ISL 2021‌: ಬಿಎಫ್‌ಸಿಗಿಂದು ಜಮ್ಶೇಡ್‌ಪುರ ಸವಾಲು, ಗೆಲುವಿನ ಹಳಿಗೆ ಮರಳುತ್ತಾ ಚೆಟ್ರಿ ಪಡೆ?

Kannadaprabha News   | Asianet News
Published : Dec 20, 2021, 10:08 AM ISTUpdated : Dec 20, 2021, 10:09 AM IST
ISL 2021‌: ಬಿಎಫ್‌ಸಿಗಿಂದು  ಜಮ್ಶೇಡ್‌ಪುರ ಸವಾಲು, ಗೆಲುವಿನ ಹಳಿಗೆ ಮರಳುತ್ತಾ ಚೆಟ್ರಿ ಪಡೆ?

ಸಾರಾಂಶ

* ಬೆಂಗಳೂರು ಎಫ್‌ಸಿ ತಂಡಕ್ಕಿಂದು ಜಮ್ಶೇಡ್‌ಪುರ ಸವಾಲು * ಸತತ ಸೋಲುಗಳಿಂದ ಕಂಗೆಟ್ಟಿದೆ ಸುನಿಲ್ ಚೆಟ್ರಿ ಪಡೆ * ಬಿಎಫ್‌ಸಿ 7 ಪಂದ್ಯಗಳಲ್ಲಿ ಕೇವಲ 1 ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದೆ

ಬಾಂಬೊಲಿಮ್(ಡಿ.20)‌: 8ನೇ ಆವೃತ್ತಿಯ ಐಎಸ್‌ಎಲ್‌ (Indian Super League) ಫುಟ್ಬಾಲ್‌ ಟೂರ್ನಿಯಲ್ಲಿ ನಾಕೌಟ್‌ ಪ್ರವೇಶದ ಕನಸನ್ನು ಬಹುತೇಕ ಭಗ್ನಗೊಳಿಸಿರುವ ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ(Bengaluru FC), ಸೋಮವಾರ ಜಮ್ಶೇಡ್‌ಪುರ ಎಫ್‌ಸಿ (Jamshedpur FC) ಸವಾಲನ್ನು ಎದುರಿಸಲಿದೆ. ಬಿಎಫ್‌ಸಿ ಈವರೆಗೆ ಆಡಿರುವ 7 ಪಂದ್ಯಗಳಲ್ಲಿ ಕೇವಲ 1 ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದ್ದು, 4ರಲ್ಲಿ ಸೋತು 2 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. 

ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಗೆದ್ದಿದ್ದರೂ ಬಳಿಕ ಸುನಿಲ್‌ ಚೆಟ್ರಿ(Sunil Chhetri) ಪಡೆ 6 ಪಂದ್ಯಗಳಲ್ಲಿ ಗೆಲುವಿನ ಮುಖವನ್ನೇ ಕಂಡಿಲ್ಲ. ಬಿಎಫ್‌ಸಿ (BFC) ಸದ್ಯ ಅಂಕಪಟ್ಟಿಯಲ್ಲಿ 5 ಅಂಕದೊಂದಿಗೆ 10ನೇ ಸ್ಥಾನದಲ್ಲಿದ್ದು, ಜಮ್ಶೇಡ್‌ಪುರ 11 ಅಂಕದೊಂದಿಗೆ 3ನೇ ಸ್ಥಾನ ಪಡೆದುಕೊಂಡಿದೆ.

ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಮನೋಜ್‌ ಕುಮಾರ್‌

ಬೆಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ (Karnataka Badminton Association) ನೂತನ ಅಧ್ಯಕ್ಷರಾಗಿ ಮನೋಜ್‌ ಕುಮಾರ್‌ ಜಿ. ಹೊಸಪೇಟಿಮಠ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಕರ್ನಾಟಕ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ ವಾರ್ಷಿಕ ಸಭೆಯಲ್ಲಿ ಮನೋಜ್‌ ಕುಮಾರ್‌ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಜತೆಗೆ, ಹಿರಿಯ ಉಪಾಧ್ಯಕ್ಷರಾಗಿ ಬಿ.ವಿ. ಶ್ರೀನಿವಾಸ್‌, ಉಪಾಧ್ಯಕ್ಷರಾಗಿ ಡಾ.ಎಚ್‌. ಅನಿಲ್‌ ಕುಮಾರ್‌, ಶಿವರಾಜ್‌ ಸಿ.ಮರ್ತೂರ್‌, ಕಿರಣ್‌ ಬೆಳ್ಳಾಂ, ಎಸ್‌.ಎನ್‌. ಬಸವರಾಜು ಆಯ್ಕೆಯಾಗಿದ್ದಾರೆ.

