ಚೆನ್ನೈಯನ್ ಎಫ್‌ಸಿ ತಂಡ ಪ್ರಸಕ್ತ ವರ್ಷದಲ್ಲೂ ನಿರೀಕ್ಷಿತ ಹೋರಾಟ ನೀಡಲು ಎಡವುತ್ತಿದೆ. ತಂಡಕ್ಕೆ ಚಾಂಪಿಯನ್ ಪಟ್ಟ ದೊರಕಿಸಿಕೊಟ್ಟಿದ್ದ ಕೋಚ್ ಜಾನ್ ಗ್ರೆಗೋರಿ ಬದಲು ಮಾಡಿ ಚೆನ್ನೈಗೆ ಫಲಿತಾಂಶ ಬದಲಿಸಲು ಸಾಧ್ಯವಾಗಲಿಲ್ಲ.
ಜೆಮ್‌ಶೆಡ್‌ಪುರ(ಡಿ.09) : ಚೆನ್ನೈಯಿನ್ ಎಫ್ ಸಿ ಪರ ನಿರೀಜುಸ್ ವಾಲ್ಸ್ಕಿಸ್ (26ನೇ ನಿಮಿಷ) ಹಾಗೂ ಜೆಮ್ಶೆಡ್ಪುರ ಎಫ್ ಸಿ ಪರ ಐಸಾಕ್ ವಾನ್ಮಲ್ಸೌಮಾ (89ನೇ ನಿಮಿಷ) ಗೋಲು ಗಳಿಸುವುದರೊಂದಿಗೆ ಇಂಡಿಯನ್ ಸೂಪರ್ ಲೀಗ್ ನ 35ನೇ ಪಂದ್ಯ1-1 ಗೋಲಿನಿಂದ ಡ್ರಾ ಗೊಂಡಿತು.
ಇದನ್ನೂ ಓದಿ: ISL 2019: ಮುತ್ತಿನ ನಗರಿಯಲ್ಲಿ ಮುಗ್ಗರಿಸಿದ ಹೈದರಾಬಾದ್
ಪ್ರಧಾನ ಕೋಚ್ ಬದಲಾವಣೆ ಮಾಡಿದರೂ ಚೆನ್ನೈ ತಂಡಕ್ಕೆ ಗೆಲುವು ಸಿಗಲಿಲ್ಲ. ಜಾನ್ ಗ್ರೆಗೊರಿ ಬದಲಿಗೆ ಓವೆನ್ ಕೊಯ್ಲ್ ಚೆನ್ನೈ ತಂಡದ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹೊಸ ಕೋಚ್ ಬಂದ ಮೊದಲ ಪಂದ್ಯದಲ್ಲಿ ಗೆಲುವು ಕಾಣಲಿಲ್ಲ. ಟಾಟಾ ಪಡೆಯನ್ನು ಮನೆಯಂಗಣದಲ್ಲಿ ಮತ್ತೊಮ್ಮೆ ಸೋಲಿಸಲಾಗಲಿಲ್ಲ.
ಇದನ್ನೂ ಓದಿ: ISL 2019: ನಾರ್ತ್ ಈಸ್ಟ್ ವಿರುದ್ಧ ಎಟಿಕೆಗೆ ಭರ್ಜರಿ ಗೆಲುವು; ಅಗ್ರಸ್ಥಾನಕ್ಕೆ ಲಗ್ಗೆ!.
26ನೇ ನಿಮಿಷದಲ್ಲಿ ನೆರಿಜುಸ್ ವಾಲ್ಸ್ಕಿಸ್ ಗಳಿಸಿದ ಗೋಲಿನಿಂದ ಚೆನ್ನೈಯಿನ್ ಎಫ್ ಸಿ ತಂಡ ಜೆಮ್ಶೆಡ್ಪುರ ಎಫ್ ಸಿ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ ಮೇಲುಗೈ ಸಾಧಿಸಿತು. ಟಾಟಾ ಪಡೆ ಈ ಬಾರಿ ಉತ್ತಮ ರೀತಿಯಲ್ಲಿ ಪೈಪೋಟಿ ನೀಡುವಲ್ಲಿ ವಿಫಲವಾಯಿತು. ಆ ನಂತರ ಪಂದ್ಯ ಹೆಚ್ಚು ಪೈಪೋಟಿಯಿಂದ ನಡೆಯಲಿಲ್ಲ.
ಜೆಮ್ಶೆಡ್ಪುರ ತಂಡ ಆಕ್ರಮಣಕಾರಿ ಆಟಕ್ಕೆ ಮನಸ್ಸು ಮಾಡಿದರೂ ಅಲ್ಲಿ ಸಮಬಲಕ್ಕೆ ಅವಕಾಶ ಇರಲಿಲ್ಲ. ಹೊಸ ಕೋಚ್ ಅವರ ಸ್ಪೂರ್ತಿಯ ಮಾತು ಹಾಗೂ ಸಲಹೆಗೆ ತಕ್ಕ ಬೆಲೆ ನೀಡಿದ ಚೆನ್ನೈಯಿನ್ ತಂಡಕ್ಕೆ ಯಶಸ್ಸು. ರಫಾಯೆಲ್ ಕ್ರಿವೆಲ್ಲರೋ ನೀಡಿದ ಉತ್ತಮ ಪಾಸ್ ತಂಡಕ್ಕೆ ಮುನ್ನಡೆಗೆ ಬೇಕಾಗಿರುವ ಗೋಲನ್ನು ನೀಡಿತು. ಅಂತಿಮ ಹಂತದಲ್ಲಿ ಟಾಟಾ ಪಡೆ ಸಿಡಿದ ಗೋಲಿನಿಂದ 1-1 ಅಂತರದಲ್ಲಿ ಪಂದ್ಯ ಡ್ರಾಗೊಂಡಿತು.