ISL 2020: ಮನೆಯಲ್ಲೇ ಸೋತ ಮುಂಬೈ, ಸೆಮಿಫೈನಲ್‌ಗೆ ಚೆನ್ನೈ

Suvarna News   | Asianet News
Published : Feb 21, 2020, 10:10 PM IST
ISL 2020: ಮನೆಯಲ್ಲೇ ಸೋತ ಮುಂಬೈ, ಸೆಮಿಫೈನಲ್‌ಗೆ ಚೆನ್ನೈ

ಸಾರಾಂಶ

ಮುಂಬೈ ಸಿಟಿ ಎಫ್‌ಸಿ ತಂಡ ಕನಸು ನುಚ್ಚುನೂರಾಗಿದೆ. ಚೆನ್ನೈಯನ್ ತಂಡವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸುವ ವಿಶ್ವಾಸದಲ್ಲಿದ್ದ ಮುಂಬೈಗೆ ಆಘಾತವಾಗಿದೆ. ರೋಚಕ ಪಂದ್ಯದಲ್ಲಿ ಚೆನ್ನೈ ಸೆಮೀಸ್ ಟಿಕೆಟ್ ಗಿಟ್ಟಿಸಿಕೊಂಡಿದೆ. 

ಮುಂಬೈ(ಫೆ.21): ವಾಣಿಜ್ಯ ನಗರಿಯಲ್ಲಿ ನಡೆದ ಮಹತ್ವದ ಪಂದ್ಯ ಮುಂಬೈ ಸಿಟಿ ಎಫ್‌ಸಿ ಹಾಗೂ ಚೆನ್ನೈಯನ್ ಎಫ್‌ಸಿ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ತವರಿನಲ್ಲಿ ಮುಗ್ಗರಿಸಿದ ಮುಂಬೈ ಸೆಮೀಸ್ ರೇಸ್‌ನಿಂದ ಹೊರಬಿದ್ದರೆ, ಚೆನ್ನೈಯನ್ ತಂಡ ಸೆಮಿಫೈನಲ್ ಪ್ರವೇಶಿಸಿದೆ. 

ಇದನ್ನೂ ಓದಿ: ತವರಿನಲ್ಲಿ ತಿರುಗೇಟು ನೀಡಲು ಬೆಂಗಳೂರು FC ರೆಡಿ!

ಲೂಸಿಯಾನ್ ಗೊಯಿಯಾನ್ (83ನೇ ನಿಮಿಷ) ಗಳಿಸಿದ ಏಕೈಕ ಗೋಲಿನಿಂದ ಮುಂಬೈ ಸಿಟಿ ಎಫ್ ಸಿ ತಂಡವನ್ನು 1-0 ಗೋಲಿನಿಂದ ಮಣಿಸಿದ ಚೆನ್ನೈಯಿನ್ ಎಫ್ ಸಿ ಪ್ರಸಕ್ತ ಸಾಲಿನ ಹೀರೋ ಇಂಡಿಯನ್ ಸೂಪರ್ ಲೀಗ್ ನ ಫೈನಲ್ ತಲುಪಿದೆ. ಕಳೆದ ವರ್ಷ ಮುಂಬೈ ತಂಡದಲ್ಲಿದ್ದ ಗೊಯೆನ್ ಈಗ ಚೆನ್ನೈ ತಂಡದ ನಾಯಕರಾಗಿದ್ದು ತಂಡಕ್ಕೆ ಐತಿಹಾಸಿಕ ಜಯ ತಂದಿತ್ತು. ಇದರೊಂದಿಗೆ ಮುಂಬೈ ಹಾಗೂ ಒಡಿಶಾ ತಂಡಗಳ ಸೆಮಿಫೈನಲ್ ಕನಸು ನುಚ್ಚು ನೂರಾಯಿತು. ಇನ್ನುಳಿದಿರುವುದು ಬರೇ ಔಪಚಾರಿಕ ಪಂದ್ಯಗಳು.

ಎರಡೂ ತಂಡಗಳ ಡಿಫೆನ್ಸ್ ವಿಭಾಗ ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದಾಗ ಅಲ್ಲಿ ಗೋಲಿಗೆ ಅವಕಾಶ ಕಡಿಮೆ ಇರುತ್ತದೆ. ಮುಂಬೈ ಹಾಗೂ ಚೆನ್ನೈಯಿನ್ ತಂಡಗಳ ನಡುವಿನ ಪ್ರಥಮಾರ್ಧ ಅತ್ಯಂತ ಆತಂಕದಲ್ಲೇ ಕೊನೆಗೊಂಡಿತು. 15ನೇ ನಿಮಿಷದಲ್ಲಿ ಮುಂಬೈ ಸಿಟಿ  ತಂಡ ಪೆನಾಲ್ಟಿಗಾಗಿ ಮನವಿ ಮಾಡಿತ್ತು, ಆದರೆ ರೆಫರಿಗೆ ಪ್ರಮಾದದ ಅರಿವಾಗದ ಕಾರಣ ಅವಕಾಶದಿಂದ ವಂಚಿತವಾಯಿತು.  

25ನೇ ನಿಮಿಷದಲ್ಲಿ ಅಮೈನ್ ಚೆರ್ಮಿಟಿ ಗೋಲ್ ಬಾಕ್ಸ್ ನ ಆರು ಅಡಿ ಅಂತರದಲ್ಲೇ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು, ಆದರೆ ಅವರು ಹೆಡರ್ ಮಾಡುವ ಅವಕಾಶವನ್ನು ತಪ್ಪಿಸಿಕೊಂಡರು. ಚೆನ್ನೈಯಿನ್ ತಂಡಕ್ಕೆ ಸಮರ್ಪಕವಾದ ಅವಕಾಶ ಸಿಕ್ಕಲಿಲ್ಲ, ಇದರಿಂದಾಗಿ ಪ್ರಥಮಾರ್ಧದ ಪಂದ್ಯ ಗೋಲಿಲ್ಲದೆ ಡ್ರಾಗೊಂಡಿತು. ದ್ವಿತಿಯಾರ್ಧದಲ್ಲಿ ಏಕೈಕ ಗೋಲು ಚೆನ್ನೈಗೆ ಗೆಲುವಿನ ಸಿಹಿ ನೀಡಿತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರ FIFA ವಿಶ್ವಕಪ್ ವೇಳಾಪಟ್ಟಿ ಪ್ರಕಟ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಕ್ರಿಸ್ಟಿಯಾನೋ ರೊನಾಲ್ಡ್ ಭಾರತ ಭೇಟಿ ರದ್ದು: ತೆರೆಮರೆಯ ಹಿಂದಿನ ನಿಜವಾದ ಕಾರಣವೇನು?