ISL 2019: ಮುತ್ತಿನ ನಗರಿಯಲ್ಲಿ ಮುಗ್ಗರಿಸಿದ ಹೈದರಾಬಾದ್, ಗೋವಾಗೆ ಗೆಲುವು!

By Suvarna News  |  First Published Dec 8, 2019, 10:36 PM IST

ತವರಿನಲ್ಲಿ ಗೆಲುವು ಸಾಧಿಸೋ ಹೈದರಾಬಾದ್ ಲೆಕ್ಕಾಚಾರ ಕೈಗೂಡಲಿಲ್ಲ. ಗೋವಾ ಎಫ್‌ಸಿ ವಿರುದ್ದ ಕಠಿಣ ಹೋರಾಟ ನೀಡಿದ ಹೈದರಾಬಾದ್ ಗೆಲವು ಕಾಣದೇ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 


ಹೈದರಾಬಾದ್(ಡಿ.08): ಬದಲಿ ಆಟಗಾರನಾಗಿ ಬಂದು 68ನೇ ನಿಮಿಷದಲ್ಲಿ ಮನ್ವಿರ್ ಸಿಂಗ್ ಗಳಿಸಿದ ಏಕೈಕ ಗೋಲಿನಿಂದ ಮುತ್ತಿನ ನಗರಿಯಲ್ಲಿ ಗೋವಾ FC ಗೆಲುವಿ ನಗೆ ಬೀರಿದೆ. ತವರಿನ ಹೈದರಾಬಾದ್ ವಿರುದ್ಧ 1-0 ಅಂತರದಲ್ಲಿ ಗೆಲುವು ಸಾಧಿಸಿದ ಗೋವಾ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.  ಆದರೆ ಹೈದರಾಬಾದ್ ಎಫ್ ಸಿ  ತನ್ನ ಸೋಲಿನ ಹಾದಿಯನ್ನು ಮುಂದುವರಿಸಿ ಅಂಕ ಪಟ್ಟಿಯಲ್ಲಿ ಅನಿವಾರ್ಯವಾಗಿ ಕೊನೆಯ ಸ್ಥಾನದಲ್ಲಿ ಉಳಿಯಿತು.

ಇದನ್ನೂ ಓದಿ: ISL 2019: ಕೇರಳ ಬ್ಲಾಸ್ಟರ್ಸ್ vs ಮುಂಬೈ ಸಿಟಿ ಪಂದ್ಯ ಡ್ರಾ!

Tap to resize

Latest Videos

ಹೈದರಾಬಾದ್ ಪ್ರಥಮಾರ್ಧದಲ್ಲಿ ಗೋವಾಕ್ಕೆ ಗೋಲು ಗಳಿಸಲು ಅವಕಾಶ ಕೊಟ್ಟಿಲ್ಲ ಅಂದರೆ ಹೈದರಾಬಾದ್ ಪಂದ್ಯದ ಮೇಲೆ ಉತ್ತಮ ರೀತಿಯಲ್ಲಿ ಹಿಡಿತ ಸಾಧಿಸಿತ್ತು ಎಂದೇ ಅರ್ಥ.  ಪಂದ್ಯದ ಆರಂಭದಲ್ಲೇ  ಹೈದರಾಬಾದ್ ಗೋಲು ಗಳಿಸುವ ಅವಕಾಶವನ್ನು ಕಳೆದುಕೊಂಡಿತು.  ಮಾರ್ಕೊ ಸ್ಟ್ಯಾಂಕೋವಿಕ್ ತಮಗೆ ದೊರೆತ ಪಾಸ್ ಅನ್ನು  ಕಾರ್ನರ್ ವಿಭಾಗಕ್ಕೆ ತಳ್ಳಿದರು. ಆದರೆ ಅದು ತಡೆಯಲ್ಪಟ್ಟಿತು. 

ಇದನ್ನೂ ಓದಿ: ISL 2019: ಚೆನ್ನೈಯನ್ FCಗೆ ಸೂಪರ್ ಗೆಲುವು!

ಮಾರ್ಸೆಲೋ ಪೆರೇರಾ  ಚೆಂಡನ್ನು ರಫಾಯೆಲ್ ಲೋಪೆಜ್ ಗೊಮೆಜ್ ಅವರಿಗೆ ಗೋಲು ಗಳಿಸಬಹುದಾಗಿತ್ತು. ಆದರೆ ಆ ಅವಕಾಶವನ್ನು ಹೈದರಾಬಾದ್ ಕೈ ಚೆಲ್ಲಿಕೊಂಡಿತು. ಆ ನಂತರ ಗೋವಾ ಎಚ್ಚರಿಕೆಯ ಆಟ ಪ್ರದರ್ಶಿಸಿತು. ತನ್ನ ನೈಜ ಆಕ್ರಮಣಕಾರಿ ಆಟಕ್ಕೆ ಮನ ಮಾಡದೆ, ಡಿಫೆನ್ಸ್ ಕಡೆಗೆ ಹೆಚ್ಚಿನ ಗಮನ ಹರಿಸಿತು. ಗೋವಾ ತಂಡದ ಗೋಲ್ ಕೀಪರ್ ಮೊಹಮ್ಮದ್ ನವಾಜ್ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದು ಗೋವಾ ತಂಡದ ಪ್ರಥಮಾರ್ಧದ ಪ್ರಭುತ್ವಕ್ಕೆ ಕಾರಣವಾಯಿತು. ಗೋಲಾಗದ ಕಾರಣ ದ್ವಿತೀಯಾರ್ಧಕ್ಕೆ ಕುತೂಹಲ ಬದಲಾಯಿತು. ದ್ವತಿಯಾರ್ಧದಲ್ಲಿ ದಾಖಲಾದ1 ಗೋಲಿನಿಂದ ಗೋವಾ ಜಯಬೇರಿ ಬಾರಿಸಿತು. 
 

click me!