ISL ಫುಟ್ಬಾಲ್ ಟೂರ್ನಿಯಲ್ಲಿ ಕಳೆದೆರಡು ದಿನದ ಹಿಂದ ಬೆಂಗಳೂರು ಎಫ್ ಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಇದೀಗ ಗೋವಾ ತಂಡ ಭರ್ಜರಿ ಗೆಲುವಿನ ಮೂಲಕ ಬೆಂಗಳೂರು ಹಿಂದಿಕ್ಕಿ ಅಗ್ರಸ್ಥಾನ ಅಲಂಕರಿಸಿದೆ. ಗೋವಾಗೆ ಬಡ್ತಿ ನೀಡಲು ಪ್ರಮುಖ ಕಾರಣ ಒಡಿಶಾ ವಿರುದ್ಧದ ಗೆಲುವು.
ಗೋವಾ(ಡಿ.22): ಫೆರಾನ್ ಕೊರೊಮಿನಾಸ್ (19 ಮತ್ತು 89ನೇ ನಿಮಿಷ) ಹಾಗೂ ಬ್ರೆಂಡಾನ್ ಫೆರ್ನಾಂಡೀಸ್ (85ನೇ ನಿಮಿಷ) ಅವರು ಗಳಿಸಿದ ಗೋಲಿನಿಂದ ಒಡಿಶಾ ಎಫ್ ಸಿ ತಂಡವನ್ನು 3-0 ಗೋಲುಗಳ ಅಂತರದಲ್ಲಿ ಮಣಿಸಿದ ಎಫ್ ಸಿ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್ ನ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
ಇದನ್ನೂ ಓದಿ: ISL 2019: ಚೆನ್ನೈನಲ್ಲಿ ಚೆನ್ನೈಯನ್ FCಗೆ ಗೆಲುವು!
undefined
ಪ್ರಥಮಾರ್ಧದಲ್ಲಿ ಫರಾನ್ ಗಳಿಸಿದ ಗೋಲಿನಿಂದ ಗೋವಾ 1-0 ಅಂತರದಲ್ಲಿ ಮುನ್ನಡೆ ಕಂಡಿತ್ತು, ನಂತರ ದ್ವಿತಿಯಾರ್ಧದಲ್ಲಿ ಬ್ರೆಂಡಾನ್ ಮತ್ತು ಫೆರಾನ್ ತಲಾ ಒಂದು ಗೋಲು ಗಳಿಸುವ ಮೂಲಕ ಗೋವಾ ಪಡೆ 3-0 ಅಂತರದಲ್ಲಿ ಜಯ ಗಳಿಸಿ ಪ್ರಭುತ್ವ ಸಾಧಸಿತು. 9 ಪಂದ್ಯಗಳನ್ನು ಆಡಿರುವ ಗೋವಾ ತಂಡ ಸೋತಿರುವುದು ಒಮ್ಮೆ ಮಾತ್ರ. 5 ಪಂದ್ಯಗಳಲ್ಲಿ ಜಯ ಗಳಿಸಿ 3 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. 18 ಅಂಕಗಳನ್ನು ಗಳಿಸಿರುವ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಅಗ್ರ ಸ್ಥಾನಕ್ಕೇರಿತು.
ಇದನ್ನೂ ಓದಿ: ರಿಯಲ್ ಮ್ಯಾಡ್ರಿಡ್‌ಗೆ ರೋಹಿತ್ ಶರ್ಮಾ ರಾಯಭಾರಿ!.
ಗೋಲ್ ಯಂತ್ರ ಫೆರಾನ್ ಕೊರೊಮಿನಾಸ್ 19ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಎಫ್ ಸಿ ಗೋವಾ ತಂಡ ಒಡಿಶಾ ಎಫ್ ಸಿ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 1-0 ಗೋಲಿನಿಂದ ಮೇಲುಗೈ ಸಾಧಿಸಿತು. ಹಾಗೆ ನೋಡಿದರೆ ಒಡಿಶಾ ಪರ ಅರಿಡಾನೆ ಸ್ಯಾಂಟನಾ ಅವರು ಗೋಲು ಗಳಿಸುವ ಅವಕಾಶವನ್ನು ಕೈಚೆಲ್ಲಿದರು. ಆದರೆ ಕೊರೊಮಿನಾಸ್ ಎಲ್ಲಿಯೂ ತಪ್ಪು ಮಾಡದೆ ತಂಡಕ್ಕೆ ಮುನ್ನಡೆ ಕಲ್ಪಿಸಿದರು.
ಜಾಕಿಚಾಂದ್ ನೀಡಿದ ಪಾಸ್ ಹ್ಯೂಗೋ ಬೌಮಾಸ್ ಅವರಿಗೆ ನೀಡಿದ ಪಾಸ್ ಎಲ್ಲಿಯೂ ತಪ್ಪದೆ ಕೊರೊಮಿನಾಸ್ ಅವರ ನಿಯಂತ್ರಣಕ್ಕೆ ಸಿಲುಕಿ, ಗೋಲ್ ಬಾಕ್ಸ್ ಸೇರಿತು. ಗೋವಾ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಹಲವು ಅವಕಾಶಗಳನ್ನು ನಿರ್ಮಿಸಿತ್ತು, ಆದರೆ ಗೋಲು ಗಳಿಸುವಲ್ಲಿ ವಿಫಲವಾಗಿತ್ತು. ಆರಂಭದಲ್ಲಿ ಉತ್ತಮ ರೀತಿಯಲ್ಲಿ ಚೆಂಡಿನ ಮೇಲೆ ನಿಯಂತ್ರಿಸಿದ್ದ ಒಡಿಶಾಕ್ಕೆ ಸಮಯ ಕಳೆದಂತೆ ಪ್ರಭುತ್ವ ಸಾಧಿಸಲು ಸಾಧ್ಯವಾಗಲಿಲ್ಲ.