ISL 2019: ಒಡಿಶಾ ವಿರುದ್ದ ನಾರ್ತ್ ಈಸ್ಟ್‌ಗೆ ಗೆಲುವು

By Web DeskFirst Published Oct 26, 2019, 10:33 PM IST
Highlights

ಬಲಿಷ್ಠ ಬೆಂಗಳೂರು ಎಫ್ ಸಿ ವಿರುದ್ದ ಡ್ರಾ ಸಾಧಿಸಿದ್ದ ನಾರ್ತ್ ಈಸ್ಟ್ ಯುನೈಟೆಡ್ ಇದೀಗ ಮೊದಲ ಗೆಲುವಿನ ಸಿಹಿ ಕಂಡಿದೆ. ಒಡಿಶಾ ವಿರುದ್ದ ತವರಿನಲ್ಲಿ ಅದ್ಬುತ ಪ್ರದರ್ಶನ ನೀಡಿದ ನಾರ್ಟ್ ಈಸ್ಟ್ ಗೆಲುವಿನ ನಗೆ ಬೀರಿದೆ.

ಗುವಾಹಟಿ(ಅ.26): ರೆಡೀಮ್ ಟ್ಯಾಂಗ್ ( 2 ನೇ ನಿಮಿಷ) ಹಾಗೂ  ಅಸಮಾಹ್ ಗ್ಯಾನ್ ( 84 ನೇ ನಿಮಿಷ) ಗಳಿಸಿದ ಅದ್ಭುತ ಗೋಲುಗಳ ನೆರವಿನಿಂದ ಆತಿಥೇಯ ನಾರ್ತ್ ಈಸ್ಟ್ ಯುನೈಟೆಡ್ ತಂಡ ಒಡಿಶಾ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಇಂಡಿಯನ್ ಸೂಪರ್ ಲೀಗ್ ನ ಪ್ರಸಕ್ತ ಆವೃತ್ತಿಯಲ್ಲಿ ಜಯದ ಖಾತೆ ತೆರೆಯಿತು.

 

Lalthathanga Khawlhring nearly added a third for at the death! pic.twitter.com/xyZ2Qemkq5

— Indian Super League (@IndSuperLeague)

ಇದನ್ನೂ ಓದಿ: ದೀಪಾವಳಿ ಧಮಾಕಾ; ಬೆಂಗಳೂರು FC ಹಾಗೂ ಗೋವಾ ಮುಖಾಮುಖಿ!

ಮನೆಯಂಗಣದ ಪ್ರೇಕ್ಷಕರ ಬೆಂಬಲ ಯಶಸ್ಸಿಗೆ ಮತ್ತೊಂದು ಕಾರಣವಾಗಿತ್ತು. ಜೇಮ್ಶೆಡ್ಪುರ ವಿರುದ್ಧದ ಪಂದ್ಯದಲ್ಲಿ ಒಡಿಶಾ ಹತ್ತು ಮಂದಿ ಆಟಗಾರರಿರುವಾಗ ಗೋಲು ಗಳಿಸುವಲ್ಲಿ ವಿಫಲವಾಗಿತ್ತು, ಇಲ್ಲಿ ಹತ್ತು ಮಂದಿ ಆಟಗಾರರಿರುವಾಗ ಗೋಲನ್ನು ತಡೆಯುವಲ್ಲಿ ವಿಫಲವಾಯಿತು. 

ಕಾರ್ಲೋಸ್ ಡೆಲ್ಗಡೊ ಪ್ರಮಾದವೆಸಗಿದ ಕಾರಣ ರೆಡ್ ಕಾರ್ಡ್ ಸ್ವೀಕರಿಸಬೇಕಾಯಿತು. ಪರಿಣಾಮ ಒಡಿಶಾ ತಂಡ ದ್ವಿತೀಯಾರ್ಧದ ಒಂದಿಷ್ಟು ಸಮಯವನ್ನು ಕೇವಲ ಹತ್ತು ಮಂದಿ ಆಟಗಾರರಲ್ಲೇ ಮುಂದುವರಿಸಬೇಕಾಯಿತು. ನಾರ್ತ್ ಈಸ್ಟ್ ಇದರ ಸದುಪಯೋಗ ಪಡೆದುಕೊಂಡಿತು. ಅಸಮಾಹ್ ಗ್ಯಾನ್  84ನೇ ನಿಮಿಷದಲ್ಲಿ  ಗೋಲು  ಗಳಿಸಿ ತಂಡಕ್ಕೆ ಜಯದ ಮುನ್ನುಡಿ ಬರೆದರು. 71 ನೇ ನಿಮಿಷದಲ್ಲಿ ಕ್ಸಿಸ್ಕೋಹೆರ್ನಾಂಡೀಸ್ ಗಳಿಸಿದ ಗೋಲು ಪಂದ್ಯವನ್ನು ಸಮಬಲಗೊಳಿಸಿತ್ತು.

ಇದನ್ನೂ ಓದಿ: ISL ಗೋ​ಲಿ​ಲ್ಲದೆ ಡ್ರಾಗೊಂಡ ಬಿಎಫ್‌ಸಿ ಪಂದ್ಯ

ಕ್ಸಿಸ್ಕೋ ಹೆರ್ನಾಂಡಿಸ್ ( 71 ನೇ ನಿಮಿಷ) ಗೋಲು  ಗಳಿಸಿ ಒಡಿಶಾದ ಸೋಲಿನ ಅಂತರವನ್ನು ಕಡಿಮೆ ಮಾಡಿದರು.  ದ್ವಿತೀಯಾರ್ಧದ ಕೊನೆಯ ಹಂತದಲ್ಲಿ ಕಾರ್ಲೋಸ್ ಡೆಲ್ಗಡೊ  ರೆಡ್ ಕಾರ್ಡ್ ಗೆ ಗುರಿಯಾದದ್ದು ಒಡಿಶಾದ ಸೋಲಿಗೆ ಪ್ರಮುಖ ಕಾರ್ನವಾಯಿತು. ಹಿಂದಿನ ಪಂದ್ಯಕ್ಕೆ ಹೋಲಿಸಿದರೆ ಒಡಿಶಾ ಉತ್ತಮವಾಗಿಯೇ ಅದಿತ್ತು. ಆದರೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸುವಲ್ಲಿ ವಿಫಲವಾದದ್ದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಯಿತು. 
 
ನಾರ್ತ್ ಈಸ್ಟ್ ಯುನೈಟೆಡ್ ತಂಡ ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ವಿರುದ್ಧ ಡ್ರಾ ಸಾಧಿಸಿತ್ತು. ಒಡಿಶಾ ತಂಡ ಇದಕ್ಕೆ ವಿರುದ್ಧವಾಗಿದೆ, ಮೊದಲ ಪಂದ್ಯದಲ್ಲೇ ಜೇಮ್ಶೆಡ್ಪುರ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಸೋಲನುಭವಿಸಿತ್ತು. ಜೇಮ್ಶೆಡ್ಪುರ ತಂಡ ಒಂದು ಗಂಟೆ ಕಾಲ ಕೇವಲ ಹತ್ತು ಮಂದಿ ಆಟಗಾರರಿಂದ ಕೂಡಿದರೂ ಒಡಿಶಾ ಗೋಲು  ಗಳಿಸುವಲ್ಲಿ ವಿಫಲವಾಗಿತ್ತು. 
 

click me!