ಗೆಲುವಿಲ್ಲ, ಸೋಲಿಲ್ಲ; ಸತತ 3ನೇ ಪಂದ್ಯ ಡ್ರಾ ಮಾಡಿಕೊಂಡ ಬೆಂಗಳೂರು FC !

By Web Desk  |  First Published Nov 3, 2019, 10:04 PM IST

ಭಾರತದ ಫುಟ್ಬಾಲ್ ತಂಡಗಳ ಪೈಕಿ ಬೆಂಗಳೂರು FC ಬಲಿಷ್ಠ ತಂಡ. ಐಎಸ್ಎಲ್ ಟೂರ್ನಿಯಲ್ಲಿ ಬೆಂಗಳೂರು ಹಾಲಿ ಚಾಂಪಿಯನ್. ಆದರೆ ಈ ಬಾರಿ ಮೊದಲ ಗೆಲುವು ಕಾಣದೆ ನಿರಾಸೆಗೊಂಡಿದೆ. ಹಾಗಂತ ಬೆಂಗಳೂರು ಸೋತಿಲ್ಲ. ಜೆಮ್‌ಶೆಡ್‌ಪುರ ಪಂದ್ಯ ಕೂಡ ಡ್ರಾನಲ್ಲಿ ಕೊನೆಗೊಂಡಿದೆ.


ಜೆಮ್‌ಶೆಡ್‌ಪುರ(ನ.03): ಇಂಡಿಯನ್ ಸೂಪರ್ ಲೀಗ್ 2019ರ ಟೂರ್ನಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದ ಹಾಲಿ ಚಾಂಪಿಯನ್ ಬೆಂಗಳೂರು FCಗೆ ಮತ್ತೆ ನಿರಾಸೆಯಾಗಿದೆ. ಸತತ ಮೂರನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಉಕ್ಕಿನ ನಗರಿ ಜೆಮ್‌ಶೆಡ್‌ಪುರದಲ್ಲಿ ಗೆಲುಲಿನ ಖಾತೆ ತೆರೆಯೋ ವಿಶ್ವಾಸದಲ್ಲಿದ್ದ ಬೆಂಗಳೂರು ಮತ್ತೆ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಬೆಂಗಳೂರು ತಂಡದ ಗೋಲ್ ಕೀಪರ್ ಗುರುಪ್ರೀತ್ ಸಂದ್ ಹಾಗೂ ಜೆಮ್‌ಶೆಡ್‌ಪುರ ತಂಡದ ಸುಬ್ರತಾ ಪೌಲ್ ಅದ್ಭುತ ರಕ್ಷಣೆಯಿಂದ ಉಭಯ ತಂಡಗಳು ಗೋಲಿಲ್ಲದೆ ಡ್ರಾ ಮಾಡಿಕೊಂಡಿತು.

ಇದನ್ನೂ ಓದಿ: ISL ಗೋ​ಲಿ​ಲ್ಲದೆ ಡ್ರಾಗೊಂಡ ಬಿಎಫ್‌ಸಿ ಪಂದ್ಯ

Latest Videos

undefined

ಗೋಲಿಲ್ಲದ ಪ್ರಥಮಾರ್ಧ
ಪ್ರಥಮಾರ್ಧದಲ್ಲಿ ಬೆಂಗಳೂರು ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು, ಆದರೆ ಸುಬ್ರತಾ ಪಾಲ್  ಬೆಂಗಳೂರಿನ ಗೋಲು ಗಳಿಕೆಗೆ ಅಡ್ಡಿಯಾದರು. ನಿಜವಾಗಿಯೂ ಬೆಂಗಳೂರು ಎಲ್ಲ ವಿಭಾಗಗಳಲ್ಲಿ ಪ್ರಭುತ್ವ ಸಾಧಿಸಿತ್ತು, ಆದರೆ ಆತಿಥೇಯ ಜೆಮ್‌ಶೆಡ್‌ಪುರ ಎಚ್ಚರಿಕೆಯ ಪ್ರದರ್ಶನ ನೀಡಿ ಹಾಲಿ ಚಾಂಪಿಯನ್ನರ ಮುನ್ನಡೆಗೆ ಅವಕಾಶ ನೀಡಲಿಲ್ಲ. ಮೊದಲು ಜುವಾನಾನ್ ಅವರಿಗೆ ಹೆಡರ್ ಮೂಲಕ ಗೋಲು  ಗಳಿಸುವ ಅವಕಾಶ ಉತ್ತಮವಾಗಿತ್ತು, ಆದರೆ ಸುಬ್ರತಾ ಪಾಲ್ ಉತ್ತಮ ರೀತಿಯಲ್ಲಿ ತಡೆದು ತಂಡಕ್ಕೆ ನೆರವಾದರು. 

