ಬರುವುದು ಅನುಮಾನ ಎಂದೇ ಹೇಳಲಾಗುತ್ತಿದೆ.

Tap to resize

Latest Videos

undefined

ರಾಷ್ಟ್ರೀಯ ಗೇಮ್ಸ್‌ನಲ್ಲಿ ವಾಲಿಬಾಲ್‌ಗಿಲ್ಲ ಜಾಗ!

ನವದೆಹಲಿ: ಇತ್ತೀಚಿಗೆ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಪುರುಷರ ವಾಲಿಬಾಲ್‌ ತಂಡ ಅಮೋಘ ಪ್ರದರ್ಶನ ತೋರಿದ ಹೊರತಾಗಿಯೂ ಅ.26ರಿಂದ ಗೋವಾದಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟದಿಂದ ವಾಲಿಬಾಲ್‌ ಸ್ಪರ್ಧೆಯನ್ನು ಕೈಬಿಡಲಾಗಿದೆ. ಇದಕ್ಕೆ ಕಾರಣ, ಭಾರತೀಯ ಒಲಿಂಪಿಕ್ಸ್‌ ಸಮಿತಿ(ಐಒಎ) ನೇಮಿತ ತಾತ್ಕಾಲಿಕ ಸಮಿತಿಯು ಅಗ್ರ-8 ರಾಜ್ಯ ತಂಡಗಳನ್ನು ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲು ವಿಫಲವಾಗಿದೆ. 

Asian Games 2023: ಕ್ರೀಡಾಪಟುಗಳಿಗೆ ಎಲ್ಲ ಇಲಾಖೆಗಳಲ್ಲೂ 2% ಮೀಸಲು?

ಭಾರತೀಯ ವಾಲಿಬಾಲ್‌ ಫೆಡರೇಶನ್‌(ವಿಎಫ್‌ಐ) ಚುನಾವಣೆ ನಡೆಯದ ಕಾರಣ, ಫೆಡರೇಶನ್‌ ಅನ್ನು ಅಮಾನತುಗೊಳಿಸಿ ತಾತ್ಕಾಲಿಕ ಸಮಿತಿ ರಚಿಸಲಾಗಿದೆ. ಆದರೆ ಅಗ್ರ-8 ತಂಡಗಳನ್ನು ಆಯ್ಕೆ ಮಾಡಲು ಯಾವ ಮಾನದಂಡ ಅನುಸರಿಸಬೇಕು ಎನ್ನುವುದು ಸಮಿತಿಗೆ ತಿಳಿದಿಲ್ಲ. ಅಲ್ಲದೇ ತಾನು ಆಯ್ಕೆ ಮಾಡದ ರಾಜ್ಯದ ಸಂಸ್ಥೆಗಳಿಂದ ಪ್ರತಿಭಟನೆ ಎದುರಾಗಬಹುದು ಎನ್ನುವ ಆತಂಕವೂ ಇರುವ ಕಾರಣ, ರಾಷ್ಟ್ರೀಯ ಗೇಮ್ಸ್‌ನಿಂದ ಸ್ಪರ್ಧೆಯನ್ನು ಕೈಬಿಡುವಂತೆ ಕೇಳಿಕೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಆಯ್ಕೆ ಸವಾಲು ಏಕೆ?

ಐಒಎ ನಿಯಮದ ಪ್ರಕಾರ ರಾಷ್ಟ್ರೀಯ ಗೇಮ್ಸ್‌ಗೆ ತಂಡಗಳನ್ನು ಹಿಂದಿನ ಸಾಲಿನ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಗಳಿಸಿದ ರ್‍ಯಾಂಕಿಂಗ್‌ ಆಧಾರದಲ್ಲಿ ಆಯ್ಕೆ ಮಾಡಬೇಕು. ಆದರೆ ಈ ಹಿಂದಿನ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಅನ್ನು ವಿಎಫ್‌ಐನ ಅನಧಿಕೃತ ಘಟಕವು ಫೆಬ್ರವರಿಯಲ್ಲಿ ಆಯೋಜಿಸಿತ್ತು. ಅದರ ಫಲಿತಾಂಶಗಳನ್ನು ತಾತ್ಕಾಲಿಕ ಸಮಿತಿಯು ಪರಿಗಣಿಸಿ ಅಗ್ರ-8 ತಂಡಗಳನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ತಾನೇ ಹೊಸದಾಗಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ನಡೆಸಲು ಸಮಯಾವಕಾಶದ ಕೊರತೆ ಇದೆ ಎಂದು ಸಮಿತಿ ಅಸಹಾಯಕತೆ ವ್ಯಕ್ತಪಡಿಸಿದೆ.

ಬಾಂಗ್ಲಾ ಎದುರಿನ ಪಂದ್ಯಕ್ಕೂ ಮುನ್ನ ಬಿಗ್ ಶಾಕ್: ರೋಹಿತ್ ಶರ್ಮಾ ಮೇಲೆ ಪೊಲೀಸರಿಂದ 3 ಪ್ರತ್ಯೇಕ ಕೇಸ್ ದಾಖಲು..!

ಪ್ರಿ ಕ್ವಾರ್ಟರ್‌ಗೆ ರಾಜ್ಯದ ಸೂರಜ್‌, ಪ್ರಜ್ವಲ್‌ ದೇವ್‌

ಧಾರವಾಡ: ಇಲ್ಲಿ ನಡೆಯುತ್ತಿರುವ ಐಟಿಎಫ್‌ ಧಾರವಾಡ ಓಪನ್‌ ಪುರುಷರ ಟೆನಿಸ್‌ ಪಂದ್ಯಾವಳಿಯಲ್ಲಿ ಕರ್ನಾಟಕದ ಸೂರಜ್‌ ಪ್ರಬೋಧ್‌ ಹಾಗೂ ಪ್ರಜ್ವಲ್‌ ದೇವ್‌, ಸಿಂಗಲ್ಸ್‌ ವಿಭಾಗದಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸೂರಜ್‌, 2 ಗಂಟೆ 20 ನಿಮಿಷ ಹೋರಾಡಿ ಭಾರತದವರೇ ಆದ ರಾಘವ್‌ ಜೈಸಿಂಘಾನಿ ವಿರುದ್ಧ 6-4, 6-4 ಸೆಟ್‌ಗಳಲ್ಲಿ ಗೆದ್ದರೆ, ಆಸ್ಟ್ರೇಲಿಯಾದ ಲ್ಯೂಕ್‌ ಸೊರೆನ್ಸನ್‌ ವಿರುದ್ಧ ಪ್ರಜ್ವಲ್‌ 7-5, 6-4ರಲ್ಲಿ ಗೆಲುವು ಸಾಧಿಸಿದರು. ಭಾರತದ ತಾರಾ ಆಟಗಾರರ ರಾಮ್‌ಕುಮಾರ್‌ ರಾಮನಾಥನ್‌, ಅಗ್ರ ಶ್ರೇಯಾಂಕಿತ ಅಮೆರಿಕದ ನಿಕ್‌ ಚಾಪೆಲ್‌ ಸಹ ಪ್ರಿ ಕ್ವಾರ್ಟರ್‌ ಪ್ರವೇಶಿಸಿದರು.
 

click me!