ISL 7: ಒಡಿಶಾಕ್ಕೆ ಮತ್ತೆ ಸೋಲಿನ ಆಘಾತ, ಗೋವಾಕ್ಕೆ ಸತತ ಎರಡನೇ ಜಯ

By Suvarna News  |  First Published Dec 12, 2020, 10:22 PM IST

ಇಂಡಿಯನ್ ಸೂಪರ್ ಲೀಗ್ 2020 ಟೂರ್ನಿಯಲ್ಲಿ ಗೋವಾ ಸತತ 2ನೇ ಜಯ ಕಂಡಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಗೋಲ್ ಬಾಕ್ಸ್ ಕಡೆಗೆ ಗುರಿ ಮಾಡದ ಒಡಿಶಾ  5ನೇ ಪಂದ್ಯದಲ್ಲೂ ಅದೇ ತಪ್ಪನ್ನು ಮುಂದುವರಿಸಿತು.


ಗೋವಾ(ಡಿ.12) :  ಐಗರ್ ಆಂಗುಲೋ ಗಳಿಸಿದ ಏಕೈಕ ಗೋಲಿನಿಂದ ಎಫ್ ಸಿ ಗೋವಾ ತಂಡ ಒಡಿಶಾ ವಿರುದ್ಧ 1-0 ಗೋಲಿನ ಅಂತರದಲ್ಲಿ ಜಯ ಗಳಿಸಿದೆ. ಆಂಗುಲೋ ಗೋಲು ಗಳಿಸಿ ಗೋವಾಕ್ಕೆ ಜಯ ತಂದಿರಬಹುದು, ಆದರೆ ಪಂದ್ಯದ ನಿಜವಾದ ಹೀರೋ ಒಡಿಶಾದ ಗೋಲ್ ಕೀಪರ್ ಅರ್ಶದೀಪ್. ಇಲ್ಲವಾದಲ್ಲಿ ಗೋವಾ ಅಂದಾಜು ನಾಲ್ಕು ಗೋಲುಗಳ ಅಂತರದಲ್ಲಿ ಜಯ ಗಳಿಸುವ ಸಾಧ್ಯತೆ ಇತ್ತು.

ಮುನ್ನಡೆ ಕಂಡ ಗೋವಾ: 
45 ನಿಮಿಷಗಳ ಆಟದಲ್ಲಿ ಇತ್ತಂಡಗಳು ಗೋಲು ಗಳಿಸುವಲ್ಲಿ ವಿಫಲವಾಗಿದ್ದವು. ಆದರೆ ಗಾಯದ ಮೂರು ನಿಮಿಷಗಳ ಅವಧಿಯ ಕೊನೆಯ ಕ್ಷಣದಲ್ಲಿ ಐಗರ್ ಆಂಗುಲೋ (45ನೇ ನಿಮಿಷ) ಗಳಿಸಿದ ಗೋಲಿನಿಂದ 1-0 ಅಂತರದಲ್ಲಿ ಪ್ರಥಮಾರ್ಧದಲ್ಲಿ ಮೇಲುಗೈ ಸಾಧಿಸಿತು. ಗೋವಾ ತಂಡಕ್ಕೆ ಹಲವು ಬಾರಿ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು ಆದರೆ ಟಾರ್ಗೆಟ್ ಗೋಲ್ ಬಾಕ್ಸ್ ಕಡೆಗೆ ಇರಲಿಲ್ಲ. 

Tap to resize

Latest Videos

ಪಿಚ್ ನಲ್ಲಿ ಒಂದು ರೀತಿಯಲ್ಲಿ ಪಂದ್ಯ ಒನ್ ವೇ ಆಗಿತ್ತು. ಒಡಿಶಾದ ಆಟಗಾರರು ಗೋಲು ಗಳಿಸುವ ಕಡೆಗೆ ಹೆಚ್ಚು ಗಮನ ಹರಿಸಿದಂತೆ ಕಾಣದೆ ಗೋಲು ತಡೆಯವುದರಲ್ಲೇ ಹೆಚ್ಚು ನಿರತರಾದಂತಿತ್ತು. ಗೋವಾ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಿತ್ತು .ಒಡಿಶಾ ಆಟಗಾರರು ಓಟಕ್ಕೆ ಹೆಚ್ಚಿನ ಸಮಯವನ್ನು ವಿನಿಯೋಗಿಸಿದರು.

click me!