ISL 7: ಮುಂಬೈ ಸಿಟಿ ವಿರುದ್ಧ ಕಂಗಾಲಾದ ಈಸ್ಟ್ ಬೆಂಗಾಲ್ !

By Suvarna News  |  First Published Dec 1, 2020, 9:51 PM IST

ಈಸ್ಟ್ ಬೆಂಗಾಲ್ ವಿರುದ್ಧ ಮುಂಬೈ ಸಿಟಿ ಆರ್ಭಟಿಸಿದೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಬೆಂಗಾಲ್ ಮತ್ತೆ ನಿರಾಸೆ ಅನುಭವಿಸಿದೆ. ಎಟಿಕೆ ವಿರುದ್ಧ ಮುಗ್ಗರಿಸಿದ ಬೆಂಗಾಲ್ ಇದೀಗ ಕಂಗಾಲಾಗಿದೆ.


ಗೋವಾ(ಡಿ.01):  ಗ್ಲೆನ್ವಿಲ್ಲೆ ಲೀ ಫೊಂಡ್ರೆ (20 ಮತ್ತು 48ನೇ ನಿಮಿಷ) ಮತ್ತು ಹೆರ್ನಾನ್ ಡೇನಿಯಲ್ ಸಾಂಟನಾ (58ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಈಸ್ಟ್ ಬೆಂಗಾಲ್ ವಿರುದ್ಧ 3-0 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಮುಂಬೈ ಸಿಟಿ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನ ಅಂಕಪಟ್ಟಿಯಲ್ಲಿ  ಅಗ್ರ ಸ್ಥಾನಕ್ಕೇರಿತು. ಸತತ ಎರಡು ಸೋಲಿನಿಂದ ಕಂಗೆಟ್ಟ ಈಸ್ಟ್ ಬೆಂಗಾಲ್ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿತು. ಡಿಫೆನ್ಸ್ ವಿಭಾಗದಲ್ಲಿನ ವೈಫಲ್ಯ, ಅನುಭವದ ಕೊರತೆ ಪಾಸ್ ನಲ್ಲಿ ನಿಖರತೆ ಇಲ್ಲದ ಕಾರಣ ಈಸ್ಟ್ ಬೆಂಗಾಲ್ ಸೋಲಿಗೆ ಪ್ರಮುಖ ಕಾರಣವಾಯಿತು.

ISL 2020: ಗೋವಾ, ನಾರ್ತ್ ಈಸ್ಟ್‌ ಪಂದ್ಯ ಡ್ರಾ

Tap to resize

Latest Videos

ಮುನ್ನಡೆದ ಮುಂಬೈ ಸಿಟಿ: 
20ನೇ ನಿಮಿಷದಲ್ಲಿ ಲೀ ಫೊಂಡ್ರೆ ಗಳಿಸಿದ ಗೋಲಿನಿಂದ ಈಸ್ಟ್ ಬೆಂಗಾಲ್ ವಿರುದ್ಧದ ಪ್ರಥಮಾರ್ಧದಲ್ಲಿ 1-0 ಗೋಲಿನ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಪಂದ್ಯ ಆತ್ಯಂತ ಆಕ್ರಮಣಕಾರಿಯಾಗಿತ್ತು. ಹ್ಯೂಗೊ ಬೌಮಾಸ್ ಸುಮಾರು ಮಧ್ಯ ಪಿಚ್ ನಲ್ಲಿ ದೊರೆತ ಚೆಂಡನ್ನು ಒಂಟಿಯಾಗಿಯೇ  ಮುನ್ನಡೆಸಿ ಪೆನಾಲ್ಟಿ ವಲಯದಲ್ಲಿ ಫೊಂಡ್ರೆಗೆ ಹಸ್ತಾಂತರಿಸಿದರು.
 
ಈ ನಡುವೆ ಈಸ್ಟ್ ಬೆಂಗಾಲ್ ಗೋಲ್ ಕೀಪರ್ ದೇಬಜಿತ್ ಮಜುಂದರ್ ಮುನ್ನಡೆದು ಚೆಂಡನ್ನು ತಡೆಯಲು ಯತ್ನಿಸಿದರೂ ಬೌಮಾಸ್ ಜಾಣ್ಮೆಯಿಂದ ಚೆಂಡನ್ನು ಫೊಂಡ್ರೆಗೆ ನೀಡಿದರು. ಈಸ್ಟ್ ಬೆಂಗಾಲ್ ತಂಡದ ನಾಯಕ ಡೇನಿಯಲ್ ಫಾಕ್ಸ್ ಆರಂಭದಲ್ಲೇ ಗಾಯಗೊಂಡು ನಿರ್ಗಮಿಸಿದ್ದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿತ್ತು.

click me!