
ಹೈದ್ರಾಬಾದ್(ನ.30): ಇಂಡಿಯನ್ ಸೂಪರ್ ಲೀಗ್ 6ನೇ ಆವೃತ್ತಿಯಲ್ಲಿ ಹ್ಯಾಟ್ರಿಕ್ ಜಯದ ಶ್ರೇಯವನ್ನು ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡಿದೆ.
ಐಎಸ್‌ಎಲ್ ಫುಟ್ಬಾಲ್: ಬಿಎಫ್‌ಸಿಗೆ ಹೈದರಾಬಾದ್ ಸವಾಲು
ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಹಾಗೂ ಹೈದ್ರಾಬಾದ್ ಎಫ್‌ಸಿ ಪಂದ್ಯ 1-1 ಗೋಲುಗಳಿಂದ ಡ್ರಾದಲ್ಲಿ ಅಂತ್ಯವಾಯಿತು. ಪಂದ್ಯ ಆರಂಭವಾಗಿ 2ನೇ ನಿಮಿಷದಲ್ಲಿ ನಾಯಕ ಸುನಿಲ್ ಚೆಟ್ರಿ, ಬಿಎಫ್‌ಸಿ ಮೇಲುಗೈಗೆ ಕಾರಣರಾದರು. ಹೈದ್ರಾಬಾದ್ ರಕ್ಷಣಾ ಪಡೆಯನ್ನು ವಂಚಿಸಿದ ಚೆಟ್ರಿ ಆಕರ್ಷಕ ಗೋಲುಗಳಿಸಿ 1-0 ಮುನ್ನಡೆ ತಂದುಕೊಟ್ಟರು. ಮೊದಲಾರ್ಧದ ಅಂತ್ಯಕ್ಕೂ ಇದೇ ಅಂತರ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದ ಬಿಎಫ್‌ಸಿ ಗೆಲುವು ಸಾಧಿಸುವ ಉತ್ಸಾಹದಲ್ಲಿತ್ತು.
ದ್ವಿತೀಯಾರ್ಧದಲ್ಲೂ ಹೈದ್ರಾಬಾದ್ ಆಟಗಾರರ ಎಲ್ಲಾ ತಂತ್ರಗಳನ್ನು ವಿಫಲ ಮಾಡುತ್ತಾ ಸಾಗಿದ ಬಿಎಫ್‌ಸಿ ಇನ್ನೇನು ಗೆಲುವು ಸಾಧಿಸಿಯೇ ಬಿಟ್ಟಿತು ಎಂದೇ ಎಣಿಸಲಾಗಿತ್ತು. ಪಂದ್ಯದ ಪೂರ್ಣಾವಧಿಯಲ್ಲಿ ಗೋಲುಗಳಿಸದ ಹೈದ್ರಾಬಾದ್ ಹೆಚ್ಚುವರಿ ಆಟದಲ್ಲಿ ರಾಬಿನ್ (90+2ನೇ ನಿ.)ಗೋಲುಗಳಿಸಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.