ಫುಟ್ಬಾಲ್‌ ಸಂಸ್ಥೆಗಳಿಗೆ ಫಿಫಾ ಭರ್ಜರಿ ನೆರ​ವು!

By Kannadaprabha NewsFirst Published Jun 27, 2020, 8:24 AM IST
Highlights

ಫಿಫಾ ಪ್ರತಿ ಸದಸ್ಯ ರಾಷ್ಟ್ರಕ್ಕೆ ತಲಾ 1 ಮಿಲಿ​ಯನ್‌ ಡಾಲರ್‌ (ಅಂದಾಜು 7.5 ಕೋಟಿ ರು.) ನೀಡು​ವು​ದಾಗಿ ತಿಳಿ​ಸಿದೆ. ಅಲ್ಲದೇ ಸದಸ್ಯ ರಾಷ್ಟ್ರಗಳ ಫುಟ್ಬಾಲ್‌ ಸಂಸ್ಥೆಗಳು ಬಡ್ಡಿ ರಹಿತ ಸಾಲಕ್ಕೆ ಅರ್ಜಿ ಸಲ್ಲಿ​ಸ​ಬ​ಹು​ದಾ​ಗಿದೆ ಎಂದು ತಿಳಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವ​ದೆ​ಹ​ಲಿ(ಜೂ.27): ಕೊರೋನಾ ಸೋಂಕಿ​ನಿಂದಾಗಿ ಜಾಗ​ತಿಕ ಮಟ್ಟ​ದಲ್ಲಿ ಫುಟ್ಬಾಲ್‌ ಕ್ರೀಡೆ ಆರ್ಥಿಕ ಸಂಕ​ಷ್ಟಕ್ಕೆ ಗುರಿ​ಯಾ​ಗಿದ್ದು, ತನ್ನ 211 ಸದಸ್ಯ ರಾಷ್ಟ್ರಗಳ ನೆರ​ವಿಗೆ ಅಂತಾ​ರಾ​ಷ್ಟ್ರೀಯ ಫುಟ್ಬಾಲ್‌ ಫೆಡ​ರೇ​ಷನ್‌ (ಫಿಫಾ) ಧಾವಿ​ಸಿದೆ. 

1.5 ಬಿಲಿ​ಯನ್‌ ಅಮೆ​ರಿ​ಕನ್‌ ಡಾಲರ್‌ (ಅಂದಾಜು 11 ಸಾವಿರ ಕೋಟಿ ರು.) ನೆರ​ವು ಘೋಷಿ​ಸಿ​ರುವ ಫಿಫಾ, ಪ್ರತಿ ಸದಸ್ಯ ರಾಷ್ಟ್ರಕ್ಕೆ ತಲಾ 1 ಮಿಲಿ​ಯನ್‌ ಡಾಲರ್‌ (ಅಂದಾಜು 7.5 ಕೋಟಿ ರು.) ನೀಡು​ವು​ದಾಗಿ ತಿಳಿ​ಸಿದೆ. ಅಲ್ಲದೇ ಸದಸ್ಯ ರಾಷ್ಟ್ರಗಳ ಫುಟ್ಬಾಲ್‌ ಸಂಸ್ಥೆಗಳು ಬಡ್ಡಿ ರಹಿತ ಸಾಲಕ್ಕೆ ಅರ್ಜಿ ಸಲ್ಲಿ​ಸ​ಬ​ಹು​ದಾ​ಗಿದೆ. ಸಂಸ್ಥೆಗಳ ವಾರ್ಷಿಕ ಆದಾ​ಯದ ಶೇ.35ರಷ್ಟು ಮೊತ್ತವನ್ನು ಸಾಲವಾಗಿ ನೀಡು​ವು​ದಾಗಿ ಫಿಫಾ ತಿಳಿ​ಸಿದೆ. ಇದೇ ವೇಳೆ ಅಭಿ​ವೃದ್ಧಿಗಾಗಿ ಮೀಸ​ಲಿ​ಟ್ಟಿ​ರುವ ಹಣವನ್ನು ನೆರವು ಕಾರ್ಯ​ಗ​ಳಿಗೆ ಬಳ​ಸಿ​ಕೊ​ಳ್ಳಲು ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಫಿಫಾ ಅನು​ಮತಿ ನೀಡಿದೆ.

6 ವರ್ಷದಲ್ಲೇ ಸಿಕ್ಸ್‌ ಪ್ಯಾಕ್‌ ; ನಾನು ಮೆಸ್ಸಿಯಂತಾಗುತ್ತೇನೆ ಎಂದ ಪೋರ..!

"Health comes first, well before football"

FIFA President Gianni Infantino speaks about the FIFA Council's unanimous approval of the FIFA Relief Plan, which will make available up to USD 1.5 billion to assist the football community.

Details 👉 https://t.co/YSFNGtg1PR pic.twitter.com/H4ldahJcnC

— FIFA.com (@FIFAcom)

ಖರ್ಚಿನ ಮೇಲೆ ನಿಗಾ: ಆರ್ಥಿಕ ನೆರವು ಪಡೆ​ಯುವ ರಾಷ್ಟ್ರಗಳು, ಹಣವನ್ನು ಸೂಕ್ತ ರೀತಿ​ಯಲ್ಲಿ ಬಳ​ಸಿ​ಕೊ​ಳ್ಳ​ಬೇಕು ಎಂದು ಫಿಫಾ ಸೂಚಿ​ಸಿದೆ. ಖರ್ಚಿನ ಮೇಲೆ ಫಿಫಾ ಕಣ್ಣಿ​ಡ​ಲಿದ್ದು, ಅವ್ಯ​ವ​ಹಾರ ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊ​ಳ್ಳು​ವು​ದಾಗಿ ಎಚ್ಚ​ರಿ​ಸಿದೆ.
 

click me!