ISL 2020: ಒಡಿಶಾ-ಕೇರಳ ಹೋರಾಟ; ಗೆದ್ದರೂ ಸೋತರೂ ಲೆಕ್ಕಕ್ಕಿಲ್ಲ!

By Suvarna NewsFirst Published Feb 22, 2020, 8:35 PM IST
Highlights

ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಕೇರಳ ಹಾಗೂ ಒಡಿಶಾ ಹೋರಾಟ ಅಂತ್ಯವಾಗಿದೆ. ಇದೀಗ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಸೋಲಿನ ಅಂತರ ಕಡಿಮೆ ಮಾಡಲು ಸಜ್ಜಾಗಿದೆ. ಈ ಪಂದ್ಯ ಗೌರವಕ್ಕಾಗಿ ಎರಡು ತಂಡಗಳಿಗೆ ಮುಖ್ಯವಾಗಿದೆ. 
 

ಭುವನೇಶ್ವರ(ಫೆ.22): ಕಳಿಂಗ ಕ್ರೀಡಾಂಗಣಲ್ಲಿ ಒಡಿಶಾ ಎಫ್ ಸಿ ತಂಡ ಕೇರಳ ಬ್ಲಾಸ್ಟರ್ಸ್ ಗೆ ಆತಿಥ್ಯ ನೀಡುವುದರೊಂದಿಗೆ  ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ತನ್ನ ಕೊನೆಯ ಪಂದ್ಯವನ್ನಾಡಲಿದೆ. ಚೆನ್ನೈಯಿನ್ ತಂಡ ಮುಂಬೈ ಸಿಟಿ ತಂಡವನ್ನು ಸೋಲಿಸುವ ಮೂಲಕ ಒಡಿಶಾದ ಸೆಮಿಫೈನಲ್ ಕನಸು ನುಚ್ಚು ನೂರಾಯಿತು. ಜೊಸೆಫ್ ಗೊಂಬಾವ್ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಂಡದ ಸುಧಾರಣೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ISL 2020: ಮನೆಯಲ್ಲೇ ಸೋತ ಮುಂಬೈ, ಸೆಮಿಫೈನಲ್‌ಗೆ ಚೆನ್ನೈ

‘’ನಮಗೆ ಇಲ್ಲಿ ಉತ್ತಮ ಆಧಾರ ಸಿಕ್ಕಿದೆ. ಉತ್ತಮ ಅಭಿಮಾನಿಗಳೂ ಇದ್ದಾರೆ. ಯುವ ಹಾಗೂ ಹೊಸ ತಂಡ, ಅಲ್ಲದೆ ಹೊಸ ನಗರವನ್ನು ಕಂಡುಕೊಂಡಿರುವ ತಂಡಕ್ಕೆ ಐದನೇ ಸ್ಥಾನ ಸಿಕ್ಕಿರುವುದು ನಿಜವಾಗಿಯೂ ತೃಪ್ತಿಕರ. ಇದು ಹೊಸ ಯೋಜನೆಗೆ ಸಿಕ್ಕ ಉತ್ತಮ ಫಲ. ಮುಂದಿನ ಋತುವಿನಲ್ಲಿ ನಮ್ಮ ತಂಡ ಇನ್ನೂ ಉತ್ತಮ ಸಾಧನೆ ಮಾಡಲಿದೆ. ಉತ್ತಮ ರೀತಿಯಲ್ಲಿ ತರಬೇತಿ ಅಂಗಣವೂ ಸಿಗಲಿದೆ, ಇದರಿಂದ ಉತ್ತಮ ಪ್ರದರ್ಶನ ತೋರಬಹುದು, ಯುವ ಆಟಗಾರರು ಮತ್ತಷ್ಟು ಅನುಭವ ಪಡೆಯಲಿದ್ದಾರೆ,’’ ಎಂದು ಗೊಂಬಾವ್ ಹೇಳಿದ್ದಾರೆ.

ಬೆಂಗಳೂರು ತಂಡದಿಂದ ಸಾಲದ ರೂಪದಲ್ಲಿ ಒಡಿಶಾ ಸೇರಿಕೊಂಡ ಮ್ಯಾನ್ವೆಲ್ ಒನೌ ಮೂರು ಪಂದ್ಯಗಳನ್ನಾಡಿ ನಾಲ್ಕು ಗೋಲುಗಳನ್ನು ಗಳಿಸಿದ್ದಾರೆ. ಇದರಿಂದ ತಂಡದ ಇತರ ಆಟಗಾರರ ಮನೋಬಲ ಹೆಚ್ಚಿಸಿದೆ.

ಕೇರಳ ಬ್ಲಾಸ್ಟರ್ಸ್ ತಂಡ ಈ ಬಾರಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಗಾಯದ ಸಮಸ್ಯೆ ತಂಡವನ್ನು ಕಾಡಿದ್ದ ಕಾರಣ ಅನೇಕ ವಿದೇಶಿ ಆಟಗಾರರು ಅಂಗಣದ ಸೈಡ್ ಲೈನ್ ನಲ್ಲೇ ಕಾನ ಕಳೆಯಬೇಕಾಯಿತು. ಸಂದೇಶ್ ಜಿಂಗಾನ್ ಅವರು ಋತುವಿನ ಆರಂಭದಲ್ಲೇ ಗಾಯಗೊಂಡಿದ್ದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಯಿತು.

ಕೋಚ್ ಎಲ್ಕೋ ಷೆಟ್ಟೋರಿ ಪ್ರತಿಯೊಂದು ಪಂದ್ಯಕ್ಕೂ ಆಟುವ ಹನ್ನೊಂದು ಮಂದಿಯಲ್ಲಿ ಬದಲಾವಣೆ ತರುತ್ತಿದ್ದುದು, ತಂಡದ ಹೊಂದಾಣಿಕೆಯಲ್ಲಿನ ಕೊರತೆಗೆ ಪ್ರಮುಖ ಕಾರಣವಾಗಿತ್ತು.’’ ನಾಳೆ ನಾವು ಋತುವಿನ 18ನೇ ಪಂದ್ಯವನ್ನಾಡುತ್ತಿದ್ದೇವೆ, 17 ಬಾರಿ ನಾವು ತಂಡವನ್ನು ಬದಲಾಯಿಸಿದ್ದೇನೆ. ಅದು ನಾನು ಬೇಕೆಂದು ಬದಲಾಯಿಸಿದ್ದಲ್ಲ, ಬದಲಾವಣೆ ಅನಿವಾರ್ಯವಾಗಿತ್ತು,’’ ಎಂದು ಡಚ್ ಕೋಚ್ ಹೇಳಿದ್ದಾರೆ.

‘’ಕೊನೆಯಲ್ಲಿ ನಾವು ಕೆಲವು ಉತ್ತಮ ಆಟ ಪ್ರದರ್ಶಿಸಿದ್ದೇವೆ, ಪಂದ್ಯದ ನಂತರ ಅನೇಕ ಪಂದ್ಯಗಳು ನಮ್ಮ ಆಟದ ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿವೆ. ನಮಗೆ ಕೆಲವೊಂದು ಸಂದರ್ಭಗಳಲ್ಲಿ ಅದೃಷ್ಟ ಕೈಕೊಟ್ಟಿತು. ಸ್ಥಿರ ಪ್ರದರ್ಶನ ನೀಡಿದ್ದಲ್ಲಿ ಮಾತ್ರ ಯಶಸ್ಸು ಸಿಗುತ್ತದೆ,’’ ಎಂದು ಹೇಳಿದರು. ತಂಡದ ಪರ ಒಗ್ಬಚೆ 15 ಪಂದ್ಯಗಳನ್ನಾಡಿ 13 ಗೋಲುಗಳನ್ನು ಗಳಿಸಿ ಉತ್ತಮ ಪ್ರದರ್ಶನ ತೋರಿದ್ದಾರೆ. 

click me!