* ಇಂಡಿಯನ್ ಸೂಪರ್ ಲೀಗ್‌ನಲ್ಲಿ ಅಬ್ಬರಿಸುತ್ತಿದೆ ಮುಂಬೈ ಸಿಟಿ ಎಫ್‌ಸಿ
* ಹಾಲಿ ಚಾಂಪಿಯನ್ ಮುಂಬೈ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
* ದೇಶದಲ್ಲಿ ಫುಟ್ಬಾಲ್ ಕ್ರೇಜ್ ಹೆಚ್ಚಿಸಿದ ಇಂಡಿಯನ್ ಸೂಪರ್ ಲೀಗ್
ಬೆಂಗಳೂರು(ಡಿ.15): ಕೆಲವು ವರ್ಷಗಳ ಹಿಂದೆ ಭಾರತೀಯ ದೇಶಿ ಫುಟ್ಬಾಲ್ ಟೂರ್ನಿಯಾದ ಐ-ಲೀಗ್ (I-League) ಪ್ರಾರಂಭವಾದಾಗ, ಫುಟ್ಬಾಲ್ ಅಭಿಮಾನಿಗಳು ಪಂದ್ಯವನ್ನು ಎಂಜಾಯ್ ಮಾಡಿದ್ದರು. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ದೇಶದಲ್ಲಿ ಫುಟ್ಬಾಲ್ ಜನಪ್ರಿಯತೆ ಹೆಚ್ಚಿದ್ದೇ ಇಂಡಿಯನ್ ಸೂಪರ್ ಲೀಗ್ (Indian Super League) ಆರಂಭವಾದ ಬಳಿಕ ಎನ್ನಬಹುದು. ಐಎಸ್‌ಎಲ್ ಟೂರ್ನಿ ಆರಂಭವಾಗಿ ಕೆಲವೇ ದಿನಗಳಲ್ಲಿ ಭಾರತೀಯ ಫುಟ್ಬಾಲ್ ದಿಕ್ಕೇ ಬದಲಾಗಿ ಹೋಯಿತು. ಐಎಸ್‌ಎಲ್ ಆರಂಭವಾಗಿ ಎಂಟು ವರ್ಷಗಳು ಕಳೆದಿವೆ, ಇದೀಗ ಎಂಟು ತಂಡಗಳಿಂದ ಟೂರ್ನಿಯಿಂದ ಭಾಗವಹಿಸುವವರ ಸಂಖ್ಯೆ 11 ತಂಡಗಳಿಗೆ ಏರಿಕೆಯಾಗಿದೆ. ಈ ಮೂಲಕ ದೇಶದ ಅತಿದೊಡ್ಡ ಫುಟ್ಬಾಲ್ ಟೂರ್ನಿಯಾಗಿ ಐಎಸ್‌ಎಲ್ ಹೊರಹೊಮ್ಮಿದೆ.
ಒಂದು ಸಮಯದಲ್ಲಿ ಎಟಿಕೆ ಮೋಹನ್ ಬಗಾನ್ (ATK Mohun Bagan) ಹಾಗೂ ಈಸ್ಟ್ ಬೆಂಗಾಲ್ (East Bengal) ತಂಡಗಳು ಫುಟ್ಬಾಲ್ ಜಗತ್ತಿನ ಅತಿದೊಡ್ಡ ಸಾಂಪ್ರದಾಯಿಕ ಎದುರಾಳಿಗಳೆಂದು ಗುರುತಿಸಿಕೊಂಡಿದ್ದವು. ಈ ಸಂದರ್ಭದಲ್ಲಿ ಟಿಆರ್‌ಪಿ ಮುಗಿಲು ಮುಟ್ಟುತ್ತಿತ್ತು. ಆಲ್ ಇಂಡಿಯಾ ಫುಟ್ಬಾಲ್ ಫೆಡರೇಷನ್(AIFF) ಮತ್ತು FDSL ಈ ಎರಡು ತಂಡಗಳನ್ನು ಖರೀದಿಸಿ ಒಂದೇ ಸೂರಿನಡಿ ತಂದವು. ಈ ಎರಡು ಬಲಿಷ್ಠ ತಂಡಗಳ ಜತೆಗೆ ಇನ್ನೂ ಹಲವು ತಂಡಗಳು ಎಂಟನೇ ಆವೃತ್ತಿಯ ಐಎಸ್‌ಎಲ್ ಟೂರ್ನಿಯಲ್ಲಿ ಸೆಣಸಾಟ ನಡೆಸುತ್ತಿದ್ದು, ದೇಶದ ನಾನಾ ಮೂಲೆಯ ಫುಟ್ಬಾಲ್ ಅಭಿಮಾನಿಗಳು ಟಿವಿ ಮುಂದೆ ಕುಳಿತು ತಮ್ಮ ತಂಡಗಳನ್ನು ಬೆಂಬಲಿಸುತ್ತಿದ್ದಾರೆ.
