ISL 7: ಕೈಕೊಟ್ಟ ಅದೃಷ್ಠ, ಬೆಂಗಳೂರು FCಗೆ ಪ್ಲೇ ಆಫ್ ಕನಸು ದೂರ-ದೂರ!

By Suvarna NewsFirst Published Jan 20, 2021, 10:04 PM IST
Highlights

ISL ಪ್ರತಿ ಆವೃತ್ತಿಯಲ್ಲೂ ಬೆಂಗಳೂರು ಎಫ್‌ಸಿ ಅತ್ಯುತ್ತಮ ಹೋರಾಟ ನೀಡಿದೆ. ಆದರೆ ಈ ಬಾರಿ ಉತ್ತಮ ಹೋರಾಟ ನೀಡಿದರೂ ಗೆಲುವು ಮಾತ್ರ ಸಿಗುತ್ತಿಲ್ಲ. ಇದೀಗ ಬೆಂಗಳೂರು ಖಾತೆಗೆ ಮತ್ತೊಂದು ಸೋಲುು ಸೇರಿಕೊಂಡಿದೆ.

ಗೋವಾ(ಜ.20):   ಐಎಸ್ಎಲ್ ಟೂರ್ನಿಯ ಬಲಿಷ್ಠ ತಂಡ ಬೆಂಗಳೂರು ಎಫ್‌ಸಿ ಅದೃಷ್ಠ ಕೈಕೊಟ್ಟಿದೆ. ಉತ್ತಮ ಹೋರಾಟ ನೀಡಿದರೂ ಗೆಲುವ ಮರೀಚಿಕೆಯಾಗುತ್ತಿದೆ. ರೋಚಕ ಹೋರಾಟದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಬೆಂಗಳೂರು 1-2 ಸೋಲುಗಳ ಅಂತರದಲ್ಲಿ ಮುಗ್ಗರಿಸಿದೆ.  

ಐಎಸ್‌ಎಲ್: ಬಿಎಫ್‌ಸಿ-ನಾರ್ಥ್‌ಈಸ್ಟ್‌ ಐಎಸ್‌ಎಲ್‌ ಪಂದ್ಯ ಡ್ರಾ

 ದ್ವಿತಿಯಾರ್ಧಲ್ಲಿ ಲಾಲ್ಥಾಥಾಂಗಾ ಕ್ವಾಲ್ರಿಂಗ್ (73ನೇ ನಿಮಿಷ) ಮತ್ತು ರಾಹುಲ್ ಪ್ರವೀಣ್ (90ನೇ ನಿಮಿಷ) ಗಳಿಸಿದ ಗೋಲು ಬೆಂಗಳೂರಿಗೆ ಚೇತರಿಸಿಕೊಳ್ಳಲು ಕಷ್ಟವಾದ ಆಘಾತವನ್ನುಂಟುಮಾಡಿತು. ಬೆಂಗಳೂರು ಪರ ಕ್ಲೈಟನ್ ಸಿಲ್ವಾ (24ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆಮಾಡಿತು. ಕೇರಳದ ಮಿಂಚಿನ ಆಟದ ಮುಂದೆ ಬೆಂಗಳೂರಿನ ಡಿಫೆನ್ಸ್ ಕೆಲಸ ಮಾಡಲಿಲ್ಲ. ಈ ಜಯದೊಂದಿಗೆ ಕೇರಳ 9ನೇ ಸ್ಥಾನ ತಲುಪಿತು. ಬೆಂಗಳೂರು 7ನೇ ಸ್ಥಾನದಲ್ಲೇ ಉಳಿದುಕೊಂಡಿತು. ಈ ಸೋಲು ಬೆಂಗಳೂರಿನ ಪ್ಲೇ ಆಫ್ ಆಸೆಗೆ ಅಡ್ಡಿಯಾಗಿದೆ.

ಬೆಂಗಳೂರಿಗೆ ಮುನ್ನಡೆ: ಕ್ಲೈಟನ್ ಸಿಲ್ವಾ (24ನೇ ನಿಮಿಷ) ಗಳಿಸಿದ ಗೋಲಿನಿಂದ ಬೆಂಗಳೂರು ಎಫ್ ಸಿ ಪ್ರಥಮಾರ್ಧದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾರ್ನರ್ ಎಸೆತವು ಆಟಗಾರರನ್ನು ವಂಚಿಸಿ ನೇರವಾಗಿ ಕ್ಲೈಟನ್ ಗೆ ಸಿಕ್ಕಾಆಗ ಡೈವ್ ಮೂಲಕ ಗೋಲು ಗಳಿಸಿ ಬೆಂಗಳೂರಿಗೆ ಮುನ್ನಡೆ ಕಲ್ಪಿಸಿದರು. ಅಂತಿಮ ಕ್ಷಣದಲ್ಲಿ ನಾಯಕ ಸುನಿಲ್ ಛೆಟ್ರಿ ದೊರೆತ ಫ್ರೀಕಿಕ್ ಮೂಲಕ ಗೋಲು ಗಳಿಸುವಲ್ಲಿ ವಿಫಲವಾದರು, ಕೇರಳದ ಗೋಲ್ ಕೀಪರ್ ಅಲ್ಬಿನೋ ಗೋಮ್ಸ್ ಚಂಗನೆ ಜಿಗಿದು ಚೆಂಡನ್ನು ಹೊರದಬ್ಬಿದರು. 

ಬೆಂಗಳೂರು ಗೋಲ್ ಕೀಪರ್ ಗುರ್ಪ್ರೀತ್ ಸಿಂಗ್ ಸಂಧೂ ಎರಡು ಬಾರಿ ಉತ್ತಮ ರೀತಿಯಲ್ಲಿ ತಡೆದು ತಂಡಕ್ಕೆ ನೆರವಾದರು. ಆರಂಭದಲ್ಲಿ ಕೇರಳ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ಆದರೆ ಸಮಯ ಕಳೆದಂತೆ ಆ ಸ್ಥಿರತೆ ಕಂಡು ಬಂದಿಲ್ಲ. ಕೇರಳ ಪರ ಸಹಲ್ ಅಬ್ದುಲ್ ಸಮದ್ ಬೆಂಗಳೂರಿನ ಡಿಫೆನ್ಸ್ ವಿಭಾಗವನ್ನು ಹಲವು ಬಾರಿ ಬ್ರೇಕ್ ಮಾಡಿದರೂ ಉತ್ತಮ ಅವಕಾಶ ತಂಡಕ್ಕೆ ಸಿಗಲಿಲ್ಲ.

click me!