ಮೆರ್ಡೆಕಾ ಕಪ್‌ ಫುಟ್ಬಾಲ್‌: ಇಂದು ಭಾರತ-ಮಲೇಷ್ಯಾ ಬಿಗ್ ಫೈಟ್

By Kannadaprabha News  |  First Published Oct 13, 2023, 11:50 AM IST

1957ರಿಂದಲೂ ನಡೆಯುತ್ತಿರುವ ಮೆರ್ಡೆಕಾ ಕಪ್‌ನಲ್ಲಿ ಭಾರತ ಈ ವರೆಗೆ 17 ಬಾರಿ ಆಡಿದ್ದು, ಒಮ್ಮೆಯೂ ಚಾಂಪಿಯನ್‌ ಆಗಿಲ್ಲ. 1959 ಹಾಗೂ 1964ರಲ್ಲಿ ರನ್ನರ್‌-ಅಪ್‌ ಆಗಿದ್ದು ಭಾರತದ ಶ್ರೇಷ್ಠ ಸಾಧನೆ. 2001ರಲ್ಲಿ ಭಾರತ ಕೊನೆ ಬಾರಿ ಟೂರ್ನಿಯಲ್ಲಿ ಆಡಿತ್ತು. ಈ ಬಾರಿ ಚೊಚ್ಚಲ ಪ್ರಶಸ್ತಿ ತನ್ನದಾಗಿಸಿಕೊಳ್ಳಲು ಕಾಯುತ್ತಿದೆ.


ಕೌಲಾಲಂಪುರ(ಅ.13): ‘ಮಿನಿ ಏಷ್ಯಾಕಪ್‌’ ಎಂದೇ ಕರೆಸಿಕೊಳ್ಳುವ ಮೆರ್ಡೆಕಾ ಕಪ್‌ ಫುಟ್ಬಾಲ್‌ ಟೂರ್ನಿ ಶುಕ್ರವಾರ ಆರಂಭಗೊಳ್ಳಲಿದ್ದು, ಭಾರತ ತಂಡ ಮಲೇಷ್ಯಾ ವಿರುದ್ಧ ಸೆಣಸಾಡಲಿದೆ. ಟೂರ್ನಿಯಲ್ಲಿ ಮೊದಲ 4 ತಂಡಗಳಿದ್ದರೂ ಫೆಲೆಸ್ತೀನ್‌ ಈ ಬಾರಿ ಆಡದಿರಲು ನಿರ್ಧರಿಸಿದೆ. ಹೀಗಾಗಿ 3 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. 

ಶುಕ್ರವಾರದ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್‌ ಪ್ರವೇಶಿಸಲಿದ್ದು, ಪ್ರಶಸ್ತಿಗಾಗಿ ತಜಿಕಿಸ್ತಾನ ವಿರುದ್ಧ ಅ.17ರಂದು ಸೆಣಸಾಡಲಿದೆ. 1957ರಿಂದಲೂ ನಡೆಯುತ್ತಿರುವ ಮೆರ್ಡೆಕಾ ಕಪ್‌ನಲ್ಲಿ ಭಾರತ ಈ ವರೆಗೆ 17 ಬಾರಿ ಆಡಿದ್ದು, ಒಮ್ಮೆಯೂ ಚಾಂಪಿಯನ್‌ ಆಗಿಲ್ಲ. 1959 ಹಾಗೂ 1964ರಲ್ಲಿ ರನ್ನರ್‌-ಅಪ್‌ ಆಗಿದ್ದು ಭಾರತದ ಶ್ರೇಷ್ಠ ಸಾಧನೆ. 2001ರಲ್ಲಿ ಭಾರತ ಕೊನೆ ಬಾರಿ ಟೂರ್ನಿಯಲ್ಲಿ ಆಡಿತ್ತು. ಈ ಬಾರಿ ಚೊಚ್ಚಲ ಪ್ರಶಸ್ತಿ ತನ್ನದಾಗಿಸಿಕೊಳ್ಳಲು ಕಾಯುತ್ತಿದೆ.

Latest Videos

undefined

ICC World Cup 2023 ಅಭ್ಯಾಸ ಆರಂಭಿಸಿದ ಶುಭ್‌ಮನ್ ಗಿಲ್‌: ಪಾಕಿಸ್ತಾನ ಪಂದ್ಯಕ್ಕೆ ಫಿಟ್‌?

