
ಮಲಪುರಂ(ಡಿ.30): ಪಶ್ಚಿಮ ಬಂಗಾಳ ಮೊಹನ್ ಬಗಾನ್ ತಂಡದ ಸ್ಟಾರ್ ಆಟಗಾರನಾಗಿದ್ದ ಕೇರಳದ ಆರ್ ಧನರಾಜನ್ ಪಂದ್ಯ ಆಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕೇರಳದಲ್ಲಿ ನಡೆದ ಪಿರಿಂದಲಮನ್ನ ಹಾಗ ಸಷ್ಠ ತ್ರಿಶೂರ್ ನಡುವಿನ ಪಂದ್ಯದಲ್ಲಿ ಈ ದುರ್ಘಟನೆ ನಡಿದಿದೆ. ಈ ಘಟನೆ ಫುಟ್ಬಾಲ್ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಇದನ್ನೂ ಓದಿ: ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಗಿಫ್ಟ್ ನೀಡಿದ ಮುಂಬೈ FC
ಪಂದ್ಯ ಆರಂಭಗೊಂಡ 27ನೇ ನಿಮಿಷದಲ್ಲಿ ಡಿಫೆಂಡರ್ ಆರ್ ಧನರಾಜನ್ ಮೈದಾನದಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಧನರಾಜನ್ ಪ್ರಾಣ ಪಕ್ಷಿ ಹಾರಿಹೋಗಿತ್ತು. 39 ವರ್ಷದ ಧನರಾಜನ್‌ಗೆ ಅಭಿಮಾನಿಗಳು ಧನಾ ಎಂದು ಕರೆಯುತ್ತಿದ್ದರು.
ಇದನ್ನೂ ಓದಿ: ಫಿಫಾ ಕಿರಿಯರ ವಿಶ್ವಕಪ್: ಅಹಮದಾಬಾದ್ ಆತಿಥ್ಯ
ಭಾರತದ ಪ್ರಸಿದ್ಧ ಮೋಹನ್ ಬಗಾನ್ ತಂಡ 2011ರಲ್ಲಿ ಪ್ರತಿಷ್ಠಿತ ಸಂತೋಷ್ ಟ್ರೋಫಿ ಗೆಲುವಿನಲ್ಲಿ ಇದೇ ಆರ್ ಧನರಾಜನ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಆರ್ ಧನರಾಜನ್ ಭಾರತದ ಪ್ರಖ್ಯಾತ ಫುಟ್ಬಾಲ್ ಕ್ಲಬ್‌ಗಳಾದ ಮೊಹಮ್ಮದನ್ಸ್, ವಿವಾ ಕೇರಳ, ಚಿರಾಕ್ ಯುನೈಟೆಡ್ ತಂಡ ಪ್ರತಿನಿದಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.