ಚೆನ್ನೈಗೆ ಚೆನ್ನೈ ಆಟಗಾರರೇ ಎದುರಾಳಿ; ಜೆಮ್‌ಶೆಡ್‌ಪುರ್ ಸವಾಲಿಗೆ ಸಜ್ಜಾದ ಸೂಪರ್ ಮಚ್ಚಾನ್ಸ್!

By Chethan Kumar  |  First Published Nov 24, 2020, 2:21 PM IST

ಇಂಡಿಯನ್ ಸೂಪರ್ ಲೀಗ್ ಟೂರ್ನಿ 5ನೇ ಲೀಗ್ ಪಂದ್ಯದಲ್ಲಿ ಚೆನ್ನೈಯನ್ ಎಫ್‌ಸಿ ಹಾಗೂ ಜೆಮ್‌ಶೆಡ್‌ಪುರ್ ಮುಖಾಮುಖಿಯಾಗುತ್ತಿದೆ. ಈ ಬಾರಿ ಚೆನ್ನೈಗೆ ಚೆನ್ನೈ ಆಟಗಾರರೇ ಎದುರಾಳಿಗಳಾಗಿದ್ದಾರೆ.


ಗೋವಾ(ನ.24):  ಫುಟ್ಬಾಲ್ ನಲ್ಲಿ ಆಗಾಗ ಆಭಿಮಾನಿಗಳಿಗೆ ವಿಚಿತ್ರ ಸನ್ನಿವೇಶವೊಂದು ಎದುರಾಗುತ್ತದೆ, ಇಂದು ಯಾರನ್ನು ಹುರಿದುಂಬಿಸುತ್ತಾರೋ ನಾಳೆ ಅದೇ ಆಟಗಾರರು ಮತ್ತು ಕೋಚ್ ಗಳನ್ನು ಎದುರಾಳಿ ತಂಡದಲ್ಲಿ ಕಾಣಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಮಂಗಳವಾರ ಚೆನ್ನೈಯಿನ್ ಅಭಿಮಾನಿಗಳಿಗೆ ಒಬ್ಬರಲ್ಲ ಮೂವರು ಆಟಗಾರರನ್ನು ಎದುರಾಳಿ ತಂಡದಲ್ಲಿ ಕಾಣಬೇಕಾದ ಸ್ಥಿತಿ. ಏಕೆಂದರೆ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮಂಗಳವಾರ ಚೆನ್ನೈಯಿನ್ ತಂಡ ಜೆಮ್ಷೆಡ್ಪುರ ವಿರುದ್ಧ ತಿಲಕ್ ಮೈದಾನದಲ್ಲಿ ಎದುರಿಸಲಿದೆ.

ISL 7: ಒಡಿಶಾ ವಿರುದ್ಧ ಹೈದರಾಬಾದ್‌ಗೆ ಮೊದಲ ಗೆಲುವು!

Latest Videos

undefined

ಕಳೆದ ಬಾರಿ ಚೆನ್ನೈಯಿನ್ ಎಫ್ ಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಿತ್ತು, ಆದರೆ ಓವೆನ್ ಕೊಯ್ಲ್ ಅವರ ಉತ್ತಮ ತರಬೇತಿಯಿಂದಾಗಿ ತಂಡ ಪ್ರಶಸ್ತಿ ಸುತ್ತು ತಲುಪಿತು. ಆ ನಂತರ ಅವರು ಜೆಮ್ಷೆಡ್ಪುರ ತಂಡದ ಪರ ಸಹಿ ಮಾಡಿದರು. ತನ್ನೋಂದಿಗೆ ಕಳೆದ ಬಾರಿ ಜಂಟಿಯಾಗಿ ಗೋಲ್ಡನ್ ಶೂ ಪ್ರಶಸ್ತಿ ಗೆದ್ದ ನಿರಿಜಸ್ ವಾಸ್ಕಿಸ್ ಮತ್ತು ಡಿಫೆಂಡರ್ ಲಾಲ್ದಿನ್ ಲಿಯಾನಾ ರೆಂಥ್ಲೆ ಅವರನ್ನೂ ಕರೆದೊಯ್ದಿದ್ದಾರೆ. ಈ ಇಬ್ಬರೂ ಆಟಗಾರರು ಚೆನ್ನೈಯಿನ್ ತಂಡದ ಕಳೆದ ಬಾರಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ISL 7: ಎರಡೆರಡು ಗೋಲು ಸಿಡಿಸಿದ್ರೂ ಬೆಂಗಳೂರು FC ಗೆಲ್ಲಲಿಲ್ಲ, ಗೋವಾ FC ಸೋಲಲಿಲ್ಲ

