ISL 2019: ಚೆನ್ನೈನಲ್ಲಿ ಚೆನ್ನೈಯನ್ FCಗೆ ಗೆಲುವು!

By Suvarna News  |  First Published Dec 20, 2019, 9:49 PM IST

ಕೇರಳಾ ಬ್ಲಾಸ್ಟರ್ಸ್ ತಂಡ ಮತ್ತೊಂದು ಸೋಲಿಗೆ ಗುರಿಯಾಗಿದೆ. ಈ ಬಾರಿ ಸತತ ಸೋಲು ಕಾಣುತ್ತಿದ್ದ ಚೆನ್ನೈ ಮುಂದೆ ಸೋಲೋಪ್ಪಿಕೊಂಡಿದೆ.  ತವರಿನ ಅಂಗಳದಲ್ಲಿ ಚೆನ್ನೈ ತನ್ನ ಸೂಪರ್ ಮಚ್ಚಾನ್ಸ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ.
 


ಚೆನ್ನೈ(ಡಿ.20):  ಆಂಡ್ರೆ ಷೆಂಬ್ರಿ (4ನೇ ನಿಮಿಷ), ಲಲ್ರಿಂಜುವಾಲ ಚಾಂಗ್ಟೆ (30ನೇ ನಿಮಿಷ) ಮತ್ತು ನಿರಿಜುಸ್ ವಾಸ್ಕಿಸ್ (40ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಕೇರಳ ಬ್ಲಾಸ್ಟರ್ಸ್ ತಂಡವನ್ನು 3-1 ಗೋಲುಗಳ ಅಂತರದಲ್ಲಿ ಮಣಿಸಿದ ಮಾಜಿ ಚಾಂಪಿಯನ್ ಚೆನ್ನೈಯಿನ್ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಜಯದ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕೇರಳ ಬ್ಲಾಸ್ಟರ್ಸ್ ಪರ ನಾಯಕ ಬಾರ್ಥಲೋಮಿಯೋ ಓಗ್ಬ್ಯಾಚೆ (15ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು.  

ಇದನ್ನೂ ಓದಿ: ISL 2019: ನಾರ್ತ್ ಈಸ್ಟ್ ಮಣಿಸಿ ಮತ್ತೆ ಅಗ್ರಸ್ಥಾನಕ್ಕೇರಿದ ಬೆಂಗಳೂರು FC!.

Tap to resize

Latest Videos

ಹಿಂದಿನ ವೈಫಲ್ಯಗಳನ್ನೆಲ್ಲ ಕೇವಲ 45 ನಿಮಿಷಗಳಲ್ಲಿ ಮರೆಯುಂತೆ ಆಟ ಪ್ರದರ್ಶಿಸಿದ ಚೆನ್ನೈಯಿನ್ ಎಫ್ ಸಿ, ಪ್ರಥಮಾರ್ಧದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಮೇಲುಗೈ ಸಾಧಿಸಿತು. ಚೆನ್ನೈ ಹಾಗೂ ಕೇರಳ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು.. 

ಇದನ್ನೂ ಓದಿ: ರಾಹುಲ್ ಸೆಂಚುರಿ ಸೆಲೆಬ್ರೇಷನ್‌ ಹಿಂದಿದೆ ಫುಟ್ಬಾಲಿಗನ ಸಂಭ್ರಮಾಚರಣೆ.!...

ಚೆನ್ನೈಯನ್ ತಂಡಕ್ಕೆ 4ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು. ಆಂಡ್ರೆ ಷೆಂಬ್ರಿ ಗಳಿಸಿದ ಗೋಲಿನಿಂದ ಚೆನ್ನೈಯಿನ್ ಪಡೆ ಮುನ್ನಡೆ ಕಂಡುಕೊಂಡಿತು. ಷೆಂಬ್ರಿ ಅವರು ಋತುವಿನ ಎರಡನೇ ಗೋಲು ಗಳಿಸಿದರು. ಕೇರಳ ದಿಟ್ಟ ಸವಾಲು ನೀಡುತ್ತಲೇ ಹೋರಾಟವನ್ನು ಮುಂದುವರಿಸಿತು. 15ನೇ ನಿಮಿಷದಲ್ಲಿ ನಾಯಕ ಬಾರ್ಥಲೋಮಿಯೋ ಓಗ್ಬ್ಯಾಚೆ ಅವರಿಗೆ ಗೋಲಿನ ಯಶಸ್ಸು. ಇದರೊಂದಿಗೆ ಪಂದ್ಯ 1-1ರಲ್ಲಿ ಸಮಬಲಗೊಂಡಿತು. ಕೆಲ ಹೊತ್ತು ಪಂದ್ಯ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದರೂ ಆ ನಂತರ ಚೆನ್ನೈ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. 

30ನೇ ನಿಮಿಷದಲ್ಲಿ ಲಲ್ರಿಂಜುವಾಲ ಚಾಂಗ್ಟೆ ಗಳಿಸಿದ ಗೋಲಿನಿಂದ ಚೆನ್ನೈ 2-1  ಅಂತರದಲ್ಲಿ ಮುನ್ನಡೆ ಕಂಡಿತು. ಕೆರಳದ ಪ್ರಯತ್ನಗಳು ಯಶಸ್ಸು ಕಾಣದಿರುವಾಗ ಚೆನ್ನೈ ತನ್ನ ಆಕ್ರಮಣಕಾರಿ ಆಟವನ್ನು ಮುಂದುವರಿಸಿತು. ಇದುವರೆಗೂ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ನಿರಿಜುಸ್ ವಾಸ್ಕಿಸ್ 40ನೇ ನಿಮಿಷದಲ್ಲಿ ಗಳಿಸಿದ ಗೋಲು ಆತಿಥೇಯ ತಂಡಕ್ಕೆ 3-1 ಮುನ್ನಡೆ ತಂದು ಕೊಟ್ಟಿತು. 25ನೇ ನಿಮಿಷದಲ್ಲಿ ನಿರಿಜುಸ್ ವಾಸ್ಕಿಸ್ ಗಳಿಸಿದ ಗೋಲನ್ನು ರೆಫರಿ ನಿರಾಕರಿಸಿದ್ದು ಗೊಂದಲಕ್ಕೆ ಕಾರಣವಾಗಿತ್ತು. ಆದರೆ ಚೆನ್ನೈನ ಆವೇಶದ ಆಟಕ್ಕೆ ಅದು ಅಡ್ಡಿ ಮಾಡಿಲ್ಲ.
 

click me!