
ಕೊಚ್ಚಿ(ನ. 8): ಕೇರಳ ಬ್ಲಾಸ್ಟರ್ಸ್ ಗೆದ್ದೇ ಗೆಲ್ಲುತ್ತೆ ಅನ್ನೋ ಆತ್ಮವಿಶ್ವಾಸದಲ್ಲಿದ್ದ ಪಂಜಪಡಾ ಆರ್ಮಿಗೆ ನಿರಾಸೆಯಾಗಿದೆ. ಒಡಿಶಾ ವಿರುದ್ಧ ನಡೆದ ಪಂದ್ಯದಲ್ಲಿ ಕೇರಳ ಇನ್ನಿಲ್ಲದ ಕಸರತ್ತು ಮಾಡಿದರೂ ತವರಿನಲ್ಲಿ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪಂದ್ಯ ಗೋಲಿಲ್ಲದೆ 0-0 ಅಂತರದಲ್ಲಿ ಡ್ರಾಗೊಂಡಿತು.
ಇದನ್ನೂ ಓದಿ: U 17 ಮಹಿಳಾ ಫುಟ್ಬಾಲ್ ವಿಶ್ವಕಪ್ ಲೋಗೋ ಬಿಡುಗಡೆ
ಮೊದಲೇ ಗಾಯದ ಸಮಸ್ಯೆಯೇ ಸುದ್ದಿಯಾಗಿರುವ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮತ್ತೆ ಮೂವರು ಗಾಯದ ಪಟ್ಟಿಗೆ ಸೇರಿದರು. ಕೇರಳದ ನಾಯಕ ಜೈರೋ ರೊಡ್ರಿಗಸ್ ಆರಂಭದಲ್ಲೆ ಗಾಯಗೊಂಡು ಅಂಗಣದಿಂದ ಹೊರ ನಡೆದಿರುವುದು ಕೇರಳದ ಶಕ್ತಿಯ ಹಿನ್ನಡೆಗೆ ಪ್ರಮುಖ ಕಾರಣವಾಯಿತು. ಈ ಫಲಿತಾಂಶದ ನಂತರ ಒಡಿಶಾ ಎಫ್ ಸಿ ಐದನೇ ಸ್ಥಾನ ತಲುಪಿದರೆ ಕೇರಳ ಎಫ್ ಸಿ ಆರನೇ ಸ್ಥಾನ ತಲುಪಿತು.
ಇದನ್ನೂ ಓದಿ: ಗೆಲುವಿಲ್ಲ, ಸೋಲಿಲ್ಲ; ಸತತ 3ನೇ ಪಂದ್ಯ ಡ್ರಾ ಮಾಡಿಕೊಂಡ ಬೆಂಗಳೂರು FC !
ಪ್ರಥಮಾರ್ಧವೂ ಗೋಳಿಲ್ಲದೆ ಅಂತ್ಯಗೊಂಡಿತ್ತು. ಕೇರಳ ಬ್ಲಾಸ್ಟರ್ಸ್ ತಂಡದ ವಿಚಿತ್ರ ದಾಖಲೆ ಮುಂದುವರಿದಿರುವುದು ಗಮನಾರ್ಹ. ಕಳೆದ ಬಾರಿ ಎಟಿಕೆ ವಿರುದ್ಧ ಮೊದಲ ಪಂದ್ಯದಲ್ಲಿ ಗೆದ್ದ ನಂತರ ಎಟಿಕೆ ಸತತ 14 ಪಂದ್ಯಗಳಲ್ಲಿ ಜಯ ಕಾಣುವಲ್ಲಿ ವಿಫಲವಾಗಿತ್ತು. ಆ ಕಹಿ ನೆನಪು ಕೇರಳ ತಂಡವನ್ನು ಕಾಡದಿರದು. ಶೆಟ್ಟೋರಿ ಪಡೆಗೆ ಈಗ ಹಳೆ ಕಹಿ ನೆನಪು ದೂರವಾಗಬೇಕಾದರೆ ಇಲ್ಲೊಂದು ಜಯ ಗಳಿಸಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ತಂಡವನ್ನು ಮತ್ತೆ ಗಾಯದ ಸಮಸ್ಯೆ ಕಾಡಿರುವುದು ಈ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ.
ಇನ್ನೊಂದೆಡೆ ಒಡಿಶಾ ತಂಡ ಕೇರಳಕ್ಕೆ ವಿರುದ್ಧವಾದ ದಿಕ್ಕಿನಲ್ಲಿದೆ, ಅಂದರೆ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಬಳಿಕ, ಮುಂಬೈ ಸಿಟಿ ಎಫ್ ಸಿ ವಿರುದ್ಧ ನಡೆದ ಪಂದ್ಯದಲ್ಲಿ 4-2 ಗೋಳುಗಳಿಂದ ಗೆದ್ದು ಚೇತರಿಕೆ ಕಂಡಿತ್ತು. ಆ ಆತ್ಮವಿಶ್ವಾಸ ಇಲ್ಲಿ ಪ್ರಯೋಜನಕ್ಕೆ ಬರಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.