ಪ್ಯಾರಿಸ್ ಸೈಂಟ್ ಜರ್ಮೈನ್ ತಂಡ ತೊರೆದ ಲಿಯೋನೆಲ್ ಮೆಸ್ಸಿ
ಅಮೆರಿಕದ ಮೇಜರ್ ಲೀಗ್ ಸಾಕರ್ನ ಇಂಟರ್ ಮಿಯಾಮಿ ತಂಡ ಸೇರಲು ನಿರ್ಧಾರ
ಇಂಟರ್ ಮಿಯಾಮಿಯ ಇನ್‌ಸ್ಟಾಗ್ರಾಂ ಖಾತೆಗೆ 24 ಗಂಟೆಯಲ್ಲಿ 42 ಲಕ್ಷ ಹೊಸ ಹಿಂಬಾಲಕರು ಸೇರ್ಪಡೆ
ಮಿಯಾಮಿ(ಜೂ.09): ಅರ್ಜೆಂಟೀನಾದ ಪುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಅಮೆರಿಕದ ಮೇಜರ್ ಲೀಗ್ ಸಾಕರ್ನ ಇಂಟರ್ ಮಿಯಾಮಿ ತಂಡ ಸೇರಲು ನಿರ್ಧರಿಸಿದ್ದಾರೆ. ಇದನ್ನು ಸ್ವತಃ ಮೆಸ್ಸಿ ಖಚಿತಪಡಿಸಿದ್ದಾರೆ. ಆದರೆ ಒಪ್ಪಂದ ಅವಧಿ ಮತ್ತು ಮೊತ್ತ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.
ಬರೋಬ್ಬರಿ 17 ವರ್ಷಗಳ ಕಾಲ ಬಾರ್ಸಿಲೋನಾ ಪರ ಆಡಿದ್ದ ಮೆಸ್ಸಿ 2021ರಲ್ಲಿ ಫ್ರಾನ್ಸ್‌ನ ಪಿಎಸ್ಜಿ ಕ್ಲಬ್ ಸೇರಿದ್ದರು. ದಿನಗಳ ಹಿಂದಷ್ಟೇ ಅವರು ಪಿಎಸ್ಜಿ ತೊರೆದಿದ್ದು, ಸ್ಪೇನ್‌ನ ಬಾರ್ಸಿಲೋನಾ ಅಥವಾ ಸೌದಿ ಅರೇಬಿಯಾದ ಅಲ್-ಹಿಲಾಲ್ ಕ್ಲಬ್ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಮೆಸ್ಸಿ ತಂಡ ಸೇರಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದ ಬೆನ್ನಲ್ಲೇ ಇಂಟರ್ ಮಿಯಾಮಿಯ ಇನ್‌ಸ್ಟಾಗ್ರಾಂ ಖಾತೆಗೆ 24 ಗಂಟೆಯಲ್ಲಿ 42 ಲಕ್ಷ ಹೊಸ ಹಿಂಬಾಲಕರು ಸೇರ್ಪಡೆಗೊಂಡಿದ್ದಾರೆ.
undefined
ಫಿನ್ಲ್ಯಾಂಡ್ ಅಥ್ಲೆಟಿಕ್ಸ್: ಜ್ಯೋತಿ ಯರ್ರಾಜಿಗೆ ಬೆಳ್ಳಿ
ಹೆಲ್ಸಿಂಕಿ(ಫಿನ್ಲ್ಯಾಂಡ್): ಭಾರತದ ತಾರಾ ಅಥ್ಲೀಟ್ ಜ್ಯೋತಿ ಯರ್ರಾಜಿ ಫಿನ್‌ಲ್ಯಾಂಡ್‌ನಲ್ಲಿ ನಡೆದ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ 100 ಮೀ. ಹರ್ಡಲ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಬುಧವಾರ ಮಹಿಳಾ ವಿಭಾಗದಲ್ಲಿ 23 ವರ್ಷದ ಜ್ಯೋತಿ 12.95 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 2ನೇ ಸ್ಥಾನ ಪಡೆದರೆ, ಫಿನ್ಲ್ಯಾಂಡ್ನ ರೀಟಾ ಹರ್ಸ್ಕೆ(12.84 ಸೆ.) ಚಿನ್ನ ತಮ್ಮದಾಗಿಸಿಕೊಂಡರು. ಇದೇ ವೇಳೆ ಪುರುಷರ 100 ಮೀ. ಓಟದಲ್ಲಿ ಭಾರತ ಅಮ್ಲನ್ ಬೊರ್ಗೊಹೈನ್ 10.49 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚು ಗೆದ್ದರು.
ಕಿರಿಯರ ಏಷ್ಯಾಕಪ್ ಹಾಕಿ: ಭಾರತ ಸೆಮೀಸ್ ಪ್ರವೇಶ
ಕಾಕಮಿಗಹರಾ(ಜಪಾನ್): ನಿರ್ಣಾಯಕ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ಧ 11-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದ ಭಾರತ ಮಹಿಳಾ ತಂಡ 8ನೇ ಆವೃತ್ತಿಯ ಕಿರಿಯರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಈ ಗೆಲುವಿನೊಂದಿಗೆ ಭಾರತ ‘ಎ’ ಗುಂಪಿನಲ್ಲಿ 10 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ತೈಪೆ(3 ಅಂಕ) 4ನೇ ಸ್ಥಾನಿಯಾಗಿ ಟೂರ್ನಿಯಿಂದ ಹೊರಬಿತ್ತು.
French Open 2023: ಫೈನಲ್‌ಗೆ ಸ್ವಿಯಾಟೆಕ್, ಮುಕೋವಾ ಲಗ್ಗೆ..!
ಭಾರತದ ಪರ ಅನ್ನು, ಸುನೆಲಿತಾ ತಲಾ 2 ಗೋಲು ಬಾರಿಸಿದರೆ, ವೈಷ್ಣವಿ ಪಾಲ್ಕೆ, ದೀಪಿಕಾ, ಋುತುಜಾ, ನೀಲಂ, ಮಂಜು, ದೀಪಿಕಾ ಸೊರೆಂಗ್ ಹಾಗೂ ಮುಮ್ತಾಜ್ ಖಾನ್ ತಲಾ 1 ಗೋಲು ಹೊಡೆದರು. ಟೂರ್ನಿಯ ಇತಿಹಾಸದಲ್ಲಿ 7ನೇ ಬಾರಿ ಸೆಮೀಸ್ ತಲುಪಿರುವ ಭಾರತ, ‘ಬಿ’ ಗುಂಪಿನ 2ನೇ ಸ್ಥಾನಿ ಜಪಾನ್ ವಿರುದ್ಧ ಶನಿವಾರ ಸೆಣಸಲಿದೆ.
ಪ್ರೊ ಲೀಗ್ ಹಾಕಿ: ಭಾರತಕ್ಕೆ ಜಯ
ಐಂಡ್ಹೊವೆನ್(ನೆದರ್ಲೆಂಡ್ಸ್): ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಗುರುವಾರ ಅರ್ಜೆಂಟೀನಾ ವಿರುದ್ಧ 3-0 ಗೋಲುಗಳ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಬುಧವಾರ ನೆದರ್ಲೆಂಡ್ಸ್ ವಿರುದ್ಧ 1-4 ಗೋಲುಗಳಿಂದ ಪರಾಭವಗೊಂಡಿದ್ದ ಭಾರತ ಮತ್ತೆ ಗೆಲುವಿನ ಲಯಕ್ಕೆ ಮರಳಿತು.
ಇದರೊಂದಿಗೆ 14 ಪಂದ್ಯಗಳಲ್ಲಿ 27 ಅಂಕ ಸಂಪಾದಿಸಿದ ಭಾರತ, ಬ್ರಿಟನ್(26 ಅಂಕ) ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆಯಿತು. ಪಂದ್ಯದಲ್ಲಿ ಭಾರತದ ಪರ ಹರ್ಮನ್ಪ್ರೀತ್ ಸಿಂಗ್, ಅಮಿತ್, ಅಭಿಷೇಕ್ ಗೋಲು ಬಾರಿಸಿದರು. ಭಾರತ ಮುಂದಿನ ಪಂದ್ಯದಲ್ಲಿ ಶನಿವಾರ ನೆದರ್ಲೆಂಡ್್ಸ ವಿರುದ್ಧ ಆಡಲಿದೆ.
ಸಿಂಗಾಪುರ ಓಪನ್ನಲ್ಲಿ ಭಾರತದ ಸವಾಲು ಅಂತ್ಯ!
ಸಿಂಗಾಪುರ: ಕಳೆದ ವರ್ಷ ಅಭೂತಪೂರ್ವ ಪ್ರದರ್ಶನ ನೀಡಿದ್ದ ಭಾರತೀಯ ಶಟ್ಲರ್ಗಳು ಈ ಋುತುವಿನಲ್ಲಿ ತಮ್ಮ ನೀರಸ ಆಟ ಮುಂದುವರಿಸಿದ್ದು, ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ 2ನೇ ಸುತ್ತಲ್ಲೇ ಅಭಿಯಾನ ಕೊನೆಗೊಳಿಸಿದ್ದಾರೆ.
ಗುರುವಾರ ಪುರುಷರ ಸಿಂಗಲ್ಸ್ ಅಂತಿಮ 16ರ ಸುತ್ತಿನಲ್ಲಿ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್ ಚೈನೀಸ್ ತೈಪೆಯ ಚಿಯಾ ಹೊ ಲೀ ವಿರುದ್ಧ 15-21, 19-21 ಅಂತರದಲ್ಲಿ ಪರಾಭವಗೊಂಡರೆ, ಇತ್ತೀಚೆಗಷ್ಟೇ ಆರ್ಲಿಯಾನ್ಸ್ ಮಾಸ್ಟರ್ಸ್ ಗೆದ್ದಿದ್ದ ಪ್ರಿಯಾನ್ಶು ರಾಜಾವತ್ ವಿಶ್ವ ನಂ.4 ಜಪಾನ್ನ ಕೊಡಾಯಿ ನರವೊಕಾ ವಿರುದ್ಧ 17-21, 16-21ರಲ್ಲಿ ಸೋಲನುಭವಿಸಿದರು. ಪುರುಷರ ಡಬಲ್ಸ್ನಲ್ಲಿ ಅರ್ಜುನ್-ಧೃವ್ ಇಂಗ್ಲೆಂಡ್‌ನ ಬೆನ್ ಲೇನ್-ಸೀನ್ ವೆಂಡಿ ವಿರುದ್ಧ 15-21, 19-21 ಅಂತರದಲ್ಲಿ ಸೋತು ಹೊರಬಿದ್ದರು.