ಸತತ ನಾಲ್ಕನೇ ಪಂದ್ಯ ಸೋತು ಕಂಗಾಲಾದ ಬೆಂಗಳೂರು ಎಫ್‌ಸಿ!

By Suvarna News  |  First Published Jan 9, 2021, 10:17 PM IST

ಐಎಸ್ಎಲ್ ಟೂರ್ನಿಯಲ್ಲಿ  ಬಲಿಷ್ಠ ತಂಡವಾಗಿರುವ ಬೆಂಗಳೂರು ಎಫ್ ಸಿ ಈ ವರ್ಷ ಸೋಲಿನತ್ತ ಮುಖ ಮಾಡಿದೆ. ಒಂದಲ್ಲ, ಎರಡಲ್ಲ ನಾಲ್ಕು ಪಂದ್ಯದಲ್ಲಿ ಬೆಂಗಳೂರು ಮುಗ್ಗರಿಸಿದೆ. ಇದೀಗ ಈಸ್ಟ್ ಬೆಂಗಾಲ್ ವಿರುದ್ಧ ಬೆಂಗಳೂರು ಸೋಲು ಕಂಡಿದೆ.


ಗೋವಾ(ಜ.09): ಮಾಜಿ ಚಾಂಪಿಯನ್ಸ್‌ ಬೆಂಗಳೂರು ಎಫ್‌ಸಿ ತಂಡ ತನ್ನ ಅತ್ಯಂತ ಹೀನಾಯ ಪ್ರದರ್ಶನದ ಓಟ ಮುಂದುವರಿಸಿದ್ದು, ಪ್ರಸಕ್ತ ಸಾಲಿನ ಇಂಡಿಯನ್ ಸೂಪರ್‌ ಲೀಗ್ ಟೂರ್ನಿಯಲ್ಲಿ ಎಸ್‌ಸಿ ಈಸ್ಟ್‌ ಬೆಂಗಾಲ್‌ ವಿರುದ್ಧವೂ ಮುಗ್ಗರಿಸಿದೆ.

ಐಎಸ್‌ಎಲ್‌ 7: ಹೈದ್ರಾಬಾದ್‌ ವಿರುದ್ಧ ಗೋವಾ ಎಫ್‌ಸಿಗೆ ಜಯ...

ಇಲ್ಲಿನ ಫತೋರ್ಡ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಸಿದ್ದ ಬಿಎಫ್‌ಸಿ ತಂಡ ದ್ವಿತೀಯಾರ್ಧದ ಅಂತ್ಯದ ಹೊತ್ತಿಗೆ ಒಂದು ಗೋಲ್‌ ಬಿಟ್ಟುಕೊಡುವ ಮೂಲಕ 0-1 ಗೋಲ್‌ಗಳ ಅಂತರದಲ್ಲಿ ಈಸ್ಟ್‌ ಬೆಂಗಾಲ್‌ ಎದುರು ಮಂಡಿಯೂರಿತು.

Tap to resize

Latest Videos

undefined

ಇದು ಪ್ರಸಕ್ತ ಟೂರ್ನಿಯಲ್ಲಿ ಬೆಂಗಳೂರು ತಂಡ ಸೋತ ಸತತ ನಾಲ್ಕನೇ ಪಂದ್ಯವಾಗಿದೆ. ಅಂದಹಾಗೆ ಈ ಹಿಂದಿನ 7 ಆವೃತ್ತಿಗಳಲ್ಲಿ ಬಿಎಫ್‌ಸಿ ಸತತ 2 ಪಂದ್ಯಗಳನ್ನು ಕೂಡ ಸೋತಿರಲಿಲ್ಲ. ಆದರೀಗ ನಾಲ್ಕು ಪಂದ್ಯಗಳಲ್ಲಿ ಮುಗ್ಗರಿಸಿರುವ ಬೆಂಗಳೂರು ತಂಡ ಅಕ್ಷರಶಃ ಕಂಗಾಲಾಗದೆ. ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್‌ ಸೋಲಿನ ಬೆನ್ನಲ್ಲೇ ಕೋಚ್‌ ಕಾರ್ಲೋಸ್‌ ಕೌಡಾರ್ಟ್‌ ಅವರನ್ನು ಬಿಎಫ್‌ಸಿ ಕಿತ್ತೊಗೆದಿತ್ತು. ಈಗ ಮಧ್ಯಂತಕ ಕೋಚ್‌ ನೌಶದ್‌ ಮೂಸಾ ಮಾರ್ಗದರ್ಶನದಲ್ಲೂ ಸೋಲಿನ ಹಾದಿಯಿಂದ ಹೊರಬರಲು ವಿಫಲವಾಗಿದೆ.

