ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಗಿಫ್ಟ್ ನೀಡಿದ ಮುಂಬೈ FC

By Suvarna News  |  First Published Dec 29, 2019, 10:00 PM IST

ಐಎಸ್ಎಲ್ ಫುಟ್ಬಾಲ್ ಟೂರ್ನಿಯಲ್ಲಿ ಮುಂಬೈ ಸಿಟಿ ಎಫ್‌ಸಿ ತವರಿನ ಅಭಿಮಾನಿಗಳಿಗೆ ಹೊಸ ವರ್ಷದ ಗಿಫ್ಟ್ ನೀಡಿದೆ. ಪ್ರಸಕ್ತ ಆವೃತ್ತಿಯಲ್ಲಿ ತವರಿನಲ್ಲಿ ಮೊದಲ ಗೆಲುವು ಸಾಧಿಸಿರುವ ಮುಂಬೈ 2019ಕ್ಕೆ ಅದ್ಧೂರಿಯಾಗಿ ಗುಡ್ ಬೈ ಹೇಳಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ರೆಡಿಯಾಗಿದೆ.


ಮುಂಬೈ(ಡಿ.29): 2019ರ ಕೊನೆಯ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ಗೆಲುವು ದಾಖಲಿಸೋ ಮೂಲಕ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ಹೈದರಾಬಾದ್ ಎಫ್ ಸಿ ವಿರುದ್ಧದ ಪಂದ್ಯದಲ್ಲಿ 2-1 ಗೋಲಿನಿಂದ ಜಯ ಗಳಿಸಿದ ಮುಂಬೈ ಸಿಟಿ ಎಫ್ ಸಿ ಪ್ರಸಕ್ತ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮನೆಯಂಗಣದಲ್ಲಿ ಮೊದಲ ಜಯ ಗಳಿಸಿ ಹೊಸ ವರುಷಕ್ಕೆ ಜಯದ ಮುನ್ನುಡಿ ಬರೆದಿದೆ.

ಇದನ್ನೂ ಓದಿ: ಫಿಫಾ ಕಿರಿಯರ ವಿಶ್ವಕಪ್‌: ಅಹಮದಾಬಾದ್‌ ಆತಿಥ್ಯ

Tap to resize

Latest Videos

ಈ ಗೆಲುವಿನೊಂದಿಗೆ ಮುಂಬೈ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು.  ಮೌಡೌ ಸೊಗೌ (6 ಮತ್ತು 78ನೇ ನಿಮಿಷ) ಎರಡು ಗೋಲು ಗಳಿಸಿ ಜಯದ ರೂವಾರಿ ಎನಿಸಿದರು. ಹೈದರಾಬಾದ್ ಪರ ಬೊಬೊ (81ನೇ ನಿಮಿಷ) ಗಳಿಸಿದ ಗೋಲಿನಿಂದ ಸೋಲಿನ ಅಂತರ ಕಡಿಮೆಯಾಯಿತು. ಈಗ ಮುಂಬೈ ಹಾಗೂ ಬೆಂಗಳೂರು ತಂಡಗಳು ಅಂಕಪಟ್ಟಿಯಲ್ಲಿ  ಸಮಬಲ ಸಾಧಿಸಿದ್ದು, ಮುಂಬೈ ನಾಲ್ಕನೇ ಸ್ಥಾನಕ್ಕೆ ತಲುಪಿತು.  

ಇದನ್ನೂ ಓದಿ: ISL 2019: ತವರಿನಲ್ಲಿ ಗೆದ್ದ ಗೋವಾ ಮೊದಲ ಸ್ಥಾನಕ್ಕೆ ಎಂಟ್ರಿ!

ಪಂದ್ಯ ಆರಂಭಗೊಂಡ 6ನೇ ನಿಮಿಷದಲ್ಲಿಯೇ  ಮುಂಬೈ ಸಿತಿ ತಂಡಕ್ಕೆ ಮೊಡೌ ಸೊಗೌ ಅವರು ಗಳಿಸಿದ ಗೋಲಿನಿಂದ 1-0 ಗೋಲಿನಿಂದ ಮೇಲುಗೈ ಸಾಧಿಸಿತು. 23ನೇ ನಿಮಿಷದಲ್ಲಿ ಹೈದರಾಬಾದ್ ತಂಡಕ್ಕೆ ಸಮಬನಗೊಳಿಸುವ ಅವಕಾಶ ಸಿಕ್ಕಿತು. ಆದರೆ ಬೊಬೊ ಅವರು ಮಾಡಿದ ಹೆಡರ್ ಗೋಲ್ ಬಾಕ್ಸ್ ನ ಹೊರಗಿನಿಂದ ಸಾಗಿತ್ತು.  

33ನೇ ನಿಮಿಷದಲ್ಲೂ ಹೈದರಾಬಾದ್ ತಂಡಕ್ಕೆ ಮತ್ತೊಮ್ಮೆ ಅವಕಾಶ ಸಿಕ್ಕಿತ್ತು. ಆದರೆ ರೋಹಿತ್ ಕುಮಾರ್ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸುವಲ್ಲಿ ವಿಫಲವಾದರು. 42ನೇ ನಿಮಿಷದಲ್ಲಿ  ಆಶಿಶ್ ರಾಯ್ ಗೆ ಗೋಲು ಗಳಿಸಲು ಉತ್ತಮ ಅವಕಾಶ ಇದ್ದಿತ್ತು. ಎರಡು ಬಾರಿ ಗೋಲು ಬಾಕ್ಸ್ ಗೆ ಗುರಿ ಇಟ್ಟ ಚೆಂಡನ್ನು ಕಮಲ್ಜಿತ್ ಸಿಂಗ್ ತಡೆದು ತಂಡಕ್ಕೆ ನೆರವಾದರು.

click me!