ISL 2019: ನಾರ್ತ್ ಈಸ್ಟ್ ವಿರುದ್ಧ ಎಟಿಕೆಗೆ ಭರ್ಜರಿ ಗೆಲುವು; ಅಗ್ರಸ್ಥಾನಕ್ಕೆ ಲಗ್ಗೆ!

By Web DeskFirst Published Dec 7, 2019, 10:17 PM IST
Highlights

ನಾರ್ತ್ ಈಸ್ಟ್ ವಿರುದ್ಧದ ಭರ್ಜರಿ ಗೆಲುವಿನ ಮೂಲಕ ಮಾಜಿ ಚಾಂಪಿಯನ್ ಎಟಿಕೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ. ಆದರೆ ಈ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ನಾರ್ತ್ ಈಸ್ಟ್ ಮೊದಲ ಆಘಾತ ಅನುಭವಿಸಿದೆ.

ಗುವಾಹಟಿ(ಡಿ.07):  ಡೇವಿಡ್ ವಿಲ್ಲಿಮ್ಸ್ (11ನೇ ನಿಮಿಷ  ) ಹಾಗೂ  ರಾಯ್ ಕೃಷ್ಣ (35 ಮತ್ತು  90ನೇ  ನಿಮಿಷ) ಗಳಿಸಿದ ಅದ್ಭುತ ಗೋಲುಗಳ ನೆರವಿನಿಂದ ಎಟಿಕೆ ಭರ್ಜರಿ ಗೆಲುವು ದಾಖಲಿಸಿದೆ.  ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ  3-0 ಅಂತರದಲ್ಲಿ ಜಯ ಸಾಧಿಸಿದ ಮಾಜಿ ಚಾಂಪಿಯನ್ ಎಟಿಕೆ  ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಗ್ರ ಸ್ಥಾನಕ್ಕೇರಿತು.  ಆತಿಥೇಯ ನಾರ್ತ್ ಈಸ್ಟ್  ಈ ಸೋಲಿನೊಂದಿಗೆ ಲೀಗ್ ನಲ್ಲಿ ಮೊದಲ ಆಘಾತ ಅನುಭವಿಸಿತು. 

ಇದನ್ನೂ ಓದಿ: ISL 2019: ಗೆಲುವಿನ ನಾಗಾಲೋಟ ಮುಂದುವರಿಸಿದ ಬೆಂಗಳೂರು FC!

ಡೇವಿಡ್ ವಿಲ್ಲಿಮ್ಸ್ (11ನೇ ನಿಮಿಷ  ) ಹಾಗೂ  ರಾಯ್ ಕೃಷ್ಣ (35ನೇ  ನಿಮಿಷ) ಅವರು ಎಂದಿನಂತೆ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಟ ಪ್ರದರ್ಶಿಸುವುದರೊನಿಗೆ  ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧದ  ಪಂದ್ಯದ ಪ್ರಥಮಾರ್ಧದಲ್ಲಿ 2-0 ಗೋಲುಗಳ ಅಂತರದಲ್ಲಿ ಮೇಲುಗೈ ಸಾಧಿಸಿತು. 

ಇತ್ತ ನಾರ್ತ್ ಈಸ್ಟ್ ಯುನೈಟೆಡ್ ತಂಡಕ್ಕೆ ಉತ್ತಮ ಅವಕಾಶ ಸಿಕ್ಕಿತ್ತು. ಆದರೆ ಅಸ್ಯಾಮೋ ಗ್ಯಾನ್ ಸಿಕ್ಕ ಅವಕಾಶವನ್ನು  ಕೈ ಚೆಲ್ಲಿದರು. ಅಲ್ಲದೆ  ಗಾಯಗೊಂಡು ಅಂಗಣದಿಂದ ಹೊರ ನಡೆದಿರುವುದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಯಿತು. ಗ್ಯಾನ್ ಅಂತಾರಾಷ್ಟ್ರೀಯ ಆಟಗಾರ, ಅವರ ಅನುಪಸ್ಥಿಯನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡ ಎಟಿಕೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು.

ISL 2019: ಕೇರಳ ಬ್ಲಾಸ್ಟರ್ಸ್ vs ಮುಂಬೈ ಸಿಟಿ ಪಂದ್ಯ ಡ್ರಾ!

ಪ್ರಬೀರ್ ದಾಸ್ ಚೆಂಡನ್ನು ನಿಯಂತ್ರಿಸಬಹುದಾಗಿತ್ತು, ಆದರೆ ಎಡು ಗಾರ್ಸಿಯಾ  ಬಾಕ್ಸ್ ಸಮೀಪದಲ್ಲಿದ್ದ ಡೇವಿಡ್ ವಿಲ್ಲಿಮ್ಸ್ ಗೆ  ನೀಡಿದರು.  ವಿಲಿಯಮ್ಸ್ ಯಾವುದೇ ತಪ್ಪು ಮಾಡದೆ ಹೆಡರ್ ಮೂಲಕ ಗೋಲು ಗಳಿಸಿದರು.  ಮೊದಲು ಗ್ಯಾನ್ ಅವರನ್ನು ಕಳೆದುಕೊಂಡ ನಾರ್ತ್ ಈಸ್ಟ್‌ಗೆ  ಗಾಯದ ಮೇಲೆ ಬರೆ ಹಾಕಿದಂತಾಯಿತು.  ಕೆಲವೇ ಕ್ಷಣಗಳಲ್ಲಿ ಪಂದ್ಯದ ಗತಿಯೇ ಬದಲಾಯಿತು.  11ನೇ ನಿಮಿಷದಲ್ಲಿ ದಾಖಲಾದ ಈ ಗೋಲು ಎಟಿಕೆ ತಂಡಕ್ಕೆ ಮುನ್ನಡೆ ತಂದು ಕೊಟ್ಟಿತು.  35ನೇ  ನಿಮಿಷದಲ್ಲಿ ರಾಯ್ ಕೃಷ್ಣ ಅವರು ಎರಡನೇ ಗೋಲು ಗಳಿಸುವ ಮೂಲಕ ಎಟಿಕೆ ತನ್ನ ಜಯಕ್ಕೆ ಅಗತ್ಯ ಇರುವ ವೇದಿಕೆ ಹಾಕಿಕೊಂಡಿತು. 

click me!