ಪಂದ್ಯದ ಎರಡನೇ ಅವಧಿ ಗೋಲ್‌ ರಹಿತ ಸಮಬಲದ ಹೋರಾಟಕ್ಕೆ ಸಾಕ್ಷಿಯಾದರೆ, ಮೊದಲ ಅವಧಿಯಲ್ಲೇ ಮಿಡ್‌ಫೀಲ್ಡರ್‌ ವಿಲ್ಲಿ ಮಟ್ಟಿ ಸ್ಟೀಮನ್‌ (20ನೇ ನಿಮಿಷ) ತಂದುಕೊಟ್ಟ ಏಕೈಕ ಗೋಲ್‌ನ ಬಲದಿಂದ ಈಸ್ಟ್‌ ಬೆಂಗಾಲ್‌ ತಂಡ ಆರಂಭಿಕ ಮುನ್ನಡೆ ಪಡೆದುಕೊಂಡಿತು. ಬಳಿಕ ತನ್ನ ಡಿಫೆನ್ಸ್‌ ಕಡೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಬಿಎಫ್‌ಸಿ ದಾಳಿಯನ್ನಯ ತಡೆದು ನಿಲ್ಲಿಸಿ ಪಂದ್ಯ ಗೆದ್ದುಕೊಂಡಿತು.

ಈ ಜಯದೊಂದಿಗೆ ಈಸ್ಟ್‌ ಬೆಂಗಾಲ್‌ ತಂಡ ಆಡಿದ 10 ಪಂದ್ಯಗಳಿಂದ ಅಷ್ಟೇ ಅಂಕಗಳನ್ನು ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ ತನ್ನ 10ನೇ ಸ್ಥಾನ ಕಾಯ್ದುಕೊಂಡಿದೆ. ಮತ್ತೊಂದೆಡೆ ಸತತ ಸೋಲುಂಡು ಸುಣ್ಣವಾದರೂ ಕೂಡ ಬಿಎಫ್‌ಸಿ ತಂಡ 10 ಪಂದ್ಯಗಳಿಂದ 12 ಅಂಕಗಳನ್ನು ಗಳಿಸಿ 6ನೇ ಸ್ಥಾನದಲ್ಲೇ ಉಳಿದುಕೊಂಡಿದೆ.

ಪಂದ್ಯದಲ್ಲಿ ಈಸ್ಟ್‌ ಬೆಂಗಾಲ್‌ ತಂಡ ಶೇ. 51ರಷ್ಟು ಚೆಂಡಿನ ಮೇಲಿನ ಹಿಡಿತ ಸಾಧಿಸಿದರೆ, ಬಿಎಫ್‌ಸಿ ಹಿಂದೆ ಬಿದ್ದರೂ ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟವಾಡಿತ್ತು. ಹೀಗಾಗಿ ಗೋಲ್‌ ಗಳಿಕೆ ಸಲುವಾಗಿ 11 ಬಾರಿ ಚೆಂಡನ್ನು ಗುರಿಯತ್ತ ಕೊಂಡೊಯ್ದಿತ್ತು. ಇದರಲ್ಲಿ 5 ಬಾರಿ ಚೆಂಡು ಗೋಲ್‌ ಪೆಟ್ಟಿಗೆಯತ್ತ ನುಗ್ಗಿದರೂ ಕೀಪರ್‌ನ ದಾಟಿ ಹೋಗುವಲ್ಲಿ ವಿಫಲವಾಯಿತು. ಮತ್ತೊಂದೆಡೆ ಈಸ್ಟ್‌ ಬೆಂಗಾಲ್‌ ತಂಡ 7ರಲ್ಲಿ 3 ಬಾರಿ ಚೆಂಡನ್ನು ಗೋಲ್‌ ಕಡೆಗೆ ಕಳುಹಿಸಿ ಏಕೈಕ ಯಶಸ್ಸು ಕಂಡುಕೊಂಡಿತು.

ಪಂದ್ಯದಲ್ಲಿ ಬಿಎಫ್‌ಸಿ ತಂಡದ ಆಟಗಾರರು ಆಕ್ರಮಣಕಾರಿ ಆಟವಾಡುವ ಪ್ರಯತ್ನದಲ್ಲಿ ಒಟ್ಟು 3 ಬಾರಿ ಹಳದಿ ಕಾರ್ಡ್‌ ಸ್ವೀಕರಿಸಿದರು. ಈಸ್ಟ್‌ ಬೆಂಗಾಲ್‌ ತಂಡ ಯಾವುದೇ ಪ್ರಮಾದಗಳಿಗೆ ಅವಕಾಶ ನೀಡದೆ ಯಶಸ್ಸು ದಕ್ಕಿಸಿಕೊಂಡಿತು. ಬಿಎಫ್‌ಸಿ ಒಟ್ಟು 6 ಕಾರ್ನರ್‌ ಕಿಕ್ಸ್‌ ಪಡೆದರು ಕೂಡ ಅದೃಷ್ಟ ಕೈ ಹಿಡಿಯಲಿಲ್ಲ.
 

click me!