ರಷ್ಯಾ ಒಲಿಂಪಿಕ್‌ ಸಮಿತಿ ನಿಷೇಧಿಸಿ ಐಒಸಿ ಆದೇಶ

ಮುಂಬೈ: ಅಂತಾರಾಷ್ಟ್ರೀ ಒಲಿಂಪಿಕ್‌ ಕೌನ್ಸಿಲ್‌(ಐಒಸಿ) ಕಾರ್ಯನಿರ್ವಹಣಾ ಮಂಡಳಿಯು ಗುರುವಾರ ರಷ್ಯಾ ಒಲಿಂಪಿಕ್‌ ಸಮಿತಿ(ಆರ್‌ಒಸಿ)ಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಹೀಗಾಗಿ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ರಷ್ಯಾದ ಅಥ್ಲೀಟ್‌ಗಳು ತಮ್ಮ ದೇಶದ ಹೆಸರು, ಧ್ವಜ ಬಳಸದೆ ತಟಸ್ಥ ಸ್ಪರ್ಧಿಗಳಾಗಿ ಕಣಕ್ಕಿಳಿಯಬೇಕಾಗುತ್ತದೆ. ‘ಉಕ್ರೇನ್‌ನ ರಾಷ್ಟ್ರೀಯ ಒಲಿಂಪಿಕ್ ಸಮಿತಿ(ಎನ್‌ಒಸಿ)ಯ ಅಧಿಕಾರದಲ್ಲಿರುವ ಪ್ರಾದೇಶಿಕ ಕ್ರೀಡಾ ಸಂಸ್ಥೆಗಳನ್ನು ತನ್ನ ಸದಸ್ಯರನ್ನಾಗಿ ಸೇರಿಸುವ ಬಗ್ಗೆ ರಷ್ಯಾ ಒಲಂಪಿಕ್ ಸಮಿತಿಯು ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಈ ಮೂಲಕ ಆರ್‌ಒಸಿ ನಿಯಮ ಉಲ್ಲಂಘಿಸಿದೆ’ ಎಂದು ಐಒಸಿ ಪ್ರಕಟಣೆಯಲ್ಲಿ ತಿಳಿಸಿದೆ.

62ನೇ ರಾಷ್ಟ್ರೀಯ ಅಥ್ಲೆಟಿಕ್ಸ್‌: ವನಿತೆಯರ 100 ಮೀ.ನಲ್ಲಿ ಸ್ನೇಹಾಗೆ ಬೆಳ್ಳಿ

ಬೆಂಗಳೂರು: 62ನೇ ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಮಣಿಕಂಠ ನಿರೀಕ್ಷೆಯಂತೆಯೇ ಪುರುಷರ 100 ಮೀ. ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಸರ್ವಿಸಸ್‌ ತಂಡವನ್ನು ಪ್ರತಿನಿಧಿಸುತ್ತಿರುವ ಮಣಿಕಂಠ ಗುರುವಾರ ಫೈನಲ್‌ನಲ್ಲಿ 10.42 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರು. 

ಮಗಳು ಸನಾ ಎಜುಕೇಷನ್‌ಗೆ ಸೌರವ್ ಗಂಗೂಲಿ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಬುಧವಾರ ಹೀಟ್ಸ್‌ನಲ್ಲಿ ಮಣಿಕಂಠ 10.23 ಸೆಕೆಂಡ್‌ಗಳಲ್ಲಿ ಓಟ ಪೂರ್ತಿಗೊಳಿ ರಾಷ್ಟ್ರೀಯ ದಾಖಲೆ ಬರೆದಿದ್ದರು. ಇನ್ನು, ಮಹಿಳೆಯರ 100 ಮೀ. ಓಟದಲ್ಲಿ ಕರ್ನಾಟಕದ ಸ್ನೇಹಾ 11.42 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಮಹಿಳೆಯರ 100 ಮೀ. ಹರ್ಡಲ್ಸ್‌ನಲ್ಲಿ ಅಂಜಲಿ 13.53 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಮೇಧಾ ಕಾಮತ್‌ 5ನೇ ಸ್ಥಾನಿಯಾಗಿ ಪದಕ ವಂಚಿತರಾದರು. 

ಪುರುಷರ ಲಾಂಗ್‌ಜಂಪ್‌ನಲ್ಲಿ ರಾಜ್ಯದ ಪುರುಷೋತ್ತಮ 7.59 ಮೀ. ದೂರಕ್ಕೆ ಜಿಗಿದು ಕಂಚಿನ ಪದಕ ಪಡೆದರು. ಆದರೆ ಪುರುಷರ ಡೆಕಾಥ್ಲಾನ್‌ನಲ್ಲಿ ಲೋಕೇಶ್ ರಾಥೋಡ್‌ 11ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಬುಧವಾರ ಆರಂಭಗೊಂಡ ಕೂಟ ಅ.15ರಂದು ಕೊನೆಗೊಳ್ಳಲಿದೆ.
 

click me!