ISL ಫುಟ್ಬಾಲ್ ಟೂರ್ನಿ 2019ರ ಆವೃತ್ತಿಯಲ್ಲಿ ಚೆನ್ನೈಯನ್ fc ಮೊದಲ ಗೆಲವು ದಾಖಲಿಸಿದೆ. ಹೈದರಾಬಾದ್ ವಿರುದ್ಧ ಅದ್ಬುತ ಪ್ರದರ್ಶನ ನೀಡೋ ಮೂಲಕ ಚೆನ್ನೈ ನಿರೀಕ್ಷೆಗಳು ಗರಿಗೆದರಿದೆ.
ಚೆನ್ನೈ(ನ.25): ISL ಫುಟ್ಬಾಲ್ ಟೂರ್ನಿ ಮತ್ತೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದೆ. ಹೈದರಾಬಾದ್ FC ವಿರುದ್ದ ನಡೆದ ಪಂದ್ಯದಲ್ಲಿ ಚೆನ್ನೈಯನ್ FC ರೋಚಕ ಗೆಲುವು ಸಾಧಿಸಿದೆ. 2-1 ಅಂತರದಲ್ಲಿ ಗೆದ್ದ ಚೆನ್ನೈಯನ್ ಮೊದಲ ಗೆಲುವಿನ ಸಿಹಿ ಕಂಡಿದೆ.
ಇದನ್ನೂ ಓದಿ: ISL 2019: ಗೆಲುವಿನ ನಾಗಾಲೋಟ ಮುಂದುವರಿಸಿದ ಬೆಂಗಳೂರು FC
undefined
ಚೆನ್ನೈ ತಂಡ ಪ್ರಥಮಾರ್ಧದ ಆರಂಭದಿಂದ ಅಂತ್ಯದ ವರೆಗೂ ಹಲವು ಅವಕಾಶಗಳನ್ನು ಪಡೆದಿತ್ತು, ಆದರೆ ಅದೃಷ್ಟ ಚೆನ್ನೈ ತಂಡಕ್ಕೆ ಇರಲಿಲ್ಲ. ತಪ್ಪಿದ ಗುರಿ, ಆಫ್ ಸೈಡ್ ಗೋಲ್ ಜತೆಯಲ್ಲಿ ಹೈದರಾಬಾದ್ ನಾಯಕ ಕಮಲ್ಜಿತ್ ಸಿಂಗ್ ಕೈ ಚಳಕ ಗೋಲಿಗೆ ಅಡ್ಡಿಯಾಯಿತು. ಗೋಲಿಲ್ಲದಿದ್ದರೂ ಪಂದ್ಯದಲ್ಲಿ ಕುತೂಹಲಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಚೆನ್ನೈ ತಂಡ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮನ ಮಾಡಿತ್ತು.
ಇದನ್ನೂ ಓದಿ: ISL 2019: ತವರಿನಲ್ಲಿ ಗೆಲವಿನ ಖಾತೆ ತೆರೆದ ಬೆಂಗಳೂರು FC
ಅದೇ ರೀತಿ ಸಾಕಷ್ಟು ಅವಕಾಶಗಳನ್ನು ಗಳಿಸಿತ್ತು. ಎಲ್ಲಿಯೂ ಗೋಲಿಗೆ ಮಾತ್ರ ಅವಕಾಶ ಇರಲಿಲ್ಲ. 25ನೇ ನಿಮಿಷದಲ್ಲಿ ಲಾಲಿಯಂಜುವಲ ಚಾಂಗ್ತೆ ಹೆಡರ್ ಮೂಲಕ ಸುಲಭವಾಗಿ ಗೋಲು ಗಳಿಸಬಹುದಾಗಿತ್ತು. ಆದರೆ ಅದೃಷ್ಟ ಚೆನ್ನೈ ಪರ ಇರಲಿಲ್ಲ. ಹೈದರಬಾದ್ ಪರ ನಾಯಕ ಕಮಲ್ಜಿತ್ ಸಿಂಗ್ ಪ್ರಥಮಾರ್ಧದ ಹೀರೋ ಎನಿಸಿದರು. 32ನೇ ನಿಮಿಷದಲ್ಲಿ ಮ್ಯಾಥ್ಯೂ ಕೀಳ್ಗಲ್ಲೊನ್ ಚೆನ್ನೈಯಿನ್ ಎಫ್ ಸಿ ಗೋಲು ಗಳಿಸಿಯೇ ಬಿಟ್ಟಿತು ಎಂದು ಎಲ್ಲರೂ ಊಹಿಸಿದ್ದರು,.ಆದರೆ ಕಮಲ್ಜಿತ್ ಸಿಂಗ್ ಆತಿಥೇಯರ ಮುನ್ನಡೆಗೆ ಅವಕಾಶ ಕೊಡಲಿಲ್ಲ.
ಬದಲಿ ಆಟಗಾರ ಶೆಂಬ್ರಿ (90+) ಹಾಗೂ ವಾಲ್ಸ್ಕಿಸ್ (95ನೇ ನಿಮಿಷ) ಗಳಿಸಿದ ಗೋಲಿನಿಂದ ಚೆನ್ನೈಯಿನ್ ಮೊದಲ ಗೋಲು ಹಾಗೂ ಮೊದಲ ಜಯ ಗಳಿಸಿತು. ಉತ್ತಮ ಪೈಪೋಟಿ ನೀಡಿದ ಹೈದರಬಾದ್ ಪರ ಕೀಳ್ಗಲ್ಲೊನ್ (93ನೇ ನಿಮಿಷ) ಗಳಿಸಿದ ಗೋಲು ಮೊದಲಿಗೆ ಪಂದ್ಯವನ್ನು ಸಮಬಲಗೊಳಿಸಿತು, ನಂತರ ಸೋಲಿನ ಅಂತರವನ್ನು ಕಡಿಮೆ ಮಾಡಿತು. ಈ ಋತುವಿನಲ್ಲೇ ಇದುವರೆಗಿನ ಅತ್ಯಂತ ರೋಚಕ ಪಂದ್ಯ ಇದಾಗಿತ್ತು.