ಒಡಿಶಾ ಹಾಗೂ ಕೇರಳ ಅಂತಿಮ ಲೀಗ್ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿತು. ಗೋಲಿನ ಸುರಿಮಳೆಯನ್ನೇ ಸುರಿಸಿತು.ಆದರೆ ಉಭಯ ತಂಡಕ್ಕೂ ಗೆಲುವು ಮಾತ್ರ ಸಿಗಲಿಲ್ಲ.
ಭುವನೇಶ್ವರ(ಫೆ.23): ಕೇರಳ ಬ್ಲಾಸ್ಟರ್ಸ್ ಮತ್ತು ಒಡಿಶಾ ಎಫ್ ಸಿ ತಂಡಗಳ ನಡುವಿನ ಕೊನೆಯ ಪಂದ್ಯ 4-4 ಗೋಲುಗಳಿಂದ ಡ್ರಾಗೊಂಡಿದ್ದು, ಉಭಯ ತಂಡಗಳು ಅಂಕ ಹಂಚಿಕೊಂಡು ಗೌರವ ಮತ್ತು ನೆಮ್ಮದಿಯೊಂದಿಗೆ ನಿರ್ಗಮಿಸಿದವು.
ಇದನ್ನೂ ಓದಿ: ISL 2020: ಮನೆಯಲ್ಲೇ ಸೋತ ಮುಂಬೈ, ಸೆಮಿಫೈನಲ್‌ಗೆ ಚೆನ್ನೈ
undefined
ಆತಿಥೇಯ ಒಡಿಶಾ ಪರ ಮ್ಯಾನ್ವೆಲ್ ಒನೌ ಅವರ ಹ್ಯಾಟ್ರಿಕ್ (1, 36 ಮತ್ತು 51ನೇ ನಿಮಿಷ) ಮತ್ತು ಪೆರೆಜ್ ಗ್ಯುಡೆಸ್ (44ನೇ ನಿಮಿಷ) ಅವರ ಅದ್ಭುತ ಸಾಧನೆ ಮಾಡಿದರೆ ಪ್ರವಾಸಿ ಕೇರಳ ಬ್ಲಾಸ್ಟರ್ಸ್ ಪರ ನಾರಾಯಣ್ ದಾಸ್ ನೀಡಿದ ಉಡುಗೊರೆ ಗೋಲು (6ನೇ ನಿಮಿಷ), ಮೆಸ್ಸಿ ಬೌಲಿ (28ನೇ ನಿಮಿಷ), ಬಾರ್ಥಲೋಮ್ಯೊ ಒಗ್ಬಚೆ (82 ಮತ್ತು 90ನೇ ನಿಮಿಷ) ಗಳಿಸಿದ ಗೋಲಿನಿಂದ ಸಮಬಲ ಸಾಧಿಸುವಂತಾಯಿತು.
ಗೆದ್ದು ಗೌರವದೊಂದಿಗೆ ನಿರ್ಗಮಿಸಬೇಕೆಂಬುದು ಒಡಿಶಾ ಹಾಗೂ ಕೇರಳ ತಂಡದ ಮುಖ್ಯ ಗುರಿಯಾಗಿತ್ತು. ಇದರ ಪರಿಣಾಮ ಗೋಲು ದಾಖಲಾಗಲೇ ಬೇಕು, ಮನೆಯಂಗಣದಲ್ಲಿ ಮಿಂಚಿದ ಒಡಿಶಾ ಪ್ರಥಮಾರ್ಧದಲ್ಲಿ 3-2 ಗೋಲುಗಳ ಅಂತರದಲ್ಲಿ ಮೇಲುಗೈ ಸಾಧಿಸಿತು. ಮ್ಯಾನ್ವೆಲ್ ಒನೌ ಪಂದ್ಯ ಆರಂಭಗೊಂಡ 1ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು. ಆದರೆ ನಾರಾಯಣ ದಾಸ್ ಮಾಡಿದ ಪ್ರಮಾದದಿಂದಾಗಿ ಕೇರಳ ಬ್ಲಾಸ್ಟರ್ಸ್ ಸಮಬಲ ಸಾಧಿಸಿತು.
ಅದು ನಾರಾಯಣ ದಾಸ್ ಅವರ ಉಡುಗೊರೆ ಗೋಲಾಗಿತ್ತು. 28ನೇ ನಿಮಿಷದಲ್ಲಿ ಮೆಸ್ಸಿ ಬೌಲಿ ಗಳಿಸಿದ ಗೋಲಿನಿಂದ ಕೇರಳ ಬ್ಲಾಸ್ಟರ್ಸ್ 2-1 ಅಂತರದಿಂದ ಮುನ್ನಡೆ ಕಂಡಿತು. ಆದರೆ ನಂತರ ಒಡಿಶಾ ಪಂದ್ಯದ ಮೇಲೆ ಹಿಡಿತ ಸಾಧಿಸಿತು. 36ನೇ ನಿಮಿಷದಲ್ಲಿ ಮ್ಯಾನ್ವೆಲ್ ಒನೌ ವೈಯಕ್ತಿಕ ಎರಡನೇ ಗೋಲು ಗಳಿಸುವ ಮೂಲಕ ಪಂದ್ಯ 2-2ರಲ್ಲಿ ಸಮಬಲಗೊಂಡಿತು. 44ನೇ ನಿಮಿಷದಲ್ಲಿ ಪೆರೇಜ್ ಗ್ಯುಡೇಸ್ ಪೆನಾಲ್ಟಿ ಮೂಲಕ ಗಳಿಸಿದ ಗೋಲಿನಿಂದ ಒಡಿಶಾ 3-2 ಅಂತರದಲ್ಲಿ ಪ್ರಥಮಾರ್ಧವನ್ನು ತನ್ನದಾಗಿಸಿಕೊಂಡಿತು.