
ಮುಂಬೈ(ಜು.06): ಕೊರೋನಾ ವೈರಸ್ ಹೊಡೆತದ ಬಳಿಕ ದೇಶದಲ್ಲಿ ಕ್ರೀಡಾ ಚಟುವಟಿಕೆ ನಿಧಾನವಾಗಿ ಆರಂಭಗೊಳ್ಳುತ್ತಿದೆ. ಇದೀಗ ಇಂಡಿಯನ್ ಸೂಪರ್ ಲೀಗ್(ISL)ಟೂರ್ನಿ ಆಯೋಜನೆಗೆ ದಿನಾಂಕ ಪ್ರಕಟಗೊಂಡಿದೆ. 2020ರ ನವೆಂಬರ್‌ನಿಂದ 2021ರ ಮಾರ್ಚ್ ವರೆಗೆ 7ನೇ ಆವೃತ್ತಿ ISL ಟೂರ್ನಿ ಆಯೋಜಿಸಲು ನಿರ್ಧರಿಸಲಾಗಿದೆ.
ಐಎಸ್‌ಎಲ್ ಫುಟ್ಬಾಲ್: ಕೋಲ್ಕತಾ ಚಾಂಪಿಯನ್
ಕೊರೋನಾ ವೈರಸ್ ಕಾರಣ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೀಗಾಗಿ ಅಭಿಮಾನಿಗಳಿಗೆ ಕ್ರೀಡಾಂಗಣ ಪ್ರವೇಶ ನಿರಾಕರಿಸಲಾಗಿದೆ. ಖಾಲಿ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯ ನಡೆಯಲಿದೆ. ಕೊರೋನಾ ವೈರಸ್ ಕಾರಣ ಮಾರ್ಚ್ 2020ರಲ್ಲಿ ನಡೆದ 6ನೇ ಆವೃತ್ತಿ ಐಎಸ್ಎಲ್ ಫುಟ್ಬಾಲ್ ಟೂರ್ನಿ ಫೈನಲ್ ಪಂದ್ಯ ಇದೇ ರೀತಿ ಅಭಿಮಾನಿಗಳ ಪ್ರವೇಶ ನಿರಾಕರಿಸಲಾಗಿತ್ತು.
ಸದ್ಯದ ಪರಿಸ್ಥಿತಿಯಲ್ಲಿ ಬಹುತೇಕ ರಾಜ್ಯಗಳಲ್ಲಿ ಕೊರೋನಾ ವೈರಸ್ ಹೆಚ್ಚಾಗುತ್ತಿದೆ. ಕೇರಳ ಹಾಗೂ ಗೋವಾದಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಹೀಗಾಗಿ ಈ ಎರಡು ರಾಜ್ಯದಲ್ಲಿ ಮಾತ್ರ 7ನೇ ಆವೃತ್ತಿ ಐಎಸ್ಎಲ್ ಫುಟ್ಬಾಲ್ ಟೂರ್ನಿ ಆಯೋಜಿಸಲು ನಿರ್ಧರಿಸಲಾಗಿದೆ. ಪಶ್ಚಿಮ ಬಂಗಳಾ ಹಾಗೂ ನಾರ್ಥ್ ಈಸ್ಟ್‌ನಲ್ಲಿ ಫುಟ್ಬಾಲ್ ಆಯೋಜನೆ ಕುರಿತು ಚಿಂತಿಸಲಾಯಿತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಎಂದು ಕೇರಳ ಹಾಗೂ ಗೋವಾಗೆ ಸೀಮಿತಗೊಳಿಸಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.