ಐಎಸ್‌ಎಲ್‌ ಫುಟ್ಬಾಲ್: ಬಿಎಫ್‌ಸಿಗೆ ಮೊದಲ ಸೋಲು

By Kannadaprabha News  |  First Published Dec 16, 2019, 11:01 AM IST

ಬೆಂಗಳೂರು ಎಫ್‌ಸಿ ಪ್ರಸಕ್ತ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಮೊದಲ ಸೋಲು ಕಂಡಿದೆ. ಬೊರ್ಗಸ್‌ ಕೊನೆಯ ಗಳಿಗೆಯಲ್ಲಿ ಬಾರಿಸಿದ ಗೋಲಿನ ನೆರವಿನಿಂದ ಮುಂಬೈ ರೋಚಕ ಗೆಲುವು ದಾಖಲಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 


ಬೆಂಗಳೂರು[ಡಿ.16]: ಇಂಡಿಯನ್‌ ಸೂಪರ್‌ ಲೀಗ್‌ 6ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ಮೊದಲ ಸೋಲು ಕಂಡಿದೆ. 

📸 | derailed the juggernaut for the 2nd time in two seasons!

Relive that late drama from Sree Kanteerava Stadium 🏟 in pictures 👇 https://t.co/s35a4rCv01

— Indian Super League (@IndSuperLeague)

ISL 2019: ಒಡಿಶಾ ಪ್ಲೇ ಆಫ್ ಆಸೆ ಜೀವಂತ!

Tap to resize

Latest Videos

ತನ್ನ ಭದ್ರಕೋಟೆ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ, ಮುಂಬೈ ಸಿಟಿ ಎಫ್‌ಸಿ ವಿರುದ್ಧ 2-3 ಗೋಲುಗಳಿಂದ ಪರಾಭವಗೊಂಡಿತು. ಈ ಸೋಲಿನೊಂದಿಗೆ 13 ಅಂಕಗಳಿಸಿರುವ ಬಿಎಫ್‌ಸಿ ಪಟ್ಟಿಯಲ್ಲಿ 3ನೇ ಸ್ಥಾನದಲ್ಲೇ ಉಳಿದುಕೊಂಡಿದ್ದರೆ, ಮುಂಬೈ 6ನೇ ಸ್ಥಾನಕ್ಕೆ ಜಿಗಿದಿದೆ. ಮುಂಬೈಗೆ ಇದು ಟೂರ್ನಿಯಲ್ಲಿ 2ನೇ ಗೆಲುವಾಗಿದೆ.

ಮುಂಬೈ ಚಾಲೆಂಜ್ ಸ್ವೀಕರಿಸಲು ಬೆಂಗಳೂರು FC ರೆಡಿ!

ಪಂದ್ಯದ ಆರಂಭದಲ್ಲೇ ಆಕ್ರಮಣಾಕಾರಿ ಆಟಕ್ಕೆ ಮುಂದಾದ ಮುಂಬೈ 12ನೇ ನಿಮಿಷದಲ್ಲಿ ಮೊದಲ ಯಶಸ್ಸು ಸಾಧಿಸಿತು. ಸುಭಾಶಿಶ್‌ ಮೊದಲ ಗೋಲುಗಳಿಸಿದರು. ಮೊದಲಾರ್ಧದ ಅಂತ್ಯಕ್ಕೆ ಮುಂಬೈ 1-0 ಮುನ್ನಡೆ ಸಾಧಿಸಿತು. 58ನೇ ನಿಮಿಷದಲ್ಲಿ ಮುಂಬೈ ಡಿಫೆಂಡರ್‌ ಗ್ರಜಿಕ್‌ ಸ್ವಂತ ಗೋಲು ಗಳಿಸಿ, ಬಿಎಫ್‌ಸಿಗೆ ನೆರವಾದರು. 77ನೇ ನಿಮಿಷದಲ್ಲಿ ಡಿಗೋ ಗೋಲು ಬಾರಿಸಿ ಮುಂಬೈಗೆ 2-1ರ ಮುನ್ನಡೆ ನೀಡಿದರು. 89ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಗೋಲು ಗಳಿಸಿದ ಸುನಿಲ್‌ ಚೆಟ್ರಿ, 2-2ರಲ್ಲಿ ಬಿಎಫ್‌ಸಿ ಸಮಬಲ ಸಾಧಿಸಲು ಕಾರಣರಾದರು. ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳಲಿದೆ ಎನ್ನುವ ಪರಿಸ್ಥಿತಿ ಇತ್ತು. ಹೆಚ್ಚುವರಿ ಸಮಯದಲ್ಲಿ ರೋವ್ಲಿನ್‌ ಬೊರ್ಗಸ್‌ (90+4ನೇ ನಿ.) ಗೋಲು ಬಾರಿಸಿ ಮುಂಬೈಗೆ ರೋಚಕ ಗೆಲುವು ತಂದುಕೊಟ್ಟರು.
 

click me!