undefined
ಹಾಲಿ ಚಾಂಪಿಯನ್ ಮುಂಬೈ ಸಿಟಿ ಎಫ್‌ಸಿ(Mumbai City FC), ಇಂಡಿಯನ್ ಸೂಪರ್ ಲೀಗ್‌ನ ಎಂಟನೇ ಆವೃತ್ತಿಯ ಟೂರ್ನಿಯಲ್ಲೂ ದಿಟ್ಟ ಪ್ರದರ್ಶನ ತೋರುವ ಮೂಲಕ ಚಾಂಪಿಯನ್ ಪಟ್ಟ ತನ್ನಲ್ಲೇ ಉಳಿಸಿಕೊಳ್ಳುವ ರೀತಿಯ ಪ್ರದರ್ಶನ ತೋರುತ್ತಿದೆ. ಸದ್ಯ 5 ಪಂದ್ಯಗಳ ಮುಕ್ತಾಯದ ವೇಳೆಗೆ ಮುಂಬೈ ಆಟಗಾರರ ಅಮೋಘ ಪ್ರದರ್ಶನದ ನೆರವಿನಿಂದ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮುಂಬೈ ಸಿಟಿ ಎಫ್‌ಸಿ ತಂಡವು ಆಡಿದ 5 ಪಂದ್ಯಗಳ ಪೈಕಿ 4 ಗೆಲುವುಗಳೊಂದಿಗೆ 12 ಅಂಕಗಳನ್ನು ಸಂಪಾದಿಸಿದೆ. ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಒಡಿಶಾ ಎಫ್‌ಸಿ (Odisha FC), ಚೆನ್ನೈಯಿನ್ ಎಫ್‌ಸಿ ಹಾಗೂ ಜೆಮ್‌ಶೆಡ್‌ಪುರ್ ಎಫ್‌ಸಿ ತಂಡಗಳು ಸದ್ಯ ಅಂಕಪಟ್ಟಿಯಲ್ಲಿ ಕ್ರಮವಾಗಿ ಟಾಪ್ 4 ಪಟ್ಟಿಯೊಳಗೆ ಸ್ಥಾನ ಪಡೆದಿವೆ.
ಇನ್ನು ಭಾರತೀಯ ಫುಟ್ಬಾಲ್‌ನ ಎರಡು ಬಲಿಷ್ಠ ತಂಡಗಳಾದ ಬೆಂಗಳೂರು ಎಫ್‌ಸಿ (Bengaluru FC) ಹಾಗೂ ಈಸ್ಟ್ ಬೆಂಗಾಲ್ ಎಫ್‌ಸಿ ತಂಡಗಳು ಲಯ ಕಳೆದುಕೊಂಡಿದ್ದು, ಐಎಸ್‌ಎಲ್ 2021-22 ಟೂರ್ನಿಯಲ್ಲಿ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿವೆ. ಹೌದು, ನೀವು ಓದುತ್ತಿರುವುದು ನಿಜ. ಸ್ಪರ್ಧೆಯ ಫಲಿತಾಂಶ ಅರಿವಾಗುವುದೇ ಅಂಕಪಟ್ಟಿಯಿಂದ. ಇನ್ನು ಮೂರು ಬಾರಿಯ ಚಾಂಪಿಯನ್ ಎಟಿಕೆ ಮೋಹನ್ ಬಗಾನ್ ತಂಡವು ಟಾಪ್ 4 ಪಟ್ಟಿಯಲ್ಲಿ ಸ್ಥಾನ ಪಡೆಯಲು ಸದ್ಯ ವಿಫಲವಾಗಿದ್ದು, ಅಂಕಪಟ್ಟಿಯಲ್ಲಿ ಎಟಿಕೆ ತಂಡವು ಆರನೇ ಸ್ಥಾನದಲ್ಲಿದೆ.