Asian Champions Trophy 2021: ಜಪಾನ್ ಮಣಿಸಿ ಅಜೇಯವಾಗಿ ಸೆಮೀಸ್‌ಗೆ ಲಗ್ಗೆಯಿಟ್ಟ ಭಾರತ ಹಾಕಿ ತಂಡ

ಇನ್ನು ಕಾರ್ಯದರ್ಶಿಯಾಗಿ ಪಿ.ರಾಜೇಶ್‌, ಖಜಾಂಚಿ ಹುದ್ದೆಗೆ ಕೆ.ಅಶೋಕ, ಜಂಟಿ ಕಾರ್ಯದರ್ಶಿಯಾಗಿ ಕೆ.ಎಸ್‌.ಕೇಶವ ಮೂರ್ತಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಟಿ. ರವೀಂದ್ರ, ಎನ್‌.ಆರ್‌.ರೂಪೇಶ್‌, ಡಾ.ಎಸ್‌.ನಿಶಾಂತ್‌ ಹಿರೇಮಠ್‌, ಎನ್‌.ಸಿ.ಸುಧೀರ್‌, ವಿ.ಮುರಳೀಧರ, ಡಿ.ಗುರುಪ್ರಸಾದ್‌, ಟಿ.ಎಸ್‌.ವಿಶ್ವಾಸ್‌, ಎಸ್‌.ಜಿ.ಪ್ರಭು, ಸಿ.ಎಸ್‌. ಮಹೇಶ್‌ ಮತ್ತು ಅರುಣ್‌ ರಾವ್‌ ನೇಮಕಗೊಂಡಿದ್ದಾರೆ.

ಬ್ಯಾಡ್ಮಿಂಟನ್‌ ಪದಾಧಿಕಾರಿಗಳ ಆಯ್ಕೆ ಮಾರ್ಗಸೂಚಿಗೆ ವಿರುದ್ಧ ಉಡುಪಿ ಶಾಸಕ ರಘುಪತಿ ಭಟ್‌ ಆರೋಪ

ಬೆಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ ನೂತನ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆ’ಯ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಉಡುಪಿ ಶಾಸಕ ರಘಪತಿ ಭಟ್‌ (Raghupathi Bhat) ಆರೋಪಿಸಿದ್ದಾರೆ.

ICC U 19 World Cup 2022 : ಭಾರತ ತಂಡಕ್ಕೆ ಯಶ್ ಧುಲ್ ನಾಯಕ, ಕರ್ನಾಟಕದ ಅನೀಶ್ವರ್ ಆಯ್ಕೆ

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆಯ ಮಾರ್ಗ ಸೂಚಿಗಳ ಪ್ರಕಾರ ಕರ್ನಾಟಕ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆಗೆ ಸಂಯೋಜಿತ ಜಿಲ್ಲಾ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ ಸದಸ್ಯರು ಮಾತ್ರ ಮತ ಚಲಾಯಿಸುವ ಅಧಿಕಾರ ಇರುತ್ತದೆ. ಆದರೆ, ಜಿಲ್ಲಾ ಅಸೋಸಿಯೇಷನ್‌ನಿಂದ 10 ಅಜೀವ ಸದಸ್ಯರು ಹಾಗೂ 9 ಸದಸ್ಯರು ಪದಾಧಿಕಾರಿಗಳನ್ನು ನೇಮಕ ಮಾಡಲು ಅನುಕೂಲವಾಗುವಂತೆ ಕರ್ನಾಟಕ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ ತನ್ನ ಬೈಲಾಗೆ ತಿದ್ದುಪಡಿ ತಂದಿದೆ. ಇದು ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಮತ್ತು ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.

India Tour of South Africa: ಕನ್ನಡಿಗ ಕೆ ಎಲ್‌ ರಾಹುಲ್‌ಗೆ ಟೀಂ ಇಂಡಿಯಾ ಟೆಸ್ಟ್ ಉಪನಾಯಕ ಪಟ್ಟ..!

ಈ ಸಂದರ್ಭದಲ್ಲಿ ಬ್ಯಾಡ್ಮಿಂಟನ್‌ ಕ್ರೀಡಾಪಟುಗಳು, ಜಿಲ್ಲಾ ಪ್ರತಿನಿಧಿಗಳಾದ ಸೊಯಲ್‌ ಅಮಿನ್‌, ಡಾ. ಮೋಹನ್‌ ಅಪ್ಪಾಜಿ, ರಾಘವೇಂದ್ರ ರಾವ್‌ ಮತ್ತಿತರರು ಉಪಸ್ಥಿತರಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2026ರ FIFA ವಿಶ್ವಕಪ್ ವೇಳಾಪಟ್ಟಿ ಪ್ರಕಟ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಕ್ರಿಸ್ಟಿಯಾನೋ ರೊನಾಲ್ಡ್ ಭಾರತ ಭೇಟಿ ರದ್ದು: ತೆರೆಮರೆಯ ಹಿಂದಿನ ನಿಜವಾದ ಕಾರಣವೇನು?