ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ 2019ರಲ್ಲಿ ಒಟ್ಟು 50 ಗೋಲು ಬಾರಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ 9 ಬಾರಿ ವರ್ಷದಲ್ಲಿ 50ಕ್ಕೂ ಹೆಚ್ಚು ಗೋಲು ಬಾರಿಸಿ ಮೆಸ್ಸಿ ದಾಖಲೆ ಬರೆದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬಾರ್ಸಿಲೋನಾ[ಡಿ.23]: ಜನಪ್ರಿಯ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಸತತ ಆರನೇ ಬಾರಿಗೆ ವರ್ಷದಲ್ಲಿ 50 ಗೋಲುಗಳನ್ನು ಗಳಿಸಿದ ಅಪರೂಪದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಿಕೆಟ್ ಪಡೆದ ಖುಷಿಯಲ್ಲಿ ಪಲ್ಟಿ ಹೊಡೆದ ಬೌಲರ್!
ಶನಿವಾರ ನಡೆದ ಡೆಪೋರ್ಟಿವೋ ಆಲ್ವೆಸ್ ವಿರುದ್ಧದ ಪಂದ್ಯದಲ್ಲಿ ತಾವು ಪ್ರತಿನಿಧಿಸುವ ಬಾರ್ಸಿಲೋನಾ ಪರ ಆಡಿ, 69ನೇ ನಿಮಿಷದಲ್ಲಿ ಗೋಲು ಸಂಪಾದಿಸುವ ಮೂಲಕ ಈ ಸಾಧನೆ ಮಾಡಿದರು. ಈ ಪಂದ್ಯದಲ್ಲಿ ಬಾರ್ಸಿಲೋನಾ 4-1 ಅಂತರದಿಂದ ಗೆಲುವು ಕಂಡುಕೊಂಡಿತು. ಈ ವರ್ಷ ಅವರು 58 ಪಂದ್ಯಗಳಲ್ಲಿ 50 ಗೋಲುಗಳನ್ನು ಗಳಿಸಿದ್ದಾರೆ. 32 ಲಾ ಲೀಗಾ ಪಂದ್ಯಗಳಲ್ಲಿ 34 ಗೋಲುಗಳನ್ನು ಬಾರಿಸಿದ ಮೆಸ್ಸಿ, ಚಾಂಪಿಯನ್ಸ್ ಲೀಗ್‌ನಲ್ಲಿ 8, ಕೋಪಾ ಡೆಲ್ ರೇ ಟೂರ್ನಿಯಲ್ಲಿ 3 ಗೋಲುಗಳನ್ನು ಬಾರಿಸಿದರು. ಅರ್ಜೆಂಟೀನಾ ಪರ ಈ ವರ್ಷ 10 ಪಂದ್ಯಗಳನ್ನು ಆಡಿದ ಮೆಸ್ಸಿ, 5 ಗೋಲುಗಳನ್ನು ಬಾರಿಸಿದರು.
ISL 2019: ತವರಿನಲ್ಲಿ ಗೆದ್ದ ಗೋವಾ ಮೊದಲ ಸ್ಥಾನಕ್ಕೆ ಎಂಟ್ರಿ!
ಮೆಸ್ಸಿ ಕಳೆದ ಆರು ವರ್ಷಗಳಿಂದ ಪ್ರತಿ ವರ್ಷವೂ ಅಂತಾರಾಷ್ಟ್ರೀಯ ಹಾಗೂ ದೇಶಿ ಲೀಗ್ ಹಾಗೂ ಕ್ಲಬ್ ಪಂದ್ಯಗಳಲ್ಲಿ ಆಡಿ ಕನಿಷ್ಠ 50 ಗೋಲುಗಳನ್ನು ಗಳಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ 9 ಬಾರಿ ವರ್ಷದಲ್ಲಿ 50ಕ್ಕೂ ಹೆಚ್ಚು ಗೋಲು ಬಾರಿಸಿದ ದಾಖಲೆ ಬರೆದಿದ್ದಾರೆ. 2013ರಲ್ಲಿ ಅವರು 45 ಗೋಲು ಗಳಿಸಿದ್ದರು. 2012ರಲ್ಲಿ ಉತ್ಕೃಷ್ಟ ಲಯದಲ್ಲಿದ್ದ ಮೆಸ್ಸಿ ಬರೋಬ್ಬರಿ 91 ಗೋಲುಗಳನ್ನು ಬಾರಿಸಿದ್ದರು.