ಇನ್ನೂ ಹಲವು ಪಂದ್ಯಗಳು ನಡೆಯಬೇಕಿದ್ದು, ಟೂರ್ನಿಯ ಫಲಿತಾಂಶಗಳಲ್ಲಿ ಸಾಕಷ್ಟು ಏರಿಳಿತಗಳು ನಡೆಯಬಹುದು. ನಾವು ಯಾರ ಮೇಲೆ ಹಣ ಹಾಕಬಹುದು ಹೇಳಿ? ಉಳಿದ ತಂಡಗಳಿಗೆ ಹೋಲಿಸಿದರೆ, ಹಾಲಿ ಚಾಂಪಿಯನ್ ಮುಂಬೈ ಸಿಟಿ ಮೇಲೆ ನಾವು ಒಲವು ತೋರಬಹುದು. ಯಾಕೆಂದರೆ, ಮುಂಬೈ ತಂಡದ ಐವರು ಆಟಗಾರರು ಈಗಾಗಲೇ ಎರಡಕ್ಕಿಂತ ಹೆಚ್ಚು ಗೋಲು ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಈಗ ಆಡಿರುವ ಐದು ಪಂದ್ಯಗಳ ಪೈಕಿ ಹಾಲಿ ಚಾಂಪಿಯನ್ ಮುಂಬೈ ಸಿಟಿ 16 ಗೋಲು ಬಾರಿಸಿದೆ. ಅಂದರೆ ಪ್ರತಿ ಪಂದ್ಯದಲ್ಲಿ ಸರಾಸರಿ 3 ಗೋಲು ಬಾರಿಸಿರುವು, ನಿಜಕ್ಕೂ ತಂಡದ ಅದ್ಭುತ ಪ್ರದರ್ಶನವೇ ಸರಿ.
ಹೀಗಿದ್ದೂ, ಫುಟ್ಬಾಲ್ ಒಂದು ಅದ್ಭುತ ಕ್ರೀಡೆಯಾಗಿದ್ದು, ಸಮಯ ಸಾಗಿದಂತೆ ಕೆಲವೊಂದು ತಂಡದ ಪ್ರದರ್ಶವು ಬದಲಾಗಬಹುದು. ಈಗಾಗಲೇ ಇಂಡಿಯನ್ ಸೂಪರ್ ಲೀಗ್ ಟೂರ್ನಿಯು ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದ್ದು, ಇನ್ನುಳಿದ ಪಂದ್ಯಗಳು ಸಾಕಷ್ಟು ಪೈಪೋಟಿಯಿಂದ ಕೂಡಿರುವ ಸಾಧ್ಯತೆಯಿದೆ. ನಿಮ್ಮ ಪ್ರಕಾರ ಯಾವ ತಂಡವು ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಬಹುದು? ಎರಡನೇ ಬಾರಿಗೆ ಮುಂಬೈ ಸಿಟಿ ಎಫ್‌ಸಿ ಪ್ರಶಸ್ತಿ ಜಯಿಸಬಹುದು?, ಅಥವಾ ಈ ಬಾರಿಯ ಐಎಸ್‌ಎಲ್ ಟೂರ್ನಿಯಲ್ಲಿ ಹೊಸ ಚಾಂಪಿಯನ್ ಉದಯ ಆಗಬಹುದಾ? ಕೊನೆಯವರೆಗೂ ಕಾದು ನೋಡಿದರೆ ಈ ಮೂರು ಪ್ರಶ್ನೆಗಳ ಪೈಕಿ ಒಂದಕ್ಕೆ ಒಂದಕ್ಕೆ ಉತ್ತರ ಸಿಗಬಹುದು. ಅಲ್ಲಿಯವರೆಗೂ ಫುಟ್ಬಾಲ್ ಟೂರ್ನಿಯನ್ನು ಎಂಜಾಯ್ ಮಾಡಿ.