
ಹೈದರಾಬಾದ್[ನ.29]: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 6ನೇ ಆವೃತ್ತಿಯಲ್ಲಿ ಶುಕ್ರವಾರ ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ, ಆತಿಥೇಯ ಹೈದರಾಬಾದ್ ತಂಡದ ಸವಾಲನ್ನು ಎದುರಿಸಲಿದೆ.
ISL 2019: ಚೆನ್ನೈಯನ್ FCಗೆ ಸೂಪರ್ ಗೆಲುವು!
ಟೂರ್ನಿಯಲ್ಲಿ ಕಳೆದ 2 ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿರುವ ಬಿಎಫ್‌ಸಿ, ಹೈದರಾಬಾದ್ ವಿರುದ್ಧ ಗೆದ್ದು ಹ್ಯಾಟ್ರಿಕ್ ಜಯದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಉತ್ಸಾಹದಲ್ಲಿದೆ. ತವರಿನಲ್ಲಿ ನಡೆದಿದ್ದ ಕಳೆದ 2 ಪಂದ್ಯಗಳಲ್ಲಿ ಜಯಿಸಿರುವ ಚೆಟ್ರಿ ಪಡೆ ಲಯ ಕಂಡುಕೊಂಡಿದ್ದು ಹೈದ್ರಾಬಾದ್ ಎಫ್‌ಸಿ ಎದುರು ಇದನ್ನೇ ಮುಂದುವರೆಸುವ ಕಾತರದಲ್ಲಿದೆ.
ISL 2019: ಗೆಲುವಿನ ನಾಗಾಲೋಟ ಮುಂದುವರಿಸಿದ ಬೆಂಗಳೂರು FC!
ಆಡಿರುವ 5 ಪಂದ್ಯಗಳಲ್ಲಿ 2 ಜಯ, 3 ಡ್ರಾ ಸಾಧಿಸಿರುವ ಬಿಎಫ್‌ಸಿ 9 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. 5 ಪಂದ್ಯಗಳನ್ನಾಡಿರುವ ಹೈದ್ರಾಬಾದ್ 4 ಪಂದ್ಯಗಳಲ್ಲಿ ಸೋಲುಂಡು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಚೆನ್ನೈ-ಒಡಿಶಾ ಪಂದ್ಯ ಡ್ರಾ
ಗುರುವಾರ ಇಲ್ಲಿ ನಡೆದ ಐಎಸ್‌ಎಲ್ ಟೂರ್ನಿಯಲ್ಲಿ ಚೆನ್ನೈಯಿನ್ ಎಫ್‌ಸಿ ಹಾಗೂ ಒಡಿಶಾ ಎಫ್‌ಸಿ ನಡುವಣ ಪಂದ್ಯ 2-2 ಗೋಲುಗಳಿಂದ ಡ್ರಾದಲ್ಲಿ ಅಂತ್ಯಕಂಡಿತು. ಚೆನ್ನೈ ಪರ ವಲಾಸ್ಕಿ (51, 71ನೇ ನಿ.) ಹಾಗೂ ಒಡಿಶಾ ಪರ ಕ್ಸಿಸ್ಕೊ (54ನೇ ನಿ.), ಅರಿದಾನೆ (82ನೇ ನಿ.) ಗೋಲುಗಳಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.