ಇದನ್ನೂ ಓದಿ: ಬೆಂಗಳೂರು vs ಗೋವಾ ಪಂದ್ಯ 1-1 ಗೋಲು​ಗ​ಳಲ್ಲಿ ಡ್ರಾ!.

ರಫಾಯೆಲ್ ಅಗಸ್ಟೊ ಅವರ ಹೆಡರ್ ಕೂಡ ಗೋಲಾಗಿ ಬದಲಾಗಲಿಲ್ಲ. ಹರ್ಮಾನ್‌ಜೋತ್ ಖಬ್ರಾ ಅವರಿಗೆ ಸಿಕ್ಕ ಅವಕಾಶ ಬೆಂಗಳೂರು ತಂಡದಲ್ಲಿ ಬೇರೆ ಯಾರಿಗೂ ಸಿಗಲಿಲ್ಲ. ಕೇವಲ ಆರು ಅಡಿಗಳ ಅಂತರದಲ್ಲಿ ಚೆಂಡನ್ನು ನಿಯಂತ್ರಿಸಿ ಸುಲಭವಾಗಿ ಗೋಲು ಗಳಿಸಬಹುದಿತ್ತು, ಅವರು ಗೋಲ್ ಬಾಕ್ಸ್ ಗೆ ಗುರಿ ಇಟ್ಟಿದ್ದರೂ ಪಾಲ್ ಅವರ ಕೈ ಸೇರಿತ್ತು. ಜೇಮ್ಶೆಡ್ಪುರ ಎಫ್ ಸಿ ತಂಡಕ್ಕೆ ಉತ್ತಮವಾಗಿ ಅವಕಾಶ ಸಿಕ್ಕಿದ್ದು ಸೆರ್ಗಿಯೋ ಕ್ಯಾಸ್ಟಲ್ ಮೂಲಕ, ಅವರು ಬಹಳ ದೂರದಿಂದ  ಗೋಲ್ ಬಾಕ್ಸ್ ಗೆ ಗುರಿ ಇಟ್ಟು ತುಳಿದ ಚೆಂಡು ಬೆಂಗಳೂರು ಗೋಲ್ ಕೀಪರ್ ಗುರ್ಪ್ರೀತ್ ಸಿಂಗ್ ಸಂಧೂ ಅವರನ್ನು ವಂಚಿಸಿತ್ತು, ಆದರೆ ಬಾಕ್ಸ್ ನ ಅಂಚಿಗೆ ತಾಗಿ ಹೊರನಡೆಯಿತು. 

ಮೊದಲ ಪಂದ್ಯದಲ್ಲಿ ಬೆಂಗಳೂರು ತಂಡ,  ನಾರ್ಥ್ ಈಸ್ಟ್ ವಿರುದ್ದ ಗೋಲಿಲ್ಲದೆ  ಡ್ರಾ ಸಾಧಿಸಿದರೆ, ಗೋವಾ ವಿರುದ್ಧದ ಎರಡನೇ ಪಂದ್ಯ ದಲ್ಲಿ ಅಂತಿಮ ಕ್ಷಣದಲ್ಲಿ ಗೋಲು ನೀಡಿ ಗೆಲುವಿನಿಂದ ವಂಚಿತವಾಗಿತ್ತು.  ಇದೀಗ ಮೂರನೇ ಪಂದ್ಯದಲ್ಲಿ ಬೆಂಗಳೂರು, ಜೆಮ್‌ಶೆಡ್‌ಪುರ ವಿರುದ್ದ ಸೋಲು ಕಂಡಿತು. 
 

click me!