ತಾನು ತೊರೆದಿರುವ ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರರ ಬಗ್ಗೆ ಕೊಯ್ಲ್ ಅವರಿಗೆ ಚೆನ್ನಾಗಿ ಗೊತ್ತಿದೆ, ಆದರೆ ಸ್ಕಾಟ್ಲೆಂಡ್ ನ ಕೋಚ್ ಗೆ ಅದು ಹೆಚ್ಚು ಪ್ರಯೋಜನವನ್ನು ತಾರದು ಎಂಬುದು ಚೆನ್ನಾಗಿ ಗೊತ್ತಿದೆ.’’ಅವರ ಶಕ್ತಿ ಏನೆಂಬುದು ಚೆನ್ನಾಗಿ ಗೊತ್ತಿದೆ, ಆದರೆ ಹಳೆಯ ತಂಡದ ವಿರುದ್ಧ ಆಡುವಾಗ ಆವಾಗ ಜತೆಯಲ್ಲಿ ಆಡಿದ ಆಟಗಾರರು ತಾವು ಈಗಲೂ ಉತ್ತಮ ಆಟಗಾರರು ಎಂಬುದನ್ನು ತೋರಿಸುತ್ತಾರೆ. ಆದ್ದರಿಂದ ಅವರ ಬಗ್ಗೆ ನನಗೆ ಅಪಾರವಾದ ಗೌರವ ಇದೆ,’’ ಎಂದು ಹೇಳಿದರು.

ವಾಸ್ಕಿಸ್ ಅವರ ಸೇರ್ಪಡೆಯಿಂದ ಜೆಮ್ಷೆಡ್ಪುರ ತಂಡದ ದಾಳಿ ವಿಭಾಗಕ್ಕೆ ಬಲಿಷ್ಠವಾದ ಹಲ್ಲು ಬಂದಿದೆ ಎಂದರೆ ತಪ್ಪಾಗಲಾರದು. ಆದರೆ ಹಲವಾರು ಸಮಸ್ಯೆಗಳು ಅಲ್ಲಲ್ಲಿ ಇವೆ ಎಂಬುದು ಕೊಯ್ಲ್ ಅವರಿಗೆ ಗೊತ್ತಿದೆ. ಜೆಮ್ಷೆಡ್ಪುರ ತಂಡ ಕಳೆದಬಾರಿ ಎದುರಾಳಿಗಳಿಗೆ 35 ಗೋಲುಗಳನ್ನು ಬಿಟ್ಟುಕೊಟ್ಟಿದೆ. ಹೈದರಾಬಾದ್ ಹೊರತುಪಡಿಸಿದರೆ ಈ ತಂಡವೇ ಅತಿ ಹೆಚ್ಚು ಗೋಲುಗಳನ್ನು ನೀಡಿದ್ದು. ಇದು ತಂಡದ ಡಿಫೆನ್ಸ್ ವಿಭಾಗದ ದೌರ್ಬಲ್ಯವನ್ನು ಸೂಚಿಸುತ್ತದೆ. ಸುಂದರ್ಲೆಂಡ್ ನ ಡಿಫೆಂಡರ್ ಪೀಟರ್ ಹಾರ್ಟಲೀ ಮತ್ತು ನೈಜೀರಿಯಾದ ಸೆಂಟರ್ ಬ್ಯಾಕ್ ಆಟಗಾರ ಸ್ಟೀಫನ್ ಎಜಿ ಅವರ ಸೇರ್ಪಡೆಯಿಂದ ಪರಿಸ್ಥಿತಿ ಸುಧಾರಿಸಬಹುದು ಎಂಬ ನಂಬಿಕೆ ಕೋಚ್ ಗೆ ಇದೆ.

ಚೆನ್ನೈಯಿನ್ ತಂಡದ ದೊಡ್ಡ ಸವಾಲೆಂದರೆ ಬಿಟ್ಟುಹೋಗಿರುವ ಆಟಗಾರರ ಸ್ಥಾನವನ್ನು ತುಂಬುವುದು. ಕಳೆದ ಋತುವಿನ ವಿದೇಶಿ ಆಟಗಾರರಲ್ಲಿ ಹೊಸ ನಾಯಕ ರಫಾಯೆಲ್ ಕ್ರಿವೆಲ್ಲರೊ ಮತ್ತು ಡಿಫೆಂಡರ್ ಎಲಿ ಸಾಬಿಯಾ ಮಾತ್ರ ಉಳಿದುಕೊಂಡಿದ್ದಾರೆ. ಸ್ಲೊವಾಕಿಯಾದ ಫಾರ್ವರ್ಡ್ ಆಟಗಾರ ಜಾಕುಬ್ ಸಿಲ್ವಸ್ಟರ್ ಮತ್ತು ಬೋಸ್ನಿಯಾದ ಡಿಫೆಂಡರ್ ಎನಸ್ ಸಿಪೋವಿಕ್ ಆ ಸ್ಥಾನವನ್ನು ತುಂಬಬಲ್ಲರು ಎಂದು ನೂತನ ಕೋಚ್ ಸಾಬಾ ಲಾಸ್ಜ್ಲೋ ನಂಬಿದ್ದಾರೆ. ಕಳೆದ ಋತುವಿನಲ್ಲಿ ಜೆಮ್ಷೆಡ್ಪುರ ಪರ ಆಡಿದ್ದ ಬ್ರೆಜಿಲ್ ನ ಡಿಫೆಂಡರ್ ಮೆಮೂ ಈ ಬಾರಿ ಚೆನ್ನೈಯಿನ್ ತಂಡದಲ್ಲಿ ಆಡುವುದನ್ನು ಜೆಮ್ಷೆಡ್ಪುರ ಅಭಿಮಾನಿಗಳು ನೋಡಲಿದ್ದಾರೆ.

ಎಲ್ಲದರ ನಡುವೆ ಕಳೆದ ಋತುವಿನಲ್ಲಿ ಹೆಚ್ಚು ಅವಕಾಶಗಳ (52) ಮಾಡಿಕೊಟ್ಟಿದ್ದ ಕ್ರಿವೆಲ್ಲರೊ ಅವರ ಅನುಪಸ್ಥಿತಿ ತಂಡವನ್ನು ಹೆಚ್ಚಾಗಿ ಕಾಡಲಿದೆ. ‘’ಅವರು ನಾಯಕನಾಗಿರುವುದು ನನ್ನ ಪಾಲಿನ ಹೆಮ್ಮೆ,  ಆದರೆ ನನ್ನ ಪಾಲಿಗೆ ಯಾವುದೂ ಬದಲಾಗಿಲ್ಲ. ನನ್ನ ಶೈಲಿ ಅಥವಾ ನಾನಾಡುವ ಫುಟ್ಬಾಲ್ ಯಾವುದೂ ಬದಲಾಗದು. ಎಲ್ಲಕ್ಕಿಂತ ಮುಖ್ಯ ಅಂಶವೆಂದರೆ ನಮ್ಮ ಸ್ಟ್ರೈಕರ್ ಗಳಿಗೆ ಉತ್ತಮ ರೀತಿಯಲ್ಲಿ ನೆರವಾಗುವುದು,’’ ಎಂದರು